ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ರಾಜ್ಯದಲ್ಲಿ ಒಂದು ಕಡೆ ಚಿನ್ನ ಬೆಳ್ಳಿ ಬೆಲೆಯೂ ಏರಿಕೆಯಾಗ್ತಾನೆ ಇದೆ. ಅದರಿಂದ ಮಹಿಳೆಯರಿಗೆ ಬೇಸರವೂ ಇದೆ. ಅಟ್ ದ ಸೇಮ್ ಟೈಮ್ ಅಡಿಕೆ ಬೆಲೆ ಏರಿಕೆಯಾಗಿದೆ. ಇದು ರೈತರ ಮೊಗದಲ್ಲಿ ಸಂತಸವನ್ನ ತಂದಿದೆ. ದಾವಣಗೆರೆಯ ಪ್ರಮುಖ ಬೆಳೆಯಾದಂತ ಅಡಿಕೆ ಇಂದಿನ ಮಾರುಕಟ್ಟೆಯಲ್ಲಿ 60,589 ರೂಪಾಯಿಗೆ ಏರಿಕೆಯಾಗಿದೆ. ಇದರಿಂದ ಅಡಿಕೆ ಬೆಳೆಗಾರರು ಫುಲ್ ಖುಷಿಯಾಗಿದ್ದಾರೆ.
ಚನ್ನಗಿರಿ ರಾಶಿ ಅಡಿಕೆ ಧಾರಣೆ ಗರಿಷ್ಠ ದರ 60,589 ರೂಪಾಯಿ. ಕನಿಷ್ಠ ದರ 55,679 ರೂಪಾಯಿ ಇದ್ದು ಸರಾಸರಿ ಬೆಲೆ 58,565 ರೂಪಾಯಿ ಇದೆ. ಬೆಟ್ಟೆ ಅಡಿಕೆ ಕನಿಷ್ಠ ದರ 23,387 ರೂಪಾಯಿ ಇದ್ದು, ಗರಿಷ್ಠ ದರ 30,187 ರೂಪಾಯಿ ಆಗಿದೆ. ದಾವಣಗೆರೆ ಅಡಿಕೆಧಾರಣೆಯನ್ನು ನೋಡುವುದಾದರೆ, ಸಿಪ್ಪೆಗೋಟು ಅಡಿಕೆ ಕನಿಷ್ಠ 10 ಸಾವಿರ ಇದ್ದು, ಗರಿಷ್ಠ 10 ಸಾವಿರಕ್ಕೆ ಮಾರಾಟವಾಗಿದೆ. ಗೊರಬಲು ಅಡಿಕೆ ಕನಿಷ್ಠ 19,800 ರೂಪಾಯಿ ಇದ್ದು, ಗರಿಷ್ಠ 19,800 ರೂಪಾಯಿಗೆ ಮಾರಾಟವಾಗಿದೆ.
ಇನ್ನು ಶಿವಮೊಗ್ಗದ ಬೆಟ್ಟೆ ಅಡಿಕೆ ಕನಿಷ್ಠ 51,009 ರೂಪಾಯಿ ಇದ್ದು, ಗರಿಷ್ಠ 58,911 ರೂಪಾಯಿಗೆ ಮಾರಾಟವಾಗಿದೆ. ರಾಶಿ ಅಡಿಕೆ ಕನಿಷ್ಠ 47,889 ರೂಪಾಯಿ ಇದ್ದು ಗರಿಷ್ಠ 60,589 ರೂಪಾಯಿಗೆ ಮಾರಾಟವಾಗಿದೆ. ಸರಕು ಅಡಿಕೆ ಕನಿಷ್ಠ 56,109 ಇದ್ದು, ಗರಿಷ್ಠ 91,069 ರೂಪಾಯಿಗೆ ಮಾರಾಟವಾಗಿದೆ. ಭದ್ರಾವತಿಯ ಅಡಿಕೆ ಮಾರುಕಟ್ಟೆಯಲ್ಲಿ ಬೇರೆ ತಳಿ ಕನಿಷ್ಠ 19,100 ರೂಪಾಯಿ ಇದ್ದು ಗರಿಷ್ಠ 25,000 ಕ್ಕೆ ಮಾರಾಟವಾಗಿದೆ. ಪುಡಿ ಅಡಿಕೆ ಕನಿಷ್ಠ 9 ಸಾವಿರ ರೂಪಾಯಿ ಇದ್ದು ಕನಿಷ್ಠ 10 ಸಾವಿರಕ್ಕೆ ಮಾರಾಟವಾಗಿದೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್