Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮದುವೆ ಬಗ್ಗೆ ಮೌನ ಮುರಿದ ನಟಿ ಸೋನಲ್ : ನಿರ್ದೇಶಕರ ಪೋಸ್ಟನ್ನೇ ಹಂಚಿಕೊಂಡ ನಟಿ

---Advertisement---

 

ಬೆಂಗಳೂರು: ಕಳೆದ ಕೆಲವು ದಿನಗಳಿಂದ ತರುಣ್ ಸುಧೀರ್ ಮತ್ತು ಸೋನಲ್ ನಡುವಿನ ಮದುವೆ ವಿಚಾರ ಸಾಕಷ್ಟು ಸುದ್ದಿ ಮಾಡುತ್ತಿದೆ. ಇಬ್ಬರು ಕೂಡ ಅಧಿಕೃತವಾಗಿ ಹೌದು ಎಂದು ಒಪ್ಪಿಕೊಂಡಿರಲೇ ಇಲ್ಲ. ತರುಣ್ ಅವರ ತಾಯಿ ಮಾಲತಿ ಅವರು ತನ್ನ ಮಗ ಸೋನಲ್ ಅವರನ್ನೇ ಮದುವೆಯಾಗುತ್ತಿರುವುದು ಸತ್ಯ ಎಂದೇ ಒಪ್ಪಿಕೊಂಡಿದ್ದರು. ಆದರೆ ನಟಿ-ನಿರ್ದೇಶಕ ಮಾತ್ರ ಹೇಳಿರಲಿಲ್ಲ.

ಅದರಲ್ಲೂ ಮದುವೆ ವಿಚಾರವನ್ನು ತುಂಬಾ ವಿಶೇಷವಾಗಿ ಹೇಳಬೇಕು ಎಂಬುದು ತರುಣ್ ಸುಧೀರ್ ಅವರ ಅಭಿಲಾಷೆಯಾಗಿತ್ತು. ಇದೀಗ ಅದಕ್ಕೂ ದಿನಾಂಕ ನಿಗಧಿ ಮಾಡಿದ್ದಾರೆ. ನಾಳೆ ಪ್ರೆಸ್ ಮೀಟ್ ಕರೆದಿದ್ದು, ಮದುವೆ, ಲವ್ ವಿಚಾರವನ್ನು ತಿಳಿಸಲಿದ್ದಾರೆ. ಅದಕ್ಕೂ ಮುನ್ನ ಸೋನಲ್ ಹಾಗೂ ತರುಣ್ ಒಂದೇ ಪೋಸ್ಟನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

 

ಡೈರೆಕ್ಟರ್ ಮತ್ತು ನಟಿ ಅಂತ ಚೇರ್ ಮೇಲೆ ಬರೆದಿರುವ ಫೋಟೋವದು. ಸುತ್ತಲು ಸಿನಿಮಾದ ಎಕ್ಯುಪ್ ಮೆಂಟ್ ಗಳೇ ಇದಾವೆ. ಸೋನಲ್ ಈ ಪೋಸ್ಟ್ ಅನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ನಟಿಯ ಜೀವನಕ್ಕೆ ನಿರ್ದೇಶಕ ಬಂದಾಯ್ತು ಅಂತ ಬರೆದುಕೊಂಡಿದ್ದರೆ, ತರುಣ್ ಸುಧೀರ್, ನಿರ್ದೇಶಕನ ಜೀವನಕ್ಕೆ ನಟಿ ಸಿಕ್ಕಾಯ್ತು ಎಂದು ಬರೆದುಕೊಂಡಿದ್ದಾರೆ.

ಇನ್ನು ತರುಣ್ ಸುಧೀರ್ ಇತ್ತೀಚೆಗಷ್ಟೇ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿ, ದರ್ಶನ್ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ನನ್ನ ಮದುವೆ ಸಮಯಕ್ಕೆ ಖಂಡಿತ ದರ್ಶನ್ ಅವರು ಬಂದೇ ಬರ್ತಾರೆ ಎಂಬ ಭರವಸೆಯ ಮಾತನ್ನು ಆಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಜೈಲಲ್ಲಿರುವ ದರ್ಶನ್ ವಕೀಲರು, ಇನ್ನು ಜಾಮೀನಿಗೂ ಅರ್ಜಿ ಸಲ್ಲಿಸಿಲ್ಲ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...