ಬೆಂಗಳೂರು; ನಮ್ಮದೇ ಆದ ನಂದಿನಿ ಉತ್ಪನ್ನಗಳು ಇದ್ರು ಕೂಡ ಮೆಟ್ರೋ ನಿಲ್ದಾಣಗಳಲ್ಲಿ ಅಮೂಲ್ ಉತ್ಪನ್ನಗಳಿಗೆ ರಾಜ್ಯ ಸರ್ಕಾರ ಅವಕಾಶ ನೀಡಿರುವುದಕ್ಕೆ ವಿರೋಧ ವ್ಯಕ್ತವಾಗಿದೆ. ಈಗಾಗಲೇ ಹತ್ತು ಮೆಟ್ರೋ ನಿಲ್ದಾಣಗಳಲ್ಲಿ ಅಮೂಲ್ ಕಿಯೋಸ್ಕ್ ಮಳಿಗೆ ತೆರೆಯಲು ಅನುಮತಿ ನೀಡಲಾಗಿದೆ. ಕಿಯೋಸ್ಕ್ ಅಂದ್ರೆ ಯಂತ್ರದ ಸಹಾಯದಿಂದ ಬಳಸುವ ಉಪಕರಣವಾಗಿರುತ್ತದೆ.
ಈ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, BMRCL ಅವರು ಗ್ಲೋಬಲ್ ಟೆಂಡರ್ ಕರೆದಿದ್ರು. ಯಾರೂ ಹಾಕಿಕೊಂಡಿರಲಿಲ್ಲ. ಅಮೂಲ್ ಅವರು ನಮಗೊಂದಿಷ್ಟು ಅಂಗಡಿ ಬೇಕು ಅಂತ ಹಾಕಿದ್ದರು. ಹತ್ತು ಕಡೆ ಬೇಕು ಅಂತ ಅರ್ಜಿ ಹಾಕಿದ್ದರು. ಈಗ ನಾವೂ ಕೆಎಂಎಫ್ ಅವರಿಗೂ ಹೇಳಿದ್ದೀವಿ. ಅರ್ಜಿ ಹಾಕೋದಕ್ಕೆ. ಎಂಟು ಕಡೆ ನಂದಿನಿಗೆ ಕೊಡಿ ಅಂತ ಹೇಳಿದ್ದೀವಿ. ಎರಡು ಕಡೆ ಆಲ್ ರೆಡಿ ಓಪನ್ ಮಾಡಿದ್ದಾರೆ. ಅದನ್ನ ಮುಚ್ಚೋದು ಸರಿಯಲ್ಲ. ಗ್ಲೋಬಲ್ ಟೆಂಡರ್ ಕರೆದಿದ್ದೀವಿ. ಎರಡು ಅವರದ್ದು ಇರುತ್ತೆ. ಎಂಟು ನಂದಿನಿಯವರಿಗೆ ಹೇಳಿದ್ದೀವಿ ಎಂದಿದ್ದಾರೆ.
ಪಟ್ಟಂದೂರು ಅಗ್ರಹಾರ, ಇಂದಿರಾನಗರ, ಬೆನ್ನಿಗಾನಹಳ್ಳಿ, ಟ್ರಿನಿಟಿ, ಬೈಯ್ಯಪ್ಪನಹಳ್ಳಿ, ಸರ್ ಎಂ ವಿಶ್ವೇಶ್ವರಯ್ಯ, ಮೆಜೆಸ್ಟಿಕ್, ಜಯನಗರ, ನ್ಯಾಷನಲ್ ಕಾಲೇಜ್, ಬನಶಂಕರಿ ಮೆಟ್ರೋ ನಿಲ್ದಾಣದಲ್ಲಿ ಅಮೂಲ್ ಮಾರಾಟಕ್ಕೆ ಸಿದ್ಧತೆಯಾಗಿದೆ. ಗುಜರಾತ್ ಹಾಲು ಮಾರಾಟ ಒಕ್ಕೂಟದ ಜೊತೆಗೆ ಬಿಎಂಆರ್ಸಿಎಲ್ ಒಪ್ಪಂದ ಮಾಡಿಕೊಂಡಿದೆ. BMRCL ಈ ನಿರ್ಧಾರಕ್ಕೆ ಜೆಡಿಎಸ್ ತೀವ್ರ ವಿರೋಧವನ್ನ ವ್ಯಕ್ಯಪಡಿಸಿದೆ. ಕಮಿಷನ್ ಆರೋಪಕ್ಕೆ ಸ್ವಾಭಿಮಾನ ಮಾರಿಕೊಂಡ ಡಿಕೆ. ಡೂಪ್ಲಿಕೇಟ್ ಸಿಎಂ, ಡಿಕೆ ನವರಂಗಿ ಆಟ ಮತ್ತೊಮ್ಮೆ ಬಯಲು ಅಂತ ಆಕ್ರೋಶ ಹೊರ ಹಾಕಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.
















