Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

IVF ಮೂಲಕ ಗರ್ಭಿಣಿಯಾದ ನಟಿ ಭಾವನಾ 7 ತಿಂಗಳಿಗೆ ಸೀಮಂತ..!

---Advertisement---

 

ಚಂದ್ರಮುಖಿ ಪ್ರಾಣಸಖಿ ನಟಿ ಭಾವನಾ ರಾಮಣ್ಣ ಐವಿಎಫ್ ಮೂಲಕ ಗರ್ಭಿಣಿಯಾಗಿರೋ ವಿಚಾರವನ್ನ ಅವರೇ ಎಲ್ಲರ ಮುಂದೆ ಹೇಳಿಕೊಂಡಿದ್ದಾರೆ. ಯಾಕೆ ಈ ನಿರ್ಧಾರ ಎಂಬುದರ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ. ಸದ್ಯ ಅವರಿಗೆ ಏಳು ತಿಂಗಳು ತುಂಬಿದೆ. ಹೀಗಾಗಿ ಸೀಮಂತ ಕಾರ್ಯವನ್ನು ನೆರವೇರಿಸಿದ್ದಾರೆ. ಐವಿಎಫ್ ಮೂಲಕ ಗರ್ಭಿಣಿಯಾಗಿರುವ ಕಾರಣ ನಾರ್ಮಲ್ ಡೆಲಿವರಿ ಆಗಲ್ಲ ಎಂಬ ಮಾಹಿತಿಯನ್ನು ಭಾವನಾ ರಾಮಣ್ಣ ನೀಡಿದ್ದಾರೆ. ಯಾವಾಗ ಡೆಲಿವರಿ ಪೈನ್ ಬರುತ್ತೋ ಆಗಲೇ ಸಿ ಸೆಇ್ಷನ್ ನಲ್ಲಿ ಹೆರಿಗೆ ಮಾಡಿಸಲಾಗುತ್ತೆ. ಹೀಗಾಗಿ ಏಳು ತಿಂಗಳು ತುಂಬುತ್ತಿದ್ದಂತೆ ಸೀಮಂತ ಕಾರ್ಯ ಮಾಡಿಕೊಂಡಿದ್ದಾರೆ.

ಸಂಪ್ರದಾಯದಂತೆ ತಮ್ಮ ಸೀಮಂತ ಕಾರ್ಯವನ್ನ ಮಾಡಿಕೊಂಡಿದ್ದಾರೆ. ಈ ಸೀಮಂತಕ್ಕೆ ಆತ್ಮೀಯರು, ಸಂಬಂಧಿಗಳಿಗಷ್ಟೇ ಆಹ್ವಾನ ನೀಡಿದ್ದಾರೆ. ಹಸಿರು ಹಾಗೂ ಕೆಂಪು ಬಾರ್ಡರ್ ಮಿಶ್ರಿತ ರೇಷ್ಮೆ ಸೀರೆಯನ್ನ ಹುಟ್ಟು ಅದ್ದೂರಿಯಾಗಿ ಸೀಮಂತ ಕಾರ್ಯ ಮಾಡಿಕೊಂಡಿದ್ದಾರೆ. 40ನೇ ವಯಸ್ಸಿನಲ್ಲಿರುವ ಭಾವನಾ ಅವಳಿ ಮಕ್ಕಳಿಗೆ ತಾಯಿಯಾಗ್ತಿದ್ದಾರೆ.

ಸದ್ಯ ಈ ಫೋಟೋ, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಓಡಾಡ್ತಾ ಇದಾವೆ. ಗಾಯಕಿ ಅರ್ಚನಾ ಉಡುಪ ಅವರು ಕೂಡ ಈ ಸೀಮಂತ ಕಾರ್ಯದಲ್ಲಿ ಭಾಗಿಯಾಗಿದ್ದು, ಗರ್ಭಿಣಿಗಾಗಿ ಹಾಡನ್ನು ಹಾಡಿದ್ದಾರೆ. ಇನ್ನು ಭಾವನಾ ರಾಮಣ್ಣನಿಗೆ ಮಕ್ಕಳೆಂದರೆ ಮೊದಲಿನಿಂದಲೂ ಪ್ರೀತಿ. ಆದರೆ ಮದುವೆಯಾಗಿಲ್ಲ. ಮದುವೆಯಾಗದೆ ಮಕ್ಕಳನ್ನು ಪಡೆಯೋಕೆ ಸಾಧ್ಯವಿಲ್ಲವಾ ಎಂದು ಯೋಚಿಸಿದಾಗ ಐವಿಎಫ್ ಮೂಲಕ ಮಕ್ಕಳನ್ನು ಪಡೆದಿದ್ದಾರೆ. ಅವಳಿ ಮಕ್ಕಳ ತಾಯಿಯಾಗ್ತಿರೋ ಭಾವನಾಗೆ ಕುಟುಂಬಸ್ಥರು, ಆಪ್ತರು ಸೇರಿ ಸೀಮಂತ ಮಾಡಿದ್ದಾರೆ. ಇನ್ನು ಕೆಲವೇ ತಿಂಗಳಲ್ಲಿ ಭಾವನಾಗೆ ಅವಳಿ ಮಕ್ಕಳು ಜನಿಸಲಿವೆ. ತಂದೆ ಯಾರು ಅಂತ ಕೇಳಿದ್ರೆ ಮಕ್ಕಳಿಗೆ ಹೇಳುವ ಶಕ್ತಿ ನನ್ನಲಿದೆ ಅಂತ ಭಾವನಾ ಧೈರ್ಯವಾಗಿಯೇ ಹೇಳಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...