ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳೆಗೆರೆ, ಚಳ್ಳಕೆರೆ,
ಮೊ : 84314 13188
ಸುದ್ದಿಒನ್, ಚಳ್ಳಕೆರೆ, ಏಪ್ರಿಲ್. 14 : ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಭಾರತ ಸೇರಿದಂತೆ ವಿಶ್ವದ 193 ದೇಶಗಳಲ್ಲಿಯೂ ಇಂದು ಸ್ಮರಿಸುತ್ತಿದ್ದು ಅಂಬೇಡ್ಕರ್ ರವರನ್ನು ಕೇವಲ ದಲಿತ ನಾಯಕರಾಗಿ ಬಿಂಬಿಸುವುದು ಸರಿಯಲ್ಲ ಕಲಿಯುಗ ಇರುವವರೆಗೂ ಅಂಬೇಡ್ಕರ್ ಜೀವಂತವಾಗಿರುತ್ತಾರೆ ಎಂದು ಶಾಸಕ ಟಿ ರಘುಮೂರ್ತಿ ತಿಳಿಸಿದರು.

ನಗರದ ತಾಲೂಕು ಕಚೇರಿ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಬಾಬು ಜಗಜೀವನ್ ರಾಮ್ ಹಾಗೂ ಡಾ. ಬಿಆರ್ ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಅಂಬೇಡ್ಕರ್ ಅವರು ನಮ್ಮೆಲ್ಲರ ನಡೆದೇ ಕಾರ್ಯಾಂಗ ನ್ಯಾಯಾಂಗದೊಂದಿಗೆ ದಿನನಿತ್ಯ ಬದುಕಿರುತ್ತಾರೆ ಅವರು ದೇಶಕ್ಕೆ ನೀಡಿರುವ ಸಂವಿಧಾನದಿಂದ ಇಡೀ ವಿಶ್ವವೇ ಅವರನ್ನು ಕೊಂಡಾಡುತ್ತಿದೆ ರಾಜಕೀಯ ಪಕ್ಷಗಳು ಅಂಬೇಡ್ಕರ್ ರವರನ್ನು ತಮ್ಮ ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತೇವೆ ಅಂಬೇಡ್ಕರ್ ಅವರ ಸಂವಿಧಾನದಲ್ಲಿ ಜಾತ್ಯಾತೀತತೆಯನ್ನು ಎತ್ತಿ ಹಿಡಿದಿದ್ದು ಸರ್ವ ಜಾತಿ ಧರ್ಮಗಳಿಗೂ ನ್ಯಾಯವನ್ನು ಒದಗಿಸಿದ್ದಾರೆ ಸ್ತ್ರೀಯರಿಗೆ ಸಮಾನತೆ ನೀಡಲು ಅಂಬೇಡ್ಕರ್ ನಿರ್ಮಿಸಿದ ಸಂವಿಧಾನದಿಂದ ಸಾಧ್ಯವಾಗಿದೆ ಅಂಬೇಡ್ಕರ್ ಅವರು ಕಲಿಯುಗದ ಸೂರ್ಯನಿದ್ದಂತೆ ಬಾಬು ಜಗಜೀವನ್ ರಾಮ್ ರವರು ತನ್ನ ರಾಜಕೀಯ ಜೀವನದಲ್ಲಿ ಹಲವಾರು ಕಷ್ಟಗಳನ್ನು ಎದುರಿಸಿದರು ಸಹ ಹಸಿರು ಕ್ರಾಂತಿಯ ಹರಿಕಾರ ಎಂಬ ಬಿರುದನ್ನು ಪಡೆದು ಎಲ್ಲಾ ರೈತ ಹಾಗೂ ಕಾರ್ಮಿಕ ವಲಯಕ್ಕೆ ನೀಡಿದ ಕೊಡುಗೆ ಅಪಾರವಾದದ್ದು ಎಂದು ಸ್ಮರಿಸಿದರು.
ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೀರಭದ್ರಪ್ಪ ಮಾತನಾಡಿ ದಲಿತರಿಗೆ ಇಂದು ಎದೆಯುಬ್ಬಿಸಿ ಮಾತನಾಡುವ ಧೈರ್ಯ ಬಂದಿರುವುದು ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದ ಸಾಧ್ಯವಾಗಿದೆ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ತಾವೆಲ್ಲರೂ ಮೈಗೂಡಿಸಿಕೊಳ್ಳುವ ಮೂಲಕ ಅವರ ಆಶಯಗಳಿಗೆ ಬದ್ಧರಾಗೋಣ ಎಂದು ಕರೆ ನೀಡಿದರು.
ನಗರ ಸಭೆ ಅಧ್ಯಕ್ಷೆ ಮಂಜುಳಾ ಮಾತನಾಡಿ ಡಾ. ಬಿ ಆರ್ ಅಂಬೇಡ್ಕರ್ ರವರು ನೀಡಿದ ಸ್ತ್ರೀ ಸಮಾನತೆಯಿಂದಾಗಿ ಇಂದು ಮಹಿಳೆಯರು ರಾಜಕೀಯವಾಗಿ ಮುಂದೆ ಬರಲು ಸಾಧ್ಯವಾಗಿದೆ ದುಡಿದ ಹಣದಲ್ಲಿ 75 ಬಳಸಿ ಉಳಿದ 25 ಹಣವನ್ನು ಬಡವರಿಗೆ ಹಂಚುವ ಮೂಲಕ ಅಂಬೇಡ್ಕರ್ ಅವರ ಬಡತನ ಮುಕ್ತ ದೇಶವನ್ನು ಕಟ್ಟುವ ಕನಸನ್ನು ನನಸಾಗಿಸೋಣ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ನವೀನ್ ಪೂಜಾರಹಳ್ಳಿ ಮಲ್ಲಿಕಾರ್ಜುನ ಆಲಮಗಿ ಅವರು ಉಪನ್ಯಾಸ ನೀಡಿದರು.

ಖಾಲಿ ಕುರ್ಚಿಗಳ ಪ್ರದರ್ಶನ: ನಗರದಲ್ಲಿ ತಾಲೂಕು ಆಡಳಿತದ ವತಿಯಿಂದ ಇಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೆಚ್ಚಾಗಿ ಖಾಲಿ ಕುರ್ಚಿಗಳ ಪ್ರದರ್ಶನವಾಯಿತು ಕಾರ್ಯಕ್ರಮ 10.30 ರಿಂದ ಪ್ರಾರಂಭವಾಗಿ ಮೆರವಣಿಗೆ ಯೊಂದಿಗೆ ಸಭಾ ಕಾರ್ಯಕ್ರಮಕ್ಕೆ ಆಗಮಿಸುವ ವೇಳೆಗೆ ಮಧ್ಯಾಹ್ನ 3:00 ತಲುಪಿದ್ದ ಹಿನ್ನೆಲೆಯಲ್ಲಿ ಸಮುದಾಯದ ನಗರ ಹಾಗೂ ಗ್ರಾಮೀಣ ಭಾಗದ ಜನರು ಚದುರುದರಿಂದ ವೇದಿಕೆ ಕಾರ್ಯಕ್ರಮಕ್ಕೆ ಅಷ್ಟಾಗಿ ಜನ ಕಂಡು ಬರಲಿಲ್ಲ. ಅಲ್ಲದೆ ಡಿಜೆ ವಾದ್ಯಗೋಷ್ಠಿ ಮುಂದುವರೆಸಲು ಅನುಮತಿ ನೀಡಬೇಕು ಯುವಜನತೆ ಪಟ್ಟು ಹಿಡಿದಿದ್ದರಿಂದ ಕಾರ್ಯಕ್ರಮದಲ್ಲಿ ಗೊಂದಲದ ವಾತಾವರಣ ಉಂಟಾಯಿತು.
ಕಾರ್ಯಕ್ರಮಕ್ಕೆ ಮುನ್ನ ಬೆಳಗ್ಗೆ 9 ಗಂಟೆಗೆ ಮೆರವಣಿಗೆಗೆ ಶಾಸಕ ರಘುಮೂರ್ತಿ ಚಾಲನೆ ನೀಡಿದ್ದರು.
ಇದೆ ವೇಳೆ ಸಂವಿಧಾನ ವಿಚಾರ ವೇದಿಕೆ ವತಿಯಿಂದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಸಹನ ವಿಜಯಕುಮಾರ್ ರಮ್ಯ ಎಂ ಮಲ್ಲಮ್ಮ ಸೌಮ್ಯ ಅವರಿಗೆ ಪ್ರಶಸ್ತಿ ಹಾಗೂ ನಗದನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಸುಮ ಭರಮಯ್ಯ ತಹಶೀಲ್ದಾರ್ ರೆಹನ್ ಪಾಷಾ ಡಿವೈಎಸ್ ಪಿ ಟಿ.ಬಿ.ರಾಜಣ್ಣ ನಗರಸಭೆ ಪೌರಾಯುಕ್ತ ಜಾಗರೆಡ್ಡಿ ಕ್ಷೇತ್ರಾಧಿಕಾರಿ ಕೆ ಎಸ್ ಸುರೇಶ್ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ, ದೇವಲ ನಾಯಕ್ ಸೇರಿದಂತೆ ನಗರ ಸಭೆ ಸದಸ್ಯರು ನಾಮನಿರ್ದೇಶಕ ಸದಸ್ಯರು ತಾಲೂಕು ಪಂಚಾಯಿತಿ ಕೆಡಿಪಿ ಸದಸ್ಯರು ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಜನ ಪ್ರತಿನಿದಿಗಳು ಇದ್ದರ..




















