Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿತ್ರದುರ್ಗ | SmyleXL ದಂತ ಚಿಕಿತ್ಸಾಲಯ ಉದ್ಘಾಟಿಸಿದ ನಟಿ ಅದಿತಿ ಪ್ರಭುದೇವ್

---Advertisement---

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 06 : ಒಂದು ನಗು ತುಂಬಾ ಮುಖ್ಯ. ಒಂದು ನಗು ಸಾವಿರ ಕಥೆಗಳನ್ನು ಹೇಳಬಲ್ಲದು ಮತ್ತು ಸೌಂದರ್ಯದ ಚಿತ್ರಣವನ್ನು ತೋರಿಸಬಲ್ಲದು. ಜನರು ನಿಮ್ಮ ಬಗ್ಗೆ ಮೊದಲು ಗಮನಿಸುವ ವಿಷಯವೆಂದರೆ ನಿಮ್ಮ ಮುಖ, ಮತ್ತು ಸುಂದರವಾದ ನಗು ದೊಡ್ಡ ಪರಿಣಾಮ ಬೀರುತ್ತದೆ ಎಂದು ಖ್ಯಾತ ಚಲನಚಿತ್ರ ನಟಿ ಅದಿತಿ ಪ್ರಭುದೇವ್ ಹೇಳಿದರು.

ಅವರು ನಗರದ ಬಿ.ಡಿ.ರಸ್ತೆಯ ಎಸ್.ಬಿ.ಐ. ವೃತ್ತದಲ್ಲಿ ನೂತನ SmyleXL ದಂತ ಚಿಕಿತ್ಸಾಲಯವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒತ್ತಡದ ಬದುಕಿನಲ್ಲಿ ನಗು ಬಹಳ ಮುಖ್ಯ. ನಗುವಿನಷ್ಟೇ ಮುಖ್ಯವಾದದ್ದು ನಮ್ಮ ಬಾಯಿಯ ಆರೋಗ್ಯ. ಆದ್ದರಿಂದ ಎಲ್ಲರೂ ಬಾಯಿಯ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಇಂದಿನಿಂದ ಆರಂಭವಾದ SmyleXL ದಂತ ಚಿಕಿತ್ಸಾಲಯ ನಿಮ್ಮ ನಗುವನ್ನು ಮತ್ತಷ್ಟು ಮೆರುಗುಗೊಳಿಸುತ್ತದೆ. ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸೌಲಭ್ಯಗಳನ್ನು ಹೊಂದಿರುವ ಈ ಕ್ಲಿನಿಕ್ ನಲ್ಲಿ ಚಿಕಿತ್ಸೆ ಪಡೆಯುವ ಮೂಲಕ ನಿಮ್ಮ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಹೇಳಿದರು.

ಈ ಸಂದರ್ಭದಲ್ಲಿ SmyleXL ದಂತ ಚಿಕಿತ್ಸಾಲಯದ ಸಂಸ್ಥಾಪಕರಾದ ಡಾ.ಪ್ರಸನ್ನ ಕುಮಾರ್, ಶ್ರೀಮತಿ ವೀಣಾ ಪ್ರಸನ್ನ ಕುಮಾರ್, ನಿರ್ದೇಶಕರಾದ ಶ್ರೀಮತಿ ರೀನಾ ಮತ್ತು ಡಾ. ಸುಜಿತ್ ಪರ್ದೇಶಿ ಸೇರಿದಂತೆ ಮತ್ತಿತರರು ಇದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...