ಚಿಕ್ಕಮಗಳೂರು: ಮಂಗನ ಕಾಯಿಲೆ ರಾಜ್ಯದ ಜನರಿಗೆ ಮತ್ತೆ ಆತಂಕ ತಂದೊಡ್ಡಿದೆ. ರಾಜ್ಯದ ಕೆಲವು ಕಡೆ ಮಂಗನ ಕಾಯಿಲೆಯ ಲಕ್ಷಣಗಳು ಹೆಚ್ಚಾಗಿದ್ದು, ಜನ ಭಯಭೀತರಾಗಿದ್ದಾರೆ. ಚಿಕ್ಕಮಗಳೂರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ನೆರೆಯ ಎನ್.ಆರ್.ಪುರ ತಾಲೂಕಿನಲ್ಲಿ ಒಂಭತ್ತು ಜನರಿಗೆ ಸೋಂಕು ದೃಢಪಟ್ಟಿದೆ. ಹೀಗಾಗಿ ಚಿಕ್ಕಮಗಳೂರಿನಾದ್ಯಂತ ಹೈ ಅಲರ್ಟ್ ಆಗಿರುವಂತೆ ತಿಳಿಸಿದ್ದಾರೆ.
ಊರಿನಲ್ಲಿ ಯಾರಿಗಾದರೂ ಜ್ವರ ಬಂದರೆ ತಕ್ಷಣ ಆಸ್ಪತ್ರೆಗೆ ದಾಖಲಾಗುವಂತೆ ಸೂಚನೆ ನೀಡಿದ್ದಾರೆ. ರಕ್ತ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯುವಂತೆ ಹೇಳಿದ್ದಾರೆ. ಜಾಗರೂಕತೆಯಿಂದ ಇರಲು ಆರೋಗ್ಯ ಇಲಾಖೆ ಹೇಳಿದೆ. ಈಗಾಗಲೇ 595 ಮಂದಿಯ ರಕ್ತ ಪರೀಕ್ಷೆಯನ್ನು ಆರೋಗ್ಯ ಇಲಾಖೆ ಮಾಡಿದೆ. ಇದರ ವರದಿ ಬಂದ ಬಳಿಕ ಯಾರಿಗಾದರೂ ಮಂಗನ ಕಾಯಿಲೆಯ ಲಕ್ಷಣವಿದೆಯಾ ಎಂಬುದು ತಿಳಿದು ಬರಲಿದೆ. ಈಗಾಗಲೇ ಮಂಗನ ಕಾಯಿಲೆಯಿಂದ ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಮಂಗನ ಕಾಯಿಲೆಗೆ ಯುವಕ ಬಲಿಯಾಗಿದ್ದಾನೆ. ಇದರಿಂದ ಶಿವಮೊಗ್ಗದ ಜನರಲ್ಲೂ ಆತಂಕ ಮನೆ ಮಾಡಿದೆ.
ಮಂಗನ ಕಾಯಿಲೆ ಬಂದರೆ, ತೀವ್ರವಾದ ಜ್ವರವಿರುತ್ತದೆ. ಹಣೆ ಮತ್ತು ತಲೆಯ ಹಿಂಭಾಗದಲ್ಲಿ ವಿಪರೀತ ನೋವು ಇರುತ್ತದೆ. ಮೈಕೈ ಮತ್ತು ಸ್ನಾಯುಗಳಲ್ಲಿ ನೋವು ಕಾಣಿಸಿಕೊಳ್ಳುತ್ತಿದೆ. ಮೂಗಿನಿಂದ ರಕ್ತ ಸೋರುತ್ತದೆ. ವಾಂತಿ, ಅಸ್ವಸ್ಥತೆ ಮತ್ತು ಮಾನಸಿಕ ಗೊಂದಲಗಳು ಕಾಡುತ್ತವೆ. ಈ ರೀತಿಯ ಲಕ್ಷಣ ಇರುವವರನ್ನು ಉಣ್ಣಿ ಕಚ್ಚಿ, ಬೇರೊಬ್ಬರನ್ನು ಕಚ್ಚುವುದರಿಂದ ಕಾಯಿಲೆ ಬೇಗ ಹರಡುತ್ತದೆ. ಸೋಂಕಿತ ಮಂಗಗಳಿಂದ ಉಣ್ಣಿಗೆ, ಉಣ್ಣಿಯಿಂದ ಮನುಷ್ಯರಿಗೆ ಹರಡುತ್ತದೆ. ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡದ ಮಲೆನಾಡಿನ ಭಾಗದಲ್ಲಿ ಈ ಕಾಯಿಲೆ ಹೆಚ್ಚಾಗಿ ಕಂಡು ಬರುತ್ತದೆ. ಹೀಗಾಗಿ ಆ ಭಾಗದ ಜನ ಬಹಳ ಎಚ್ಚರದಿಂದ ಇರಬೇಕಾಗಿದೆ.
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






