Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

KSDL ನಲ್ಲಿ ಸಾವಿರ ಕೋಟಿಯ ಅವ್ಯವಹಾರದ ಆರೋಪ..!

---Advertisement---

ಬೆಂಗಳೂರು: ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಯಮಿತದಲ್ಲಿ ಅವ್ಯವಹಾರದ ಆರೋಪ ಕೇಳಿ ಬಂದಿದೆ. ಕೆಎಸ್ಡಿಎಲ್ ನಲ್ಲಿ ಬಳಸುವ ಕಚ್ಛಾ ತೈಲದ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಜೆಡಿಎಸ್ ಶಾಸಕರೊಬ್ಬರು ಆರೋಪಿಸಿದ್ದಾರೆ. ಈ ಸಂಬಂಧ ನಾವೂ 800 ಪೇಜ್ ವರದಿಯನ್ನು ಪಡೆದಿದ್ದೇನೆ. 1918ರಲ್ಲಿ ಕರ್ನಾಟಕ ಸಾಬೂನು ಮಾರ್ಜಕ ನಿಯಮಿತ ಸಂಸ್ಥೆ ಜಾರಿಗೆ ಬಂದಿತ್ತು. ಸಾಬೂನು ಮತ್ತು ಮಾರ್ಜಕ ತಯಾರಿಕೆಯಲ್ಲಿ ಬಳಸುವ ಕಚ್ಚಾ ತೈಲವಾಗಿ ಶ್ರೀಗಂಧ ತೈಲ ಸರಬರಾಜಿನಲ್ಲಿ ಭ್ರಷ್ಟಾಚಾರ ಆಗಿದೆ ಎಂದು ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು ಆರೋಪಿಸಿದ್ದಾರೆ.

ಬೇರೆ ಕಂಪನಿಗೆ ಅವಕಾಶ ನೀಡದೆ ಒಂದೇ ಕಂಪನಿಗೆ ಟೆಂಡರ್ ಗೆ ಅವಕಾಶ ನೀಡಿದ್ದಾರೆ. ಕರ್ನಾಟಕದ ಅರೋಮಸ್ ಕಂಪನಿಗೆ ಎರಡು, 9 ಸಲ ಟೆಂಡರ್ ಕೊಟ್ಟಿದ್ದಾರೆ. ಬ್ಲಾಕ್ ಲೀಸ್ಟ್ ನಲ್ಲಿರುವ ಕಂಪನಿಗೆ ಟೆಂಡರ್ ಕೊಟ್ಟಿದ್ದಾರೆ. 2019ರಲ್ಲಿಯೇ ಈ ಕರ್ನಾಟಕ ಅರೋಮಸ್ ಕಂಪನಿ ಬ್ಲಾಕ್ ಲೀಸ್ಟ್ ನಲ್ಲಿತ್ತು.

ನಾನು ಇದಕ್ಕೆ ಸಂಬಂಧಸಿದಂತೆ ಮಾಹಿತಿ ಪಡೆಯಲು 2022, 2023ರಲ್ಲಿಯೇ ಪತ್ರ ಬರೆದಿದ್ದೆ. ಆಗ ಒಂದು ಕೆಜಿಗೆ ಸ್ಯಾಂಡಲ್ ಆಯಿಲ್ ಗೆ 2,24,655 ರೂಪಾಯಿ ಇತ್ತು. ನಾನು ಪತ್ರ ಬರೆದ ನಂತರ 2025ರಲ್ಲಿ ಸ್ಯಾಂಡಲ್ ಆಯಿಲ್ ಬೆಲೆ ಕೆಜಿಗೆ 93,116 ರೂಪಯಿ ಮಾಡಿದ್ದಾರೆ. ಅಂದರೆ ಹಿಂದಿನ ಬೆಲೆಗಿಂತ ಕೆಜಿಗೆ 1.2 ಲಕ್ಷ ರೂಪಾಯಿ ಕಡಿಮೆ ಬೆಲೆ ಕೊಟ್ಟು ಖರೀದಿ ಮಾಡಿದ್ದಾರೆ. ‌ಈವರೆಗೆ 11,000 ಕೆಜಿ ಸ್ಯಾಂಡಲ್ ವುಡ್ ಆಯಿಲ್ ಅನ್ನು ಪ್ರತಿ ಕೆಜಿಗೆ 1.2 ಲಕ್ಷ ಹೆಚ್ಚಿನ ಹಣ ಕೊಟ್ಟು ಖರೀದಿ ಮಾಡಿದ್ದಾರೆ. ಇದರಿಂದ ಕಂಪನಿಗೇನೆ ಸುಮಾರು 132 ಕೋಟಿಗೂ ಹೆಚ್ಚು ನಷ್ಟ ಉಂಟಾಗಿದೆ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...