ಬೆಂಗಳೂರು.ಸೆಪ್ಟೆಂಬರ್.1: ಕರ್ನಾಟಕ ಲೋಕಸೇವಾ ಆಯೋಗವು (KPSC) 2026-27ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ವೃಂದದ ಒಟ್ಟು 319 ಹುದ್ದೆಗಳಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು 2026ರ ಸೆಪ್ಟೆಂಬರ್ 7ರವರೆಗೆ ವಿಸ್ತರಿಸಿ ತಿದ್ದುಪಡಿ ಅಧಿಸೂಚನೆ ಹೊರಡಿಸಿದೆ.
ನಾಡಕಚೇರಿ ಹಾಗೂ ಸೇವಾ ಸಿಂಧು ಪೋರ್ಟಲ್ ಸರ್ವರ್ ಸಮಸ್ಯೆಯಿಂದಾಗಿ ಅಭ್ಯರ್ಥಿಗಳಿಗೆ ಜಾತಿ, ಆದಾಯ ಮತ್ತು ಒಳ ಮೀಸಲಾತಿ ಪ್ರಮಾಣಪತ್ರಗಳು ನಿಗದಿತ ಸಮಯಕ್ಕೆ ಸಿಗದಿರುವುದು.

ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಇಂಟರ್ನೆಟ್ ಸಮಸ್ಯೆಯಿಂದಾಗಿ ಆನ್ಲೈನ್ ಶುಲ್ಕ ಪಾವತಿಯಲ್ಲಿ ಎದುರಾದ ವೈಫಲ್ಯಗಳು. ಅಭ್ಯರ್ಥಿಗಳ ಈ ಎಲ್ಲಾ ಸಮಸ್ಯೆ ಹಾಗೂ ಮನವಿಗಳನ್ನು ಪರಿಗಣಿಸಿ, ಆಯೋಗವು ಈ ಹಿಂದೆ ನಿಗದಿಯಾಗಿದ್ದ ಕೊನೆಯ ದಿನಾಂಕವಾದ ಆಗಸ್ಟ್ 31ರ ಬದಲಾಗಿ, ಸೆಪ್ಟೆಂಬರ್ 7, 2026ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ.
ಉಳಿಕೆ ಮೂಲ ವೃಂದದ 297 ಹಾಗೂ ಕಲ್ಯಾಣ ಕರ್ನಾಟಕ (ಹೈದರಾಬಾದ್-ಕರ್ನಾಟಕ) ವೃಂದದ 22 ಹುದ್ದೆಗಳು ಸೇರಿದಂತೆ ಒಟ್ಟು 319 ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಜುಲೈ 31ರಂದು ಹೊರಡಿಸಲಾದ ಮೂಲ ಅಧಿಸೂಚನೆಯ ಉಳಿದ ಷರತ್ತುಗಳು ಹಾಗೂ ನಿಯಮಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಕೆಪಿಎಸ್ಸಿ ಕಾರ್ಯದರ್ಶಿ ಜ್ಯೋತಿ ಕೆ. ತಿಳಿಸಿದ್ದಾರೆ.











