Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಪರೀಕ್ಷೆ ಬರೆದು ಮನೆಗೆ ಬರ್ತಿದ್ದ ವಿದ್ಯಾರ್ಥಿನಿ ಕತ್ತು ಕೊಯ್ದು ಹತ್ಯೆ : ಬೆಂಗಳೂರು ನಡುಗಿಸಿದ ವಿಘ್ನೇಶ್

---Advertisement---

 

ಬೆಂಗಳೂರು: ಪ್ರೀತಿ, ಪ್ರೇಮ ಅಂತ ಸೈಕೋಗಳ ರೀತಿ ಆಡಿ ಅದೆಷ್ಟೋ ಹುಡುಗರು ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದಲ್ಲದೆ ಹುಡುಗಿಯರ ಜೀವನವನ್ನೇ ಕೊಂದು ಬಿಡುತ್ತಾರೆ. ಅಂತಹದ್ದೇ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಪರೀಕ್ಷೆ ಮುಗಿಸಿ ಮನೆಗೆ ಬರುತ್ತಿದ್ದ ವಿದ್ಯಾರ್ಥಿನಿಯನ್ನು ವಿಘ್ನೇಶ್ ಎಂಬಾತ ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಬೆಂಗಳೂರಿನ ಮಂತ್ರಿಮಾಲ್ ನ ರೈಲ್ವೆ ಟ್ರ್ಯಾಕ್ ಬಳಿ ನಡೆದಿದೆ.

ಯಾಮಿನಿ ಪ್ರಿಯಾ ಕೊಲೆಯಾದ ವಿದ್ಯಾರ್ಥಿನಿ. ಯಾಮಿನಿ ಲವ್ ಮಾಡದೆ ಇರುವುದಕ್ಕೆ ಈ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಯಾಮಿನಿ ಪ್ರಿಯಾ ಬಿ ಫಾರ್ಮಾ ಮಾಡುತ್ತಿದ್ದರು. ಇಂದು ಬೆಳಗ್ಗೆ 7 ಗಂಟೆಗೇನೆ ಮನೆಯಿಂದ ಕಾಲೇಜಿಗೆ ಹೋಗಿದ್ದಾರೆ. ಮಧ್ಯಾಹ್ನ ಕಾಲೇಜು ಮುಗಿಸಿ, ಮನೆಗೆ ಬರುತ್ತಿದ್ದಾಗ ಹಿಂದಿನಿಂದ ಬೈಕ್ ನಲ್ಲಿ ಬಂದ ವಿಘ್ನೇಶ್, ಕತ್ತು ಕೊಯ್ದು ಕೊಲೆ ಮಾಡಿದ್ದಾನೆ. ಅಲ್ಲಿಂದ ತಕ್ಷಣ ಆರೋಪಿ ಪರಾರಿಯಾಗಿದ್ದಾನೆ.

ಈ ಸಂಬಂಧ ಶ್ರೀರಾಮಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ವಿಘ್ನೇಶ್ ಎಂಬಾತನ ಮೇಲೆ ಪೊಲೀಸರಿಗೂ ಅನುಮಾನವಿದ್ದು, ಆತನ ಹುಡುಕಾಟ ಶುರು ಮಾಡಿದ್ದಾರೆ. ಪ್ರೀತಿ, ಪ್ರೇಮ ಅಂತ ಹುಡುಗಿಯ ಬದುಕನ್ನೇ ಹಾಳು ಮಾಡಿದ್ದಾನೆ. ಇನ್ನು ತನಿಖೆಯ ನಂತರವಷ್ಟೇ ಸತ್ಯಾಸತ್ಯತೆ ತಿಳಿಯಲಿದೆ. ಅದೆಲ್ಲ ಏನೇ ಇರಲಿ, ಕೊಂದ ಹುಡುಗಿಯ ಬಗ್ಗೆ ಮನೆಯವರೆಲ್ಲ ಎಷ್ಟು ಕನಸ್ಸನ್ನ ಇಟ್ಟುಕೊಂಡಿದ್ದರು, ಯಾಮಿನಿ ಪ್ರಿಯಾಗೇನೆ ಎಷ್ಟು ಕನಸುಗಳಿದ್ದವು. ಒಂದೇ ಏಟಿಗೆ ಆ ಕನಸುಗಳೆಲ್ಲ ಕಮರುವಂತೆ ಮಾಡಿ ಬಿಟ್ಟ ಆತ. ಈಗ ಆಕೆಯೂ ಇಲ್ಲ, ಈತ ಬಯಸುತ್ತಿದ್ದ ಪ್ರೀತಿಯು ಇಲ್ಲದಂತಾಗಿದೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now