in

ಸಿಟಿ ರವಿಗೆ ಹೊಸ ಬಿರುದು ನೀಡಿದ ಕಾಂಗ್ರೆಸ್..!

suddione whatsapp group join

ಬೆಂಗಳೂರು: ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಅವರು ಮಾಂಸಾಹಾರ ಸೇವಿಸಿ, ನಾಗಬನಕ್ಕೆ ಪ್ರವೇಶ ಮಾಡಿದ್ದಾರೆ ಎಂಬುದು ಗೊತ್ತಾದ ಮೇಲೆ, ವಿರೋಧ ಪಕ್ಷದ ನಾಯಕರು ಸಖತ್ತಾಗಿಯೇ ಕ್ಲಾಸ್ ತೆಗೆದುಕೊಂಡಿದ್ದರು. ಮಾಂಸಾಹಾರ ಸೇವಿಸಿ ನಾಗಬನಕ್ಕೆ ಹೋಗಿದ್ದಕ್ಕೆ ಸಿಕ್ಕಾಪಟ್ಟೆ ಟೀಕೆಗಳು ವ್ಯಕ್ತವಾಗಿದ್ದವು.

ಆ ವಿಚಾರಕ್ಕೆ ಸಿಟಿ ರವಿ ಕೂಡ ಸ್ಪಷ್ಟನೆ ನೀಡಿದ್ದರು. ನಾನು ನಾಗಬನದ ಒಳಗೆ ಹೋಗಿರಲಿಲ್ಲ. ಹೊರಾಂಗಣದಲ್ಲಿಯೇ ನಿಂತು ನೋಡಿಕೊಂಡು ಬಂದಿದ್ದೇನೆ. ಕಾಂಗ್ರೆಸ್ ನವರ ರೀತಿ ಏನಿವಾಗ ನಾನು ಮಾಂಸ ತಿಂದೆ ದೇವಸ್ಥಾನಕ್ಕೆ ಹೋಗುತ್ತೇ‌ನೆ ಎಂಬ ಮಾತು ಆಡುವುದಿಲ್ಲ ಎಂದಿದ್ದರು. ಅದಾದ ಮೇಲೂ ಈ ಬಗ್ಗೆ ಚರ್ಚೆ ತಾರಕಕ್ಕೇರಿತ್ತು. ಇಂದು ಮತ್ತೆ ಸಿಟಿ ರವಿ ಉತ್ತರ ನೀಡಿ, ನಾನು ಮಾಂಸಾಹಾರ ತಿಂದಿದ್ದನ್ನು ಮರೆತಿದ್ದೆ ಎಂದು ಹೇಳಿದ್ದರು.

ಸಿಟಿ ರವಿ ಅವರ ಈ ಮಾತಿಗೆ ಕಾಂಗ್ರೆಸ್ ಹೊಸ ಬಿರುದು ನೀಡಿದೆ. ” ಬಿಜೆಪಿಗರದ್ದು ದಿನಕ್ಕೊಂದು ಸುಳ್ಳು, ಕ್ಷಣಕ್ಕೊಂದು ವೇಷ. ಹೊಟ್ಟೆಗೆ ಏನ್ ತಿಂದಿದ್ದೆ ಅನ್ನೋದನ್ನೇ ಮರೆತಿದ್ದ @CTRavi_BJP ಅವರಿಗೆ ಅಂದು ಆಕ್ಸಿಡೆಂಟ್ ಮಾಡಿದಾಗ ಕುಡಿದಿದ್ದೇನು ಅನ್ನೋದಾದ್ರೂ ನೆನಪಿದೆಯೇ?. ದೇವಸ್ಥಾನದ ಆವರಣ ಪ್ರವೇಶಿಸಿದ್ದಕ್ಕೆ ಸಾಕ್ಷಿ ಇದ್ದರೂ ಸುಳ್ಳು ಹೇಳುವ ಸಿ.ಟಿ ರವಿ – “ಬೆಸ್ಟ್ ಸುಳ್ಳುಗಾರ ಆಫ್ ದಿ ಇಯರ್”!!” ಎಂದು ಟ್ವೀಟ್ ಮಾಡಿದೆ.

What do you think?

Written by suddionenews

Leave a Reply

Your email address will not be published.

GIPHY App Key not set. Please check settings

ರೋಹಿಣಿ ಸಿಂಧೂರಿ ಹಾಗೂ ರೂಪಾ ಮಾತನಾಡದಂತೆ ಕೋರ್ಟ್ ನಿಂದ ಆದೇಶ..!

ಈ ರಾಶಿಯವರ ಮದುವೆ ವಿಳಂಬವಾಗಲು ಕಾರಣವೇನು?