Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಸನಾತನ ಧರ್ಮದ ಬಗ್ಗೆ ಚರ್ಚೆ ಹುಟ್ಟು ಹಾಕಿದ್ದ ಉದಯನಿಧಿ ಸ್ಟಾಲಿಮ್ ಕಡೆಯಿಂದ ಮತ್ತೊಂದು ವಿಡಿಯೋ..!

---Advertisement---

ಚೆನ್ನೈ: ಇತ್ತಿಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸನಾತನ ಧರ್ಮದ ವಿಚಾರವಾಗಿ ಸಾಕಷ್ಟು ಚರ್ಚೆಯಾಗಿತ್ತಿದೆ. ಅದರಲ್ಲೂ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾಗೆ ಹೋಲಿಕೆ ಮಾಡಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟು ಹಾಕಿತ್ತು. ಇದೀಗ ಉದಯನಿಧಿ ಸ್ಟಾಲಿನ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.

ಕಟ್ಟರ್ ಹಿಂದೂ ವಿರೋಧಿ ಎಂದೇ ಖ್ಯಾತಿ ಪಡೆದಿರುವ ತಮಿಳುನಾಡಿನ ಮಾಜಿ ಸಿಎಂ ಕರುಣಾನಿಧಿ ಮಾತನಾಡಿರುವ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ‘ಹಿಂದುಳಿದ ಜಾತಿಗಳಿಗೆ ಮೇಲ್ವರ್ಗದವರು ವಿದ್ಯೆಯನ್ನು ನಿರಾಕರಿಸಿದರು. ವಿದ್ಯೆ ಕಲಿತರೆ ನಿಮಗೆ ಶಾಪ ತಟ್ಟಲಿದೆ ಎಂದು ಬೆದರಿಕೆ ಹಾಕಿದ್ದರು. ಅದಕ್ಕೆ ನಾವ್ಯಾರು ಹೆದರಲಿಲ್ಲ‌. ವಿದ್ಯೆ ಕಲಿಯಬೇಕು ಎಂದುಕೊಂಡಿರೋ ಕೆಳಜಾತಿಯ ಜನ ನರಕಕ್ಕೆ ಹೋಗಲಿದ್ದಾರೆ ಎಂದು ಹೆದರಿಸಿದ್ರು. ಒಂದು ವೇಳೆ ಯಾರಾದರೂ ಅವರಿಗೆ ಗೊತ್ತಿಲ್ಲದೆ ವಿದ್ಯೆ ಕಲಿತರೆ ಅಂಥವರ ನಾಲಿಗೆ ಕತ್ತರಿಸುತ್ತಿದ್ದರು.

ಕತ್ತರಿಸಿ ನಾಲಿಗೆಯನ್ನು ಸುಟ್ಟು ಹಾಕುತ್ತಿದ್ದರು. ಅದು ಅಂದು ಮಾತ್ರವಲ್ಲ, ಇಂದು ಕೂಡ ಮನುಧರ್ಮವನ್ನು ಪಾಲಿಸುವವರು ಅದನ್ನೇ ಹೇಳುತ್ತದೆ. ಹೀಗಾಗಿ ಪೆರಿಯಾರ್ ಮನುಧರ್ಮ ಶಾಸ್ತ್ರವನ್ನು ಸುಟ್ಟರು, ಅಂಬೇಡ್ಜರ್ ವಿರುದ್ಧ ಹೋರಾಟ ನಡೆಸಿದರು ಎಂದು ಕರುಣಾನಿಧಿ ಅವರು ಮಾತಾಡಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...