Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ‘AI’ ಶಿಕ್ಷಣ : 1,800 ಅತಿಥಿ ಶಿಕ್ಷಕರ ನೇಮಕ, ತಿಂಗಳಿಗೆ ₹20 ಸಾವಿರ ಗೌರವಧನ!

---Advertisement---

ಬೆಂಗಳೂರು.ಜುಲೈ.29: ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ 2026-27ನೇ ಶೈಕ್ಷಣಿಕ ಸಾಲಿನಿಂದ ಎನ್‌ಎಸ್‍ಕ್ಯೂಎಫ್ (NSQF) ಅಡಿಯಲ್ಲಿ ‘ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಇನ್ ಸ್ಕಿಲ್ ಎಜುಕೇಶನ್’ (AI) ವಿಷಯವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಈ ಸಂಬಂಧ ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರ ಕಚೇರಿಯು ಕೃತಕ ಬುದ್ಧಿಮತ್ತೆ (AI) ಅತಿಥಿ ಶಿಕ್ಷಕರ ನೇಮಕಾತಿ ಹಾಗೂ ಅಗತ್ಯ ಪೂರ್ವಸಿದ್ಧತೆಗಳ ಕುರಿತು ಪರಿಷ್ಕೃತ ಅಧಿಕೃತ ಸುತ್ತೋಲೆಯನ್ನು ಹೊರಡಿಸಿದೆ.

ವಿದ್ಯಾರ್ಥಿಗಳಲ್ಲಿ 21ನೇ ಶತಮಾನದ ಕೌಶಲ್ಯಗಳು, ಸಮಸ್ಯೆ ಪರಿಹಾರ ಸಾಮರ್ಥ್ಯ, ಸೃಜನಶೀಲತೆ, ತಾಂತ್ರಿಕ ಜ್ಞಾನ ಹಾಗೂ ಉದ್ಯೋಗಾರ್ಹತೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳ್ಳುತ್ತಿದೆ. 2026-27ನೇ ಶೈಕ್ಷಣಿಕ ಸಾಲಿನಲ್ಲಿ ಹೊಸದಾಗಿ ಅನುಮೋದನೆ ಪಡೆದ 1,180 ಸರ್ಕಾರಿ ಪ್ರೌಢಶಾಲೆಗಳು, ಕಳೆದ ಸಾಲುಗಳಲ್ಲಿ ಅನುಮೋದನೆಗೊಂಡ 381 NSQF ಶಾಲೆಗಳು, 81 ಚಾಲ್ತಿಯಲ್ಲಿರುವ Single Sector ಶಾಲೆಗಳು ಮತ್ತು 158 PM Shri ಶಾಲೆಗಳು ಸೇರಿದಂತೆ ಒಟ್ಟು 1,800 ಶಾಲೆಗಳ 9ನೇ ತರಗತಿಯಲ್ಲಿ ಈ ವಿಷಯ ಅನುಷ್ಠಾನಗೊಳ್ಳಲಿದೆ.

ರೂ. 20,000 ಗೌರವಧನ ಮತ್ತು ಅರ್ಹತೆಗಳು

AI ವಿಷಯ ಜಾರಿಯಾಗುವ ಪ್ರತಿಯೊಂದು ಶಾಲೆಗೂ ಒಬ್ಬರಂತೆ ಕೃತಕ ಬುದ್ಧಿಮತ್ತೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಸೂಚಿಸಲಾಗಿದ್ದು, ಆಯ್ಕೆಯಾದ ಶಿಕ್ಷಕರಿಗೆ ಪ್ರತಿ ತಿಂಗಳು ರೂ. 20,000/- ಗೌರವಧನ ನೀಡಲಾಗುತ್ತದೆ. ಕಂಪ್ಯೂಟರ್ ಸೈನ್ಸ್ ಅಥವಾ ಇನ್ಫಾರ್ಮೇಷನ್ ಟೆಕ್ನಾಲಜಿಯಲ್ಲಿ ಡಿಪ್ಲೋಮಾ, ಬಿ.ಸಿ.ಎ, ಬಿ.ಎಸ್.ಸಿ (CS/IT), ಪಿ.ಜಿ.ಡಿ.ಸಿ.ಎ ಅಥವಾ DOEACC ‘A’ Level ಪ್ರಮಾಣಪತ್ರ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಹರಾಗಿರುತ್ತಾರೆ. ಉನ್ನತ ವಿದ್ಯಾರ್ಹತೆ ಹೊಂದಿರುವವರಿಗೂ ಅವಕಾಶವಿದ್ದು, ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 1 ವರ್ಷದ ಕೆಲಸದ ಅನುಭವ ಹಾಗೂ ಇಂಗ್ಲಿಷ್ ಮತ್ತು ಸ್ಥಳೀಯ ಭಾಷೆಯಲ್ಲಿ ಪರಿಣಾಮಕಾರಿ ಸಂವಹನ ನಡೆಸುವುದು ಕಡ್ಡಾಯವಾಗಿದೆ.

Join WhatsApp

Join Now

Join Telegram

Join Now