Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕೋರ್ಟ್ ಮುಂದೆ‌ಮತ್ತೊಂದು ಮನವಿಯಿಟ್ಟ ನಟ ದರ್ಶನ್

---Advertisement---

 

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ಸಾಕ್ಷಿಗಳ ಟ್ರಯಲ್ ನಡೀತಾ ಇದೆ. ಈ ಸಾಕ್ಷಿಗಳ ಟ್ರಯಲ್ ವೇಳೆಯೇ ತನಿಖಾಧಿಕಾರಿಗಳ ಯಡವಟ್ಟನ್ನ ವಕೀಲರು ಹೊರಗೆಳೆಯುವ ಕೆಲಸ ಮಾಡುತ್ತಿದ್ದಾರೆ. ಇದೆಲ್ಲವೂ ಆರೋಪಿ ಸ್ಥಾನದಲ್ಲಿರುವವರಿಗೆ ಕೊಂಚ ಸಹಾಯವೂ ಆಗಬಹುದು. ಸುಳ್ಳು ಸಾಕ್ಷಿಗಳ ಸೃಷ್ಟಿ ಅಂತ ವಾದವನ್ನು ಮಂಡಿಸಬಹುದು. ಇದರ ಬೆನ್ನಲ್ಲೇ ಇದೀಗ ದರ್ಶನ್ ಕಡೆಯಿಂದ ಕೋರ್ಟ್ ಗೆ ಮತ್ತೊಂದು ಮನವಿಯನ್ನ ಮಾಡಲಾಗಿದೆ.

ದರ್ಶನ್ ಕೋರ್ಟ್ ಗೆ ಅರ್ಜಿಯೊಂದನ್ನ ಸಲ್ಲಿಕೆ ಮಾಡಿದ್ದು, ಆ‌ ಅರ್ಜಿಯಲ್ಲಿ ಕುಟುಂಬದ ಜೊತೆಗೆ ಒಳ ಸಂದರ್ಶನಕ್ಕೆ ಮನವಿಯನ್ನ ಮಾಡಿಕೊಂಡಿದ್ದಾರೆ. ಆ ಅರ್ಜಿ ವಿಚಾರಣೆಯನ್ನು ಮಾರ್ಚ್ 2ರಂದು ಕೋರ್ಟ್ ನಡೆಸಲಿದೆ. ಒಳ ಸಂದರ್ಶನ ಕೊಡುವುದಕ್ಕೆ ಸಾಧ್ಯವಿಲ್ಲ ಎಂದು ಆಕ್ಷೇಪಣೆಯನ್ನು ಸಲ್ಲಿಸುವುದಕ್ಕೆ ಜೈಲು ಅಧಿಕಾರಿಗಳು ಕೂಡ ಸಿದ್ಧತೆಯನ್ನ ನಡೆಸಿದ್ದಾರೆ ಎನ್ನಲಾಗಿದೆ. ಜೈಲಿನಲ್ಲಿ ಅಕ್ರಮಗಳ ಬಗ್ಗೆ ಸಾಕಷ್ಡು ಆರೋಪಗಳಿವೆ. ಒಬ್ಬರಿಗೆ ಅವಕಾಶ ನೀಡಿದರೆ ಬೇರೆಯವರೂ ಕೇಳ್ತಾರೆ ಎಂಬ ಕಾರಣವನ್ನಿಟ್ಟುಕೊಂಡು ದರ್ಶನ್ ಅರ್ಜಿ ಆಕ್ಷೇಪಣೆಗೆ ಜೈಲಾಧಿಕಾರಿಗಳಿಂದ ಸಿದ್ಧತೆ ನಡೆಸಲಾಗಿದೆ.

ಒಳ ಸಂದರ್ಶನ ಎಂದಾಗ ಒಂದು ಕೊಠಡಿಯಲ್ಲಿ ಫ್ಯಾಮಿಲಿ ಜೊತೆಗೆ ಮಾತನ್ನಾಡುವುದು. ಪೊಲೀಸರು ಅಲ್ಲಿಯೇ ಇದ್ದರು ಕೂಡ ಕೇಳಿಸುವಷ್ಟು ಹತ್ತಿರದಲ್ಲಿ ಇರುವುದಿಲ್ಲ. ಒಂದು ರೀತಿಯ ವೈಯಕ್ತಿಕವಾಗಿ ಮಾತನ್ನಾಡುವುದು. ದರ್ಶನ್ ಈ ಮೊದಲು ಹಾಸಿಗೆ ದಿಂಬು ಬೇಕು ಅಂತಾನು ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ಜೈಲಿನ ಸೌಲಭ್ಯ ಬಿಟ್ಟು ಕೇಳಿದ್ದೆಲ್ಲವನ್ನು ಕೊಡುವುದಕ್ಕೆ ಕಾನೂನಿನಲ್ಲಿ ನಿಯಮವಿಲ್ಲ. ಎಲ್ಲಾ ಕೈದಿಗಳು ಅದೇ ರೀತಿ ಕೇಳಿದರೆ ಕಷ್ಟವಾಗುತ್ತದೆ ಎಂದೇ ಜೈಲಧಿಕಾರಿಗಳು ವಾದ ಮಂಡಿಸಿದ್ದರು. ಸದ್ಯಕ್ಕೆ ದರ್ಶನ್ ಕೊಠಡಿಯಲ್ಲಿ ಟಿವಿಯೊಂದನ್ನ ನೀಡಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now