Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು : ಸಚಿವ ಎಂಬಿ ಪಾಟೀಲ್ ಅವರಿಂದ ಒತ್ತಾಯ

---Advertisement---

ಬೆಂಗಳೂರು: ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು ಬೂದಿ ಮುಚ್ಚಿದ ಕೆಂಡದಂತೆ. ಆಗಾಗ ಚರ್ಚೆಗೆ ಬರ್ತಾನೆ ಇರುತ್ತೆ. ಇದೀಗ ಸಚಿವ ಎಂಬಿ ಪಾಟೀಲ್ ಅವರಿಂದಾನೇ ಲಿಂಗಾಯತ ಧರ್ಮದ ಪ್ರತ್ಯೇಕ ಕೂಗು ಕೇಳಿ ಬಂದಿದೆ. ಜೈನರು, ಸಿಖ್ಖರು, ಬೌದ್ಧರಿಂದ ಯಾರರಿಗಾದ್ರೂ ತೊಂದರೆ ಆಗಿದೆಯಾ..? ತೊಂದರೆ ಆಗಿಲ್ಲವಲ್ಲ, ಹಾಗೆಯೇ ಲಿಂಗಾಯತ ಧರ್ಮ ಕೂಡ ಬೇಕು.ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತಲೆಗೆ ಕಟ್ಟುವುದಕ್ಕೆ ಆಗುವುದಿಲ್ಲ. ಹಿಂದೆ ಆಟ ಆಡಿದ ಹಾಗೇ ಈಗ ಆಡಲು ಆಗುವುದಿಲ್ಲ.

ಭೌಗೋಳಿಕವಾಗೊ ನಾವೆಲ್ಲಾ ಭಾರತೀಯರು, ಭೌಗೋಳಿಕವಾಗಿ ನಾವೆಲ್ಲಾ ಹಿಂದೂಗಳು. ಇದನ್ನ ನಾವೂ ನಿನ್ನೆಯೇ ಹೇಳಿದ್ದೇವೆ. ಆದರೆ ಇದು ಬಸವ ಧರ್ಮ ಇಂಡಿಕ್ ರಿಲಿಜಿಯನ್, ಇದರಲ್ಲಿ ಪ್ರಶ್ನೆ ಏನಿದೆ..? ಹೋದ ಸಲ ಸಿದ್ದರಾಮಯ್ಯ ತಲೆಗೆ ಕಟ್ಟಿದ್ದರು. ಆದರೆ ಈ ಬಾರಿ ಯಾರ ಆಟಗಳು ನಡೆಯುವು್ಇಲಗಲ. ನಾವೂ ಪಾಸಿಟೀವ್ ಆಗಿಯೇ ಹೋಗೋಣಾ.

ನಾವೂ ಲಿಂಗಾಯತ ಧರ್ಮದವರು, ಚತುರ್ವರ್ಣದಿಂದ ಹೊರಗೆ ಉಳಿದಿದ್ದೇವೆ. ನಿನ್ನೆ ಕಾರ್ಯಕ್ರಮ ನಡೆದಿದ್ದು ಮಠಾಧಿಪತಿಗಳ ಒಕ್ಕೂಟದಿಂದ. ಯಾರಿಗೆ ದ್ವಂದ್ವ ನಿಲುವು ಇದೆ ಅವರನ್ನು ಕರೆಸಿಲ್ಲ. ನೇರವಾಗಿ ಇರುವವರನ್ನು ನಿನ್ನೆ ಕರೆದಿದ್ದಾರೆ. ವೀರಶೈವ ಮಹಾಸಭಾ ಕೂಡ ಒಂದು ಹಂತಕ್ಕೆ ಹತ್ತಿರ ಬಂದಿದೆ. ಹಿಂದೂ ಧರ್ಮದ ಭಾಗವಲ್ಲ ಅಂತ ದಾವಣಗೆರೆಯಲ್ಲಿ ಮಹಾಸಭಾ ನಿರ್ಣಯ ಮಾಡಿದೆ. ಅವರೂ ನಮ್ಮೊಂದಿಗೆ ಅರ್ಧ ದಾರಿಗೆ ಬಂದಿದ್ದಾರೆ ಎಂದಿದ್ದಾರೆ. ಒಟ್ಟಾರೆ ಪ್ರತ್ಯೇಕ ಲಿಂಗಾಯತ ಧರಗಮದ ಕೂಗು ಸ್ವಲ್ಪ ಮಟ್ಟಿಗೆ ತಣ್ಣಗೆ ಆಗಿತ್ತು. ಆದ್ರೆ ಈಗ ಸಚಿವರಿಂದಾನೇ ಶುರುವಾಗಿದೆ. ಈ ಬಾರಿ ಬೆಳವಣಿಗೆ ಏನಾಗಲಿದೆ ಎಂಬುದನ್ನ ನೋಡಬೇಕಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...