Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಕಾಂಗ್ರೆಸ್ ನಲ್ಲಿ ಎಐಸಿಸಿ ಅಧ್ಯಕ್ಷರೆಂದರೆ ಖರ್ಗೆ ಅಲ್ಲ ರಾಹುಲ್ ಗಾಂಧಿ..!

---Advertisement---

ಬೆಂಗಳೂರು: ಕಾಂಗ್ರೆಸ್ ನ ಹೈಕಮಾಂಡ್ ಹುದ್ದೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಕೂತಿದ್ದಾರೆ. ಆದರೆ ಕಾಂಗ್ರೆಸ್ ನಾಯಕರಿಗೆ ಖರ್ಗೆ ಎಐಸಿಸಿ ಅಧ್ಯಕ್ಷರಂತೆ ಕಾಣ್ತಿಲ್ಲ. ರಾಹುಲ್ ಗಾಂಧಿ ಅವರನ್ನೇ ಎಐಸಿಸಿ ಅಧ್ಯಕ್ಷ ಎಂದುಕೊಂಡಿದ್ದಾರೆ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ವ್ಯಂಗ್ಯವಾಡಿದ್ದಾರೆ.

ಬಿಹಾರದ ಚುನಾವಣೆ ಬಗ್ಗೆ ನಾತನಾಡಿ, ಅಲ್ಲಿನ ಚುನಾವಣೆಯಲ್ಲುಇ ಎಲ್ಲಿಯೂ ಕೂಡ ಎಐಸಿಸಿ ಅಧ್ಯಕ್ಷರ ಫೋಟೋ ಕಾಣಿಸಲೇ ಇಲ್ಲ. ಅಲ್ಲಿ ಅವರಿಗೆ ಯಾವ ಮಹತ್ವವೂ ಇರಲಿಲ್ಲ. ಆದರೆ ರಾಹುಲ್ ಗಾಂಧಿಗೆ ಮಹತ್ವ ಇತ್ತು. ಅಂದ್ರೆ ಹೈಕಮಾಂಡ್ ಯಾರು..? ಮಾನ್ಯ ಖರ್ಗೆಯವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಗಾದೆ ಮಾತಿನ ರೀತಿಯೆ ಕಾಂಗ್ರೆಸ್ಸಿನಲ್ಲಿ ಇದ್ದಾರೆ. ಆದ್ದರಿಂದಾನೆ ಪರಿಸ್ಥಿತಿ ಹೀಗಾಗಿರುವುದು. ಕಾಂಗ್ರೆಸ್ ನಲ್ಲಿ ಒಂದು ಕಡೆ ನಾಯಕತ್ವ ಬದಲಾವಣೆಯಾಗಬೇಕು ಅಂತಾರೆ, ಮತ್ತೊಂದು ಕಡೆ ಸಂಪುಟ ಪುನರ್ ರಚನೆಯಾಗಬೇಕು ಅಂತಾರೆ‌. ಗುಜರಾತ್ ನಲ್ಲಿ ಬೆಳಗ್ಗೆ ರಾಜೀನಾಮೆ ಕೊಟ್ಟು, ಎರಡನೇ ದಿನ ಬೆಳಗ್ಗೆಯೇ ಮತ್ತೊಂದು ಸಚಿವ ಸಂಪುಟವೇ ಪುನರ್ ರಚನೆಯಾಗಿತ್ತು. ಇಲ್ಲಿ ಒಂದು ವರ್ಷದಿಂದ ಸಚಿವ ಸಂಪುಟದ ಪುನರ್ ರಚನೆ ಬಗ್ಗೆ ಕೇಳ್ತಾನೆ ಇದ್ದೀವಿ ಎಂದಿದ್ದಾರೆ.

ಸದ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವ ಸಂಪುಟ ಪುನರ್ ರಚನೆಗೋಸ್ಕರ ಹಲವು ನಾಯಕರು ಕಾಯುತ್ತಿದ್ದಾರೆ. ಸಚಿವ ಸ್ಥಾನದ ಆಕಾಂಕ್ಷಿಗಳು ಹೆಚ್ಚಾಗುತ್ತಿದ್ದಾರೆ. ಬಿಹಾರ ಸೋಲಿನ ಬೇಸರದಲ್ಲಿರುವ ಕಾಂಗ್ರೆಸ್ ಹೈಕಮಾಂಡ್ ನಾಯಕರು ಅನುಮತಿ ಕೊಟ್ಟರೆ ಕೂಡಲೇ ರಾಜ್ಯದಲ್ಲಿ ಸಚಿವ ಸಂಪುಟ ಪುನರ್ ರಚನೆಯಾಗಲಿದೆ. ಹೊಸಬರಿಗೆ ಅವಕಾಶ ಸಿಗಲಿದೆ‌. ಇಲ್ಲಿ ಖರ್ಗೆಯವರು ನಿರ್ಧಾರ ಮಾಡಬೇಕಾ ಅಥವಾ ರಾಹುಲ್ ಗಾಂಧಿ ನಿರ್ಧಾರದ ಬಳಿಕ ಬದಲಾಗುತ್ತಾ ನೋಡಬೇಕಿದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now