Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕರ್ನಾಟಕಕ್ಕೆ ಮತ್ತೆ ಹಿನ್ನಡೆ ; 15 ದಿನ ತಮಿಳುನಾಡಿಗೆ 3,500 ಕ್ಯೂಸೆಕ್ ಕಾವೇರಿ ನೀರು ಹರಿಸಲು CWMA ಆದೇಶ

---Advertisement---

ದೆಹಲಿ.ಜುಲೈ.30: ರಾಜ್ಯದಲ್ಲಿ ಮಳೆ ಅಭಾವ ತಾಂಡವವಾಡುತ್ತಿರುವ ಬೆನ್ನಲ್ಲೇ, ಕರ್ನಾಟಕಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮತ್ತೆ ಬಿಗ್ ಶಾಕ್ ನೀಡಿದೆ. ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸುವಂತೆ ಶುಕ್ರವಾರ ನಡೆದ ತುರ್ತು ಸಭೆಯಲ್ಲಿ ಪ್ರಾಧಿಕಾರ ಮಹತ್ವದ ನಿರ್ದೇಶನ ನೀಡಿದೆ.

ದೆಹಲಿಯಲ್ಲಿರುವ ಪ್ರಾಧಿಕಾರದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಎರಡೂ ರಾಜ್ಯಗಳ ಉನ್ನತಾಧಿಕಾರಿಗಳು ಭಾಗವಹಿಸಿ ಸುದೀರ್ಘ ವಾದ-ಪ್ರತಿವಾದ ಮಂಡಿಸಿದರು. ಕರ್ನಾಟಕದ ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಅವರು, CWRC ಶಿಫಾರಸನ್ನು ಪಾಲಿಸಲು ಸಾಧ್ಯವೇ ಇಲ್ಲ ಎಂದು ಖಡಕ್ಕಾಗಿ ಪ್ರತಿಪಾದಿಸಿದರು. ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿಲ್ಲದೆ ತೀವ್ರ ಅಭಾವ ಸೃಷ್ಟಿಯಾಗಿದೆ.

ಕಾವೇರಿ ಜಲಾಶಯಗಳಿಗೆ ಹರಿದುಬಂದಿರುವ ಒಟ್ಟು ಒಳಹರಿವು ಕೇವಲ 36 ಟಿಎಂಸಿ ಮಾತ್ರವಾಗಿದ್ದು, ಪ್ರಸ್ತುತ ಕೆಆರ್‌ಎಸ್ ಸೇರಿದಂತೆ ಪ್ರಮುಖ ಜಲಾಶಯಗಳಲ್ಲಿ ಬಸವಳಿದು ನಿಂತಿರುವುದು ಬರಿ 36.69 ಟಿಎಂಸಿ ನೀರು. ಜೂನ್ ಮತ್ತು ಜುಲೈ ಅವಧಿಯಲ್ಲಿ ಬಿಳಿಗುಂಡ್ಲು ಮೂಲಕ ಹರಿದಿರುವುದು ಕೇವಲ 3.55 ಟಿಎಂಸಿ ನೀರು. ಕಳೆದ ವರ್ಷ ಇದೇ ಸಮಯದಲ್ಲಿ 116.92 ಟಿಎಂಸಿ ನೀರು ಹರಿದು 30,784 ಕ್ಯೂಸೆಕ್ಸ್ ಹರಿವಿತ್ತು, ಆದರೆ ಈಗ ಕೇವಲ 178 ಕ್ಯೂಸೆಕ್ಸ್ ಹರಿವು ಮಾತ್ರ ಇದೆ ಎಂದು ಅಂಕಿ-ಅಂಶಗಳ ಸಮೇತ ವಾಸ್ತವ ಸ್ಥಿತಿಯನ್ನು ತೆರೆದಿಟ್ಟರು.

ಮತ್ತೊಂದೆಡೆ ತಮಿಳುನಾಡು ಅಧಿಕಾರಿಗಳು, ಸಾಮಾನ್ಯ ಮಳೆಯಾಗಿದ್ದರೆ ಈ ವೇಳೆಗೆ 40 ಟಿಎಂಸಿ ನೀರು ತಲುಪಬೇಕಿತ್ತು ಎಂದು ವಾದಿಸಿದರು. ಕರ್ನಾಟಕ ಸಂಕಷ್ಟ ಸೂತ್ರವನ್ನು ಸೂಕ್ತವಾಗಿ ಪಾಲಿಸುತ್ತಿಲ್ಲ ಹಾಗೂ ಬಾಕಿ ಉಳಿಸಿಕೊಂಡಿರುವ 9.46 ಟಿಎಂಸಿ ನೀರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಪಟ್ಟು ಹಿಡಿದರು. ಅಂತಿಮವಾಗಿ ಉಭಯ ರಾಜ್ಯಗಳ ವಾದ ಆಲಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು, ಕರ್ನಾಟಕದ ನೀರಿಕ್ಷೆಯನ್ನು ಹುಸಿಗೊಳಿಸಿ ತಮಿಳುನಾಡಿನ ಪರವಾಗಿ ಅಂತಿಮ ಆದೇಶ ಹೊರಡಿಸಿದೆ.

Join WhatsApp

Join Now

Join Telegram

Join Now