ಸುದ್ದಿಒನ್. ಚಿತ್ರದುರ್ಗ. ನ.16 : ನೂತನ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಯಡಿಯೂರಪ್ಪ ಅವರು ಬುಧವಾರ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ನವೆಂಬರ್ 16 ರಂದು ಚಿತ್ರದುರ್ಗ ಜಿಲ್ಲಾ ಪ್ರವಾಸ ಹಮ್ಮಿಕೊಂಡಿದ್ದಾರೆ.
ನವೆಂಬರ್ 16 ರಂದು ಬೆಳಿಗ್ಗೆ 8:30 ಕ್ಕೆ ಬೆಂಗಳೂರುನಿಂದ ಹೊರಟು ಚಿತ್ರದುರ್ಗಕ್ಕೆ ಆಗಮಿಸುವರು.
ಜಿಲ್ಲೆಯಾದ್ಯಂತ ಅವರ ಪ್ರವಾಸದ ವಿವರ ಈ ಕೆಳಗಿನಂತಿದೆ.
ಬೆಳಿಗ್ಗೆ 11 ಗಂಟೆಗೆ : ಮಾಜಿ ಶಾಸಕ ಜಿ ಹೆಚ್ ತಿಪ್ಪಾರೆಡ್ಡಿಯವರ ಮನೆಗೆ ಭೇಟಿ.
ಬೆಳಿಗ್ಗೆ 11 : 30 ಕ್ಕೆ ಶ್ರೀ ಮುರುಘ ರಾಜೇಂದ್ರ ಮಠಕ್ಕೆ ಭೇಟಿ,
ಬೆಳಿಗ್ಗೆ 11:45 ಕ್ಕೆ ಶ್ರೀ ಕೃಷ್ಣ ಯಾದವನಂದ ಮಹಾ ಸಂಸ್ಥಾನ ಮಠಕ್ಕೆ ಭೇಟಿ,
ಮಧ್ಯಾನ್ಹ 12 ಕ್ಕೆ ಶ್ರೀ ಜಗದ್ಗುರು ಮಾದಾರ ಚನ್ನಯ್ಯ ಮಠಕ್ಕೆ ಬೇಟಿ.
ಮಧ್ಯಾನ್ಹ 12 : 30 ಕ್ಕೆ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಸಂಸ್ಥಾನ ಭೋವಿ ಗುರುಪೀಠಕ್ಕೆ ಭೇಟಿ
ಮಧ್ಯಾನ್ಹ 1 ಗಂಟೆಗೆ ಶ್ರೀ ಸಿರಿಗೆರೆ ಬಹನ್ಮಠಕ್ಕೆ ಭೇಟಿ.

ಮಧ್ಯಾನ್ಹ 3:30 ಕ್ಕೆ ಶ್ರೀ ಚಿನ್ಮೂಲಾದ್ರಿ ಭಗೀರಥ ಗುರುಪೀಠ, ಹೊಸದುರ್ಗ,
ಮಧ್ಯಾನ್ಹ 4:00 ಕ್ಕೆ ಶ್ರೀ ತರಳಬಾಳು ಬೃಹನ್ಮಠ ಶಾಖ ಮಠ, ಸಾಣೆಹಳ್ಳಿ ಹೊಸದುರ್ಗ,
ಮಧ್ಯಾನ್ಹ 4:30 ಕ್ಕೆ ಶ್ರೀ ಜಗದ್ಗುರು ಕುಂಚಿಟಿಗ ಮಹಾಸಂಸ್ಥಾನ, ಹೊಸದುರ್ಗ,
ಮಧ್ಯಾನ್ಹ 5 : 15 ಕ್ಕೆ ಶ್ರೀ ಕನಕ ಗುರು ಪೀಠ ಶಾಖಾಮಠ, ಹೊಸದುರ್ಗ
ಈ ಎಲ್ಲಾ ಕಾರ್ಯಕ್ರಮಗಳು ಮುಗಿದ ನಂತರ
ಹೊಸದುರ್ಗ – ಹುಳಿಯಾರು – ಶಿರಾ ಮಾರ್ಗವಾಗಿ ಕೇಂದ್ರ ಸ್ಥಾನ ಬೆಂಗಳೂರಿಗೆ 8:30 ಕ್ಕೆ ತೆರಳುವರು ಎಂದು ರಾಜ್ಯಾಧ್ಯಕ್ಷರ ಆಪ್ತ ಕಾರ್ಯದರ್ಶಿ ಸಿದ್ದು ಪುಂಡಿಕಾಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.













