ಬೆಂಗಳೂರು: ಗೋಕಾಕ್ ಚಳುವಳಿಯ ಸ್ಮರಣಾರ್ಥ ಉದ್ಯಾನವನದಲ್ಲಿ 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ ಕನ್ನಡ ಧ್ವಜಾರೋಹಣ ಮಾಡಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಮತ್ತು ಮೇರುನಟ ಡಾ.ರಾಜ್ ಕುಮಾರ್ ಪ್ರತಿಮೆಗೆ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಸಚಿವ ಡಾ. ಸಿ.ಎನ್.ಅಶ್ವಥ್ ನಾರಾಯಣ್, ಕನ್ನಡ ಭಾಷೆಗೆ 2500 ವರ್ಷಗಳ ಇತಿಹಾಸವಿದೆ. ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. ಅನ್ಯ ಭಾಷಿಗರು ಕನ್ನಡ ಕಲಿಯಬೇಕು. ನಮ್ಮ ಭಾಷೆ ಸರಳ, ಸುಂದರ ಮತ್ತು ಸಂಸ್ಕೃತಿವುಳ್ಳ ಭಾಷೆಯಾಗಿದೆ. ಹೀಗಾಗಿ ನಮ್ಮ ಕನ್ನಡ ಭಾಷೆಯನ್ನ ಕಲಿಯುವುದು ಸುಲಭವಾಗಿದೆ.
ಕನ್ನಡ ಭಾಷೆ ಉಳಿಸಿ, ಬೆಳಸುವುದಕ್ಕೆ ಸರ್ಕಾರ ಬದ್ಧವಾಗಿದೆ. ಅನ್ಯ ಭಾಷೆಯವರು ಕನ್ನಡವನ್ನ ಕಲಿಯಲೇಬೇಕು ಎಂದು ಸಚಿವ ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.