ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ

suddionenews
1 Min Read

ಚಿತ್ರದುರ್ಗ,(ಜೂನ್.07): ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಬಿ-ದುರ್ಗ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ತಣಿಗೆಹಳ್ಳಿ ಗ್ರಾಮ ಪಂಚಾಯ್ತಿ ಹಾಗೂ ಚಳ್ಳಕೆರೆ ತಾಲ್ಲೂಕಿನ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಾಲಯದಲ್ಲಿ ಖಾಲಿ ಇರುವ ಮೇಲ್ವಿಚಾರಕರನ್ನು ಮಾಸಿಕ ಗೌರವ ಧನ ರೂ. 12,000/- ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕಾತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಜುಲೈ 4ರೊಳಗೆ ಸಂಬಂಧಪಟ್ಟ ಪಿ.ಡಿ.ಓ, ಪಂಚಾಯ್ತಿ ಕಾರ್ಯದರ್ಶಿಗಳಿಗೆ ಸಲ್ಲಿಸಬೇಕು.

ಹೊಳಲ್ಕೆರೆ ತಾಲ್ಲೂಕಿನ ಬಿ-ದುರ್ಗ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ತಣಿಗೆಹಳ್ಳಿ ಗ್ರಾಮ ಪಂಚಾಯ್ತಿ ಮೇಲ್ವಿಚಾರಕರ ಸ್ಥಾನವು iii (ಎ) ಅಭ್ಯರ್ಥಿ ವರ್ಗಕ್ಕೆ, ಚಳ್ಳಕೆರೆ ತಾಲ್ಲೂಕಿನ ಅಬ್ಬೇನಹಳ್ಳಿ ಗ್ರಾಮ ಪಂಚಾಯಿತಿ ಮೇಲ್ವಿಚಾರಕರ ಸ್ಥಾನವು ಸಾಮಾನ್ಯ ವರ್ಗ (ಮಹಿಳೆ) ಅಭ್ಯರ್ಥಿಗೆ ಮೀಸಲಾಗಿದೆ.

ಷರತ್ತುಗಳು : ಅಭ್ಯರ್ಥಿಯು ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಯು ಸ್ಥಳೀಯ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿರಬೇಕು. ನಿಗದಿಪಡಿಸಿದ ಮೀಸಲಾತಿಗೆ ಒಳಪಡುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು. ಭರ್ತಿ ಮಾಡಿದ ಅರ್ಜಿಗಳನ್ನು ಸೂಕ್ತ ದಾಖಲಾತಿ (ಎಸ್.ಎಸ್.ಎಲ್.ಸಿ, ಅಂಕಪಟ್ಟಿ, ಟಿ.ಸಿ., ಮೀಸಲಾತಿ ಪ್ರಮಾಣ ಪತ್ರ, ಸ್ಥಳೀಯ ವಾಸಿ ದೃಢೀಕರಣ ಪತ್ರ, ಅಂಗವಿಕಲತೆ (ಇದ್ದಲ್ಲಿ ದೃಢೀಕರಣ ಪತ್ರ), ವಯಸ್ಕರ ಶಿಕ್ಷಣದಡಿ ನಡೆಯುತ್ತಿರುವ ಮುಂದುವರಿಕಾ ಕಲಿಕಾ ಕೇಂದ್ರಗಳ ಪ್ರೇರಕ ಉಪಪ್ರೇರಕರು ಸಹ ಅರ್ಜಿ ಸಲ್ಲಿಸಬಹುದು. ಮೇಲ್ವಿಚಾರಕರಾಗಿ ನೇಮಕಗೊಂಡ ನಂತರ ಪ್ರೇರಕ ಉಪಪ್ರೇರಕರ ಹುದ್ದೆಗೆ ರಾಜೀನಾಮೆ ನೀಡತಕ್ಕದ್ದು ಹಾಗೂ ಬಿಡುಗಡೆ ಪತ್ರವನ್ನು ಸಂಬಂಧಿಸಿದ ಇಲಾಖೆಯಿಂದ ಪಡೆದು ಕಚೇರಿಗೆ ಸಲ್ಲಿಸಬೇಕು.

ವಯೋಮಿತಿ: ಅರ್ಜಿಗಳನ್ನು ಸ್ವೀಕರಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಯು 18 ವರ್ಷ ವಯಸ್ಸನ್ನು ಪೂರೈಸಿರತಕ್ಕದ್ದು. ಗ್ರಂಥಾಲಯ ವಿಜ್ಞಾನದಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಹೆಚ್ಚಿನ ಮಾಹಿತಿಗೆ ಜಿಲ್ಲಾ ಕೇಂದ್ರ ಗ್ರಂಥಾಲಯವನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *