Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಪ್ರೀತಿಸಿ ವಂಚಿಸಿದ ಆರೋಪ : ಚಿತ್ರದುರ್ಗದ ಪೊಲೀಸರ ಸಮ್ಮುಖದಲ್ಲಿಯೇ ಮದುವೆ..!

---Advertisement---

ಚಿತ್ರದುರ್ಗ: ಶಿಕ್ಷಕರು ಎಂದರೆ ಭವಿಷ್ಯದ ಗುರುಗಳು. ಅವರಿಂದಾನೇ ಜೀವನ ಸರಿ ದಾರಿಗೆ ಬರುವುದು ಎಂಬ ನಂಬಿಕೆ ಇನ್ನು ಇದೆ. ಶಿಕ್ಷಕರು ಮೋಸ ಮಾಡೋದನ್ನ ಹೇಳಿಕೊಡಲ್ಲ, ಸುಳ್ಳು ಹೇಳುವುದನ್ನ ಕಲಿಸುವುದಿಲ್ಲ ಎಂಬ ನಂಬಿಕೆ. ಆದರೆ ಶಿಕ್ಷಕರೇ ಆ ರೀತಿಯ ತಪ್ಪು ಮಾಡಿದರೆ ಹೇಗೆ. ಇಂಥದ್ದೊಂದು ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. 8 ವರ್ಷದಿಂದ ಪ್ರೀತಿಸಿ, ಯುವತಿಗೆ ಶಿಕ್ಷಕ ಮೋಸ ಮಾಡಲು ಯತ್ನಿಸಿದ್ದ ಘಟನೆ ಭರಮಸಾಗರದಲ್ಲಿ ನಡೆದಿದೆ. ಆದರೆ ಪೊಲೀಸರ ಸಮ್ಮುಖದಲ್ಲಿಯೇ ಆ ಯುವತಿಗೆ ಶಿಕ್ಷಕ ತಾಳಿ ಕಟ್ಟಿದ್ದಾನೆ.

ಚುತ್ರದುರ್ಗದ ಭರಮಸಾಗರ ಪೊಲೀಸರ ಸಮ್ಮುಖದಲ್ಲಿಯೇ ದೇವಸ್ಥಾನವೊಂದರಲ್ಲಿ ವಿವಾಹ ಆಗಿದೆ. ಮೋಸ ಮಾಡಲು ಯತ್ನಿಸಿದ್ದ ಶಿಕ್ಷಕ ಹರೀಶ್ ಪರಶುರಾಂಪುರ ಶಾಲೆಯಲ್ಲಿ ಶಿಕ್ಷಕನಾಗಿ ವೃತ್ತಿ ಮಾಡುತ್ತಿದ್ದರು. ಮೂಲತಃ ತಣಿಗೆಹಳ್ಳಿ ಅವರು. ಈ ಹರೀಶ್ ಗೂ ಹಾಗೂ ಇಸಾಮುದ್ರ ಗೊಲ್ಲರಹಟ್ಟಿಯ ಕಾವ್ಯಾಗೂ ನಿಶ್ಚಿತಾರ್ಥ ಆಗಿತ್ತು. ಕಾವ್ಯಾ ಹಾಗೂ ಹರೀಶ್ ಪರಸ್ಪರ ಸಂಬಂಧಿಕರು ಕೂಡ ಆಗಿದ್ದರು, ಇಬ್ಬರು ಪ್ರೀತಿ ಮಾಡ್ತಾ ಇದ್ದರು. ಆದರೆ ವರದಕ್ಷಿಣೆ ಆಸೆಗೆ ಕಾವ್ಯಾರನ್ನ ಬಿಟ್ಟು, ಬೇರೆ ಯುವತಿ ಜೊತೆಗೆ ಮದುವೆಯಾಗಲು ಪ್ರಯತ್ನಿಸಿದ್ದಾರೆ.

ಈ ವಿಚಾರ ತಿಳಿದ ಕೂಡಲೇ ಕಾವ್ಯಾ ಭರಮಸಾಗರ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದರು. ನಂತರ ಶಿಕ್ಷಕ ಹರೀಶ್ ನನ್ನು ಪೊಲೀಸ್ ಠಾಣೆಗೆ ಕರೆಸಿ, ವಿಚಾರಣೆ ನಡೆಸಿದ್ದಾರೆ. ಠಾಣೆಯಲ್ಲಿಯೇ ಪೊಲೀಸರು ಮದುವೆ ಕೂಡ ಮಾಡಿಸಿದ್ದಾರೆ. ಮನೆಯಲ್ಲಿ ಮದುವೆ ಆಗ್ತೀನಿ ಅಂತ ಹೇಳಿ, ಮೋಸ ಮಾಡಲು ಯತ್ನಿಸಿದ್ದ ಶಿಕ್ಷಕನಿಗೆ ಪ್ರೀತಿಸಿದ ಯುವತಿ ಸರಿಯಾಗಿಯೆ ಬುದ್ಧಿ ಕಲಿಸಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now