ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್‌ನಿಂದ 12ನೇ ತರಗತಿವರೆಗೆ)
ದಾವಣಗೆರೆ: ಕಳೆದ ಕೆಲವು ತಿಂಗಳುಗಳಿಂದ ಅಡಿಕೆ ಬೆಲೆಯಲ್ಲಿ ಬಾರೀ ಏರಿಕೆಯಾಗುತ್ತಲೆ ಇದೆ. ಇದು ಅಡಿಕೆ ಬೆಳೆಗಾರರಿಗೆ ಸಂತಸವನ್ನ ತಂದಿದೆ. ಕಷ್ಟಪಟ್ಟು ಕಾಪಾಡಿಕೊಳ್ಳುವ ಬೆಳೆಗೆ ಒಳ್ಳೆ ಬೆಲೆ ಸಿಗ್ತಾ ಇರೋದಕ್ಕೆ ರೈತರಿಗೆ ಇನ್ನಿಲ್ಲದ ಸಂತಸ ಕಾಣಿಸುತ್ತಿದೆ. ಹಾಗಾದ್ರೆ ಇಂದಿನ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಎಷ್ಟಿದೆ ಎಂಬುದನ್ನ ನೋಡೋಣಾ.
ದಾವಣಗೆರೆ ಭಾಗದಲ್ಲಿ ಹೆಚ್ಚಿನ ಬೆಳೆಗಾರರು ಅಡಿಕೆಯನ್ನೇ ಬೆಳೆಯುವುದು. ಇಂದಿನ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಗೆ 57,500 ರೂಪಾಯಿಗೆ ಮಾರಾಟವಾಗಿದೆ. ಈ ಮೂಲಕ ರೈತರಿಗೆ ಡಬ್ಬಲ್ ಖುಷಿ ಸಿಕ್ಕಿದೆ. ದಾವಣಗೆರೆಯಲ್ಲಿಯೇ ರಾಶಿ ಅಡಿಕೆ 24,000ಕ್ಕೆ ಹೋಗಿದೆ. ಶಿವಮೊಗ್ಗ ಮಾರುಕಟ್ಟೆ ಬೆಟ್ಟೆ ಅಡಿಕೆ ಕ್ವಿಂಟಾಲ್ ಗೆ 53,519 ರೂಪಾಯಿಗೆ ಮಾರಾಟವಾಗಿದೆ. ರಾಶಿ ಅಡಿಕೆ 46,161, ಸರಕು 52,069 ರೂಪಾಯಿಗೆ ಸೇಲ್ ಆಗಿದೆ.
ಯಲ್ಲಾಪುರದಲ್ಲಿ ಕ್ವಿಂಟಾಲ್ ಬೆಳೆಗೋಟು 18,559, ತಟ್ಟಿಬೆಟ್ಟೆ 28,769, ಕೋಕಾ ಅಡಿಕೆ 10,900 ರೂಪಾಯಿ. ಶಿರಸಿಯ ಅಡಿಕೆ ಮಾರುಕಟ್ಟೆಯಲ್ಲಿ ಬಿಳೆಗೋಟು 16,910, ರಾಶಿ ಅಡಿಕೆ ಕ್ವಿಂಟಾಲ್ ಗೆ 41,599 ರೂಪಾಯಿಗೆ ಮಾರಾಟವಾಗಿದೆ. ಅಡಿಕೆ ಬೆಳೆಯನ್ನ ಕಾಪಾಡಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ಕೊಳೆ ರೋಗ, ನೀರಿಲ್ಲದ ಸಮಸ್ಯೆ ಈ ಎಲ್ಲಾ ಸಮಸ್ಯೆಗಳಿಂದ ಅಡಿಕೆ ಬೆಳೆಯನ್ನ ಕಾಪಾಡಿಕೊಳ್ಳುವುದು ರೈತರಿಗೆ ಸವಾಲಿನ ಕೆಲಸವೇ ಸರಿ. ಹೀಗಿರುವಾಗ ಮಾರುಕಟ್ಟೆಯಲ್ಲಿ ಅಡಿಕೆಗೆ ಸರಿಯಾದ ಬೆಲೆಯೇ ಸಿಗದೆ ಹೋದರೆ ರೈತರ ಪಾಡು ಏನಾಗಬೇಡ ಹೇಳಿ. ಮಾಡಿದ ಸಾಲ ಸೋಲವಾದರೂ ತೀರಿಸಬೇಕು. ಇಂದಿನ ಬೆಲೆಗೆ ಮತ್ತೆ ಸಾಲಾ ಮಾಡಿ, ಬೆಳೆ ಮಾರಿದರು ಸಾಲ ತೀರಿಸಲಾಗದೆ ಹೋದರೆ ರೈತ ಕೃಷಿ ಮೇಲೆಯೇ ಬೇಸರ ಮಾಡಿಕೊಳ್ಳುತ್ತಾನೆ. ಸದ್ಯ ರೈತರ ಖುಷಿಗೆ ಕಾರಣವಾಗಿದೆ ಅಡಿಕೆ ಬೆಲೆಯ ಏರಿಕೆ.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್