Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಧರ್ಮಸ್ಥಳದಲ್ಲಿ ಯೂಟ್ಯೂಬರ್ಸ್ ಮೇಲೆ ಹಲ್ಲೆ : ಪ್ರತ್ಯಕ್ಷವಾಗಿ ನೋಡಿದ ಬಿಗ್ ಬಾಸ್ ರಜತ್ ಹೇಳಿದ್ದೇನು..?

---Advertisement---

 

ದಕ್ಷಿಣ ಕನ್ನಡ: ಧರ್ಮಸ್ಥಳದಲ್ಲಿ ಅಸ್ಥಿ ಪಂಜರ ಹುಡುಕಾಟದ ನಡುವೆ ನಿನ್ನೆ ಒಂದು ದೊಡ್ಡ ಗಲಾಟೆಯೇ ನಡೆದಿದೆ. ಯೂಟ್ಯೂಬರ್ಸ್ ಗಳ ಮೇಲೆ ಹಲ್ಲೆ ನಡೆದಿದ್ದು, ದೊಡ್ಡ ಅವಾಂತರವನ್ನೇ ಸೃಷ್ಟಿ ಮಾಡಿದೆ. ಈ ಸಂಬಂಧ ಬಿಗ್ ಬಾಸ್ ರಜತ್ ಮಾತನಾಡಿದ್ದಾರೆ. ಅಲ್ಲಿ ನಡೆದ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ಧರ್ಮಸ್ಥಳ ಕ್ಷೇತ್ರದ ಬಗ್ಗೆ ಮಾತನಾಡಿದ್ದಾರೆಂದು ಆರೋಪಿಸಿ ಹಲ್ಲೆ‌ ಮಾಡಲಾಗಿದೆ. ನಾನು ಸ್ಥಳದಲ್ಲಿಯೇ ಇದ್ದೆ ಅನ್ನೋ ವಿಷ್ಯಕ್ಕೆ ಗಲಾಟೆಯಾಗಿದೆ. ಒಮ್ನಿ, ಮಾರುತಿ ಕಾರು, ಬೈಕ್ ಗಳಲ್ಲಿ ಬಂದು ಹಲ್ಲೆ‌ ಮಾಡಿದ್ದಾರೆ. ಮೂವರ ಮೇಲೆ ಹಲ್ಲೆ‌ಮಾಡಿ, ಕೆಟ್ಟ ರೀತಿಯಲ್ಲಿ ವರ್ತಿಸಿದರು ಎಂದು ರಜತ್ ಹೇಳಿದ್ದಾರೆ.

ಮೊದಲಿಗೆ ಮಾತಾಡ್ತಾ ಇದ್ದರು. ಆಮೇಲೆ ಇದ್ದಕ್ಕಿದ್ದ ಹಾಗೇ ಹಲ್ಲೆ ಮಾಡೋದಕ್ಕೆ ಶುರು ಮಾಡುದ್ರು. ಯಾಕೆ ಅಂತ ಕೇಳಿದ್ರೆ ಕ್ಷೇತ್ರದ ಬಗ್ಗೆ ಮಾತನಾಡಿದ್ರು ಅಂತ ಹೇಳ್ತಾರೆ. ತುಂಬಾ ಹೊಡೆದಿದ್ದರು. ಆಮೇಲೆ ನನ್ನ ಕಾರಿನಲ್ಲಿ ಕೂರಿಸಿಕೊಂಡು ಮೊದಲು ಇಲ್ಲಿಂದ ಹೋಗಿ ಅಂತ ಹೇಳಿದೆವು. ನಾನು ನೋಡಿದ ಹಾಗೇ ಅಲ್ಲಿ ಯಾರೂ ಕೂಡ ಕ್ಷೇತ್ರದ ಬಗ್ಗೆ ಮಾತನಾಡಲೇ ಇಲ್ಲ. ಆದ್ರೆ ಕ್ಷೇತ್ರದ ಬಗ್ಗೆ ಮಾತನಾಡಿದರು ಅಂತ ಹಲ್ಲೆ ಮಾಡಿದರು. ನಾವೆಲ್ಲಾ ಇದ್ದಾಗಲೇ ಆ ರೀತಿ ಮಾಡ್ತಾರೆ ಅಂದ್ರೆ ಇನ್ನು ರಾತ್ರಿ ಸಮಯದಲ್ಲಿ ಅಲ್ಲಿ ಇನ್ನು ಏನೆಲ್ಲಾ ಆಗಿರಬಹುದು. ಇದು ಒಳ್ಳೆಯ ಬೆಳವಣಿಗೆ ಅಲ್ವೇ ಅಲ್ಲ. ಪ್ರೆಸ್ ನವರ ಮೇಲೆ ಈ ರೀತಿ ಹಲ್ಲೆ‌ಮಾಡಬಾರದು ಎಂದು ರಜತ್ ಹೇಳಿದ್ದಾರೆ. ಯೂಟ್ಯೂಬರ್ಸ್ ಕೂಡ ಕ್ಷೇತ್ರದ ಬಗ್ಗೆ ಮಾತನಾಡಿಲ್ಲ ಎಂಬುದನ್ನು ಕ್ಲಿಯರ್ ಮಾಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment