Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಿಜಯೇಂದ್ರರನ್ನೇ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿದರೆ ಹೊಸ ಪಕ್ಷ ಸ್ಥಾಪನೆ : ಹೊಸ ಬಾಂಬ್ ಸಿಡಿಸಿದ ಯತ್ನಾಳ್

---Advertisement---

ಬೆಂಗಳೂರು: ಯಡಿಯೂರಪ್ಪ ಕುಟುಂಬದವರನ್ನ ಕಂಡರೆ ಸದಾ ಕೆಂಡಕಾರುವ ಯತ್ನಾಳ್ ಇದೀಗ ಮತ್ತೆ ಅದೇ ಮಾತನ್ನೇ ಉಚ್ಛರಿಸಿದ್ದಾರೆ. ಈ ಬಾರಿ ಹೊಸ ಪಕ್ಷ ಶುರು ಮಾಡುವ ಬಾಂಬ್ ಹಾಕಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿವೈ ವಿಜಯೇಮನದ್ರ ಅವರನ್ನೇ ಮುಂದುವರೆಸಿದರೆ ಬೇರೆ ಪಕ್ಷವನ್ನೇ ಕಟ್ಟುತ್ತೇವೆ ಎಂದು ಹೇಳಿದ್ದಾರೆ.

ಹೈಕಮಾಂಡ್ ನಾಯಕರು ಮುಂದಿನ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸುತ್ತೇವೆ ಎಂದು ಹೇಳಿದದ್ದಾರೆ. ಆದರೂ ಮೂಲಗಳ ಪ್ರಕಾರ ವಿಜಯೇಂದ್ರ ಅವರನ್ನೇ ಮುಂದುವರೆಸುತ್ತಾರೆ ಎಂಬ ಮಾತಿದೆ. ಈ ಸಂಬಂಧ ಯತ್ನಾಳ್ ಅವರು ರಾಂಗ್ ಆಗಿದ್ದಾರೆ. ಬಿಜೆಪಿಯಲ್ಲಿ ಭಾರೀ ಒಗ್ಗಟ್ಟು ಇತ್ತು. ಆದರೆ ಈಗ ಇಲ್ಲ. ಬಿವೈ ವಿಜಯೇಂದ್ರ ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರೆಸಿದರೆ ಇರುವ ಒಗ್ಗಟ್ಟು ಹೊಡೆದು ಹೋಗುತ್ತದೆ. ಸದ್ಯ ಬಿವೈ ರಾಘವೇಂದ್ರ ಅವರನ್ನು ಬಿಟ್ಟು ಬೇರೆ ಯಾವ ಲೋಕಸಭಾ ಸದಸ್ಯರು ವಿಜಯೇಂದ್ರ ಅವರನ್ನು ಮುಂದುವರೆಸಲು ಬೆಂಬಲ ಕೊಟ್ಟಿಲ್ಲ ಎಂದಿದ್ದಾರೆ.

ಕರ್ನಾಟಕದಲ್ಲಿ ಅಪ್ಪ ಮಕ್ಕಳದ್ದು ಏನು ಇಲ್ಲ ಎಂಬುದು ಕೂಡ ಹೈಕಮಾಂಡ್ ಗೆ ಗೊತ್ತಾಗಿದೆ. ಹೀಗಾಗಿ ಎಲ್ಲಾ ರಾಜ್ಯದ ಅಧ್ಯಕ್ಷರ ಘೋಷಣೆ ಮಾಡಿದರು, ಕರ್ನಾಟಕದ್ದು ಮಾತ್ರ ಇನ್ನು ಘೋಷಣೆ ಮಾಡಿಲ್ಲ. ವಿಜಯೇಂದ್ರನಿಗೆ ಅಷ್ಟೆಲ್ಲಾ ಜನಪ್ರಿಯತೆ ಇದ್ದರೆ, ಬಹಳ ಸಂಘಟನೆ ಮಾಡಿದ್ದರೆ ಇಷ್ಟೊತ್ತಿಗೆ ರಾಜ್ಯಾಧ್ಯಕ್ಷನಾಗಿ ಘೋಷಣೆ ಮಾಡಬೇಕಿತ್ತು ಅಲ್ವಾ..? ಆದರೆ ಅವರ ವೈಫಲ್ಯಗಳೆಲ್ಲವು ಹೈಕಮಾಂಡ್ ಗೆ ಗೊತ್ತಾಗಿದೆ. ರೋಗಿಯು ಐಸಿಯುನಲ್ಲಿ ಕೊನೆಯ ಹಂತದಲ್ಲಿ ಇದ್ದಾಗ ಡಾಕ್ಟರ್ ಹೇಳುವ ರೀತಿಯಾಗಿ ನಮಗೆ ವಿಶ್ವಾಸವಿದೆ. ಮುಂದಿನ ಬಾರೀ ವಿಜಯೇಂದ್ರ ಅವರನ್ನೇ ಮುಂದುವರೆಸಿದರೆ ನಾವೂ ಹೊಸ ಪಕ್ಷವನ್ನು ಕಟ್ಟೋದು ಸೂರ್ಯನಷ್ಟೇ ಸತ್ಯ ಎಂದಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment