ಸೇವೆಯಲ್ಲಿ ಇರುವಾಗ ಮಾಡಿದ ಕಾರ್ಯ ಶಾಶ್ವತ : ಬೀರಪ್ಪ ಅಂಡಗಿ ಚಿಲವಾಡಗಿ

suddionenews
1 Min Read

ಇಲಕಲ್ಲ: ವ್ಯಕ್ತಿ ತಾನು ಸೇವೆಯಲ್ಲಿ ಇರುವಾಗ ಮಾಡಿದ ಕಾರ್ಯ ಮಾತ್ರ ಶಾಶ್ವತವಾಗಿ ಉಳಿಯಲು ಸಾಧ್ಯವಾಗುತ್ತದೆ ಎಂದು ವಿಕಲಚೇತನ ನೌಕರರ ಸಂಘಷ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಹೇಳಿದರು.

ಅವರ ನಗರದಲ್ಲಿ ನಿವೃತ್ತಿಯಾದ. ಎಂ.ಆರ್.ಗೌಡರ ಅವರ ನಿವೃತ್ತಿಯಾದ ಹಿನ್ನಲೆಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಯಾವುದೇ ಒಬ್ಬ ವ್ಯಕ್ತಿಯು ತಾನು ಅಧಿಕಾರದಲ್ಲಿ ಇದ್ದಾಗ ಮಾಡಿದ ಕಾರ್ಯಗಳು ಮಾತ್ರ ಶಾಶ್ವತವಾಗಿ ಉಳಿಯುತ್ತವೆ.ಸರಕಾರಿ ನೌಕರರು ಸೇವೆಗೆ ಸೇರಿದ ಮೇಲೆ ನಿವೃತ್ತಿ ಹೊಂದಲೇ ಬೇಕು.ಆದರೆ ಆ ಸೇವೆಯಲ್ಲಿ ಇರುವಷ್ಟು ದಿನ ಉತ್ತಮ ಕಾರ್ಯಗಳನ್ನು ಮಾಡಬೇಕು.ಕೊನೆಯಲ್ಲಿ ಉಳಿಯುವುದು ಅಂತಹ ಕಾರ್ಯಗಳು ಮಾತ್ರ ಉಳಿಯುತ್ತವೆ.ಎಂ.ಆರ್.ಗೌಡರ ಅವರು ಶಿಕ್ಷಕರಾಗಿದ್ದುಕೊಂಡು ಅನೇಕ ಉತ್ತಮ ಕಾರ್ಯಗಳನ್ನು ಮಾಡಿದ್ದಾರೆ.ಅಲ್ಲದೇ ವಿಕಲಚೇತನ ನೌಕರರ ಸಂಘದ ಅಧ್ಯಕ್ಷರಾಗಿ ಕೂಡಾ ಅನೇಕ ಮಾದರಿಯ ಕೆಲಸ ಮಾಡುವ ಮೂಲಕ‌ ವಿಕಲಚೇತನ ನೌಕರರ ಮನಸ್ಸಿನಲ್ಲಿ ಉಳಿದಿದ್ದಾರೆ.ಅಲ್ಲದೇ ಅವರ ಮುಂದಿನ ಜೀವನ‌ ಕೂಡಾ ಉತ್ತಮವಾಗಿ ಇರಲಿ ಎಂದು ಹಾರೈಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಆರ್.ಗೌಡರ ಅವರು ಮಾತನಾಡಿ,ನನ್ನ ಸೇವೆಯನ್ನು ಗುರುತಿಸಿ ನೀವು ಮಾಡಿದ ಸನ್ಮಾನ ಬಹಳ‌ ಮಹತ್ವದಾದ ಹಾಗೂ ಅತ್ಯಂತ ಖುಷಿಯ ಸಂಗತಿಯಾಗಿದೆ.ಸೇವೆಯಿಂದ ನಿವೃತ್ತಿಯಾಗಿದ್ದೆನೆ.ಆದರೆ ಕಾರ್ಯದಿಂದ ನಿವೃತ್ತಿ ಆಗಿಲ್ಲಾ.ಜೀವನ ಇರುವ ತನಕ‌ ವಿಕಲಚೇತನರ ಸೇವೆಗೆ ಬದ್ದ ಎಂದು ಹೇಳಿದರು.

ಈ‌ ಸಮಯದಲ್ಲಿ ವಿಕಲಚೇತನ ನೌಕರರ ಸಂಘದ ಜಿಲ್ಲಾ ಖಜಾಂಚಿ ಸಂಗಮೇಶ ರೆಶ್ಮಿ,ಆಶಾ ದೀಪಾ‌ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ರಘು ಹುಬ್ಬಳ್ಳಿ,ವಿಕಲಚೇತನ ಶಿಕ್ಷಕರಾದ ಬಿ.ಎಸ್.ಬಂಡಿ,ಸತೀಶ ಕೊಪ್ಪರದ,ಯಮನೂರಪ್ಪ ಗುಂಡಿಹಿಂದಿನ,ನಿರ್ಮಾಲಾ ಲೊನಕರ್ ಮುಂತಾದವರು ಹಾಜರಿದ್ದರು

Share This Article
Leave a Comment

Leave a Reply

Your email address will not be published. Required fields are marked *