ಮೈಸೂರು: ಈ ಬಾರಿ ಕಾಂಗ್ರೆಸ್ ಪಕ್ಷ ಬಹುಮತ ಪಡೆದು ಸರ್ಕಾರ ರಚಿಸುವುದಕ್ಕೆ ರೆಡಿಯಾಗಿ ನಿಂತಿದೆ. ಈ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ನನ್ನ ಪ್ರಚಾರ ಸಭೆಗಳಲ್ಲಿ ಹೇಳ್ತಾ ಇದ್ದೆ. ಹೈಕಮಾಂಡ್ ಬಳಿ ಹೇಳ್ತಾ ಇದ್ದೆ. 130 ಸ್ಥಾನಗಳನ್ನು ಗೆಲ್ಲುತ್ತೀವಿ ಅಂತ. ಈಗಿನ ಟ್ರೆಂಡ್ ನೋಡಿದ್ರೆ ಅದಕ್ಕಿಂತ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ. ಕಾಂಗ್ರೆಸ್ ಪಾರ್ಟಿ ಅದರ ಶಕ್ತಿ ಮೇಲೆನೆ ಸರ್ಕಾರ ಮಾಡುತ್ತೆ.
ಬಿಜೆಪಿ ಸರ್ಕಾರದ ಭ್ರಷ್ಟಾಚಾರ 40% ಭ್ರಷ್ಟಾಚಾರ. ಬಿಜೆಪಿ ಸರ್ಕಾರ 40% ತಗೋಳ್ತಾ ಇದೆ ಅಂತ ಹೇಳಿ ಪ್ರಧಾನ ಮಂತ್ರಿ ಅವರಿಗೆ ಪತ್ರ ಬರೆದಿದ್ದರು. ಆದ್ರೆ ಪ್ರಧಾನಿ ಏನು ಕ್ರಮ ತಗೊಂಡ್ಲಿಲ್ಲ. ರಾಜ್ಯದ ಜನ ಬೇಸತ್ತಿದ್ರು. ಬಿಜೆಪಿ ಎಷ್ಟು ಬೇಗ ತೊಲಗುತ್ತೋ ಅಷ್ಟು ಒಳ್ಳೆಯದ್ದು ಅಂತ ಜನ ಇವತ್ತು ಕಾಂಗ್ರೆಸ್ ಕೈ ಹಿಡಿದಿದ್ದಾರೆ.
ಮೋದಿ, ಅಮಿತ್ ಶಾ, ನಡ್ಡಾ, ಯಡಿಯೂರಪ್ಪ 150 ಸೀಟು ಗೆಲ್ತೀವಿ ಅಂತಿದ್ರು. ಅವರಿಗೆ ಗೊತ್ತಿದ್ರು ಸಹ ಸುಳ್ಳು ಹೇಳ್ತಾ ಇದ್ರು. ಯಾಕಂದ್ರೆ ಅಮಿತ್ ಶಾ ಬಳಿ ಇಂಟೆಲಿಜೆನ್ಸಿ ರಿಪೋರ್ಟ್ ಇತ್ತು. ಆದ್ರೂ ಹೇಗಾದರೂ ಹಣ ಬಲದಿಂದ ಗೆಲ್ಲುವ ಪ್ರಯತ್ನ ಮಾಡಿದ್ರು. ಜನ ಬುದ್ದಿ ಕಲಿಸಿದ್ರು. ಮೋದಿಯವರ ಪ್ರಭಾವ ಏನು ನಡೆದಿಲ್ಲ. ಅವರು ನೂರು ಸಲ ಬಂದ್ರು ಸಹ ಕರ್ನಾಟಕದ ಜನತೆಗೆ ಏನು ಪ್ರಭಾವ ಬೀರಲ್ಲ ಎಂದಿದ್ದಾರೆ.
ಈ ಮಧ್ಯೆ ಮೊದಲು ಇಂಗ್ಲಿಷ್ ಚಾನೆಲ್ ಗಳಿಗೆ ಬೈಟ್ ಕೊಟ್ಟಿದ್ದ ಸಿದ್ದರಾಮಯ್ಯ, ಕನ್ನಡ ಮಾತನಾಡಲು ಹೊರಟಾಗ ಮತ್ತೊಂದು ಇಂಗ್ಲಿಷ್ ಪ್ರಶ್ನೆ ಬಂತು. ಆಗ ಏ ಸುಮ್ನೆ ಇರ್ರಪ್ಪ.. ಮೊದಲು ನಾವೂ ಕನ್ನಡಿಗರು ಅಂತ ಹೇಳಿ ಕನ್ನಡದಲ್ಲಿ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.