Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಯಡಿಯೂರಪ್ಪ 50 ವರ್ಷಗಳ ರಾಜಕೀಯ ಪಯಣಕ್ಕೆ ಭಾರೀ ಸಂಭ್ರಮ: ಲಕ್ಷಾಂತರ ಜನರಿಗೆ ಭರ್ಜರಿ ಭೋಜನ ವ್ಯವಸ್ಥೆ ಹೀಗಿದೆ!

---Advertisement---

ಚಿತ್ರದುರ್ಗ ಮೇ. 05 : ರಾಜ್ಯದ ವಿವಿಧೆಡೆಗಳಿಂದ ಬಿ.ಎಸ್.ಯಡಿಯೂರಪ್ಪ ರವರ ಅಭೀಮಾನೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವ ಜನತೆ ಯಾವುದೇ ಕಾರಣದಿಂದಲೂ ಸಹಾ ಊಟದ ಕೂರತೆಯಾಗದಂತೆ ನಿಭಾಯಿಸಲಾಗುವುದೆಂದು ಎಂದು ಬೆಂಗಳೂರಿನ ಯಲಹಂಕ ಶಾಸಕರಾದ ವಿಶ್ವನಾಥ್ ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ 50 ವರ್ಷದ ರಾಜಕೀಯ ಜೀವನದ ಹಿನ್ನಲೆಯಲ್ಲಿ ಮೇ. 9 ರಂದು ಚಿತ್ರದುರ್ಗ ನಗರದ ಹೊರವಲಯದ ಶ್ರೀ ಮಾದರ ಚೆನ್ನಯ್ಯ ಗುರುಪೀಠದ ಪಕ್ಕದಲ್ಲಿರುವ ಮೈದಾನದಲ್ಲಿ ನಡೆಸಲು ಉದ್ದೇಶಿಸಿರುವ ಅಭೀಮಾನೋತ್ಸವ ಕಾರ್ಯಕ್ರಮದಲ್ಲಿ ಆಹಾರಕ್ಕೆ ಸಂಬಂಧಪಟ್ಟ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧೆಡೆಗಳಿಂದ ಸುಮಾರು 10 ಲಕ್ಷ ಜನತೆ ಆಗಮಿಸಲಿದ್ದಾರೆ, ಇಲ್ಲಿಗೆ ಬರುವವರಿಗೆ ಊಟ, ನೀರಿನ ಕೊರತೆಯಾಗದಂತೆ ನೀಡಿಕೊಳ್ಳುವ ಜವಾಬ್ದಾರಿಯನ್ನು ಪಕ್ಷ ಬೆಂಗಳೂರಿನ ಶಾಸಕರಿಗೆ ಮತ್ತು ಪ್ರಮುಖರಿಗೆ ವಹಿಸಲಾಗಿದೆ ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೆ ಅಡುಗೆ ಭಟ್ಟರನ್ನು ನೇಮಿಸಲಾಗಿದೆ ಸುಮಾರು 500 ಜನ ಅಡುಗೆ ಮಾಡುವವರು ಅಡುಗೆ ಸಾಮಾನಿನ ಸಮೇತರಾಗಿ ಚಿತ್ರದುರ್ಗಕ್ಕೆ ಬರಲಿದ್ದಾರೆ ಇದಕ್ಕೆ ಸಂಬಂಧಪಟ್ಟಂತೆ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.
ಕಾರ್ಯಕ್ರಮ ನಡೆಯುವ ದಿನದಂದು ಬೆಳಿಗ್ಗೆ 9 ಗಂಟೆಯಿಂದ ಕಾರ್ಯಕ್ರಮ ಮುಗಿಯುವವರೆಗೂ ಊಟದÀ ವ್ಯವಸ್ಥೆಯನ್ನು ಮಾಡಲಾಗುವುದು. ಬಂದವರಿಗೆ ಭಫೆ ರೀತಿಯಲ್ಲಿ ಊಟವನ್ನು ಬಡಿಸಲಾಗುವುದು, ಬೆಳಿಗ್ಗೆ ಟಮೋಟೋ ಬಾತ್, ಮೂಸರನ್ನ ಮೈಸೂರು ಪಾಕ್, ವಾಟರ್ ಬಾಟಲ್ ನೀಡಲಾಗುವುದು 12ರ ನಂತರ ವೆಜಿಟೇಬಲ್ ಪಲಾವ್ ಮೊಸರನ್ನ, ಮೈಸೂರುಪಾಕ್ ಹಾಗೂ ಬಾಟಲ್ ನೀರನ್ನು ನೀಡಲಾಗುವುದು. ಯಾವುದೇ ಕಾರಣಕ್ಕೂ ಕಾರ್ಯಕ್ರಮಕ್ಕೆ ಬಂದವರನ್ನು ಹಸಿದ ಹೊಟ್ಟೆಯಲ್ಲಿ ಕಳುಹಿಸುವುದಿಲ್ಲ ಏನಾದರೂ ಮಾಡಿ ನೀಡಲಾಗುತ್ತದೆ. ಎಲ್ಲಾ ಜವಾಬ್ದಾರಿಯನ್ನು ಅಡುಗೆ ಮಾಡುವವರಿಗೆ ನೀಡಲಾಗಿದ್ದು ಒಂದು ಊಟಕ್ಕೆ ಇಂತಿಷ್ಟು ಎಂದು ಮಾತನಾಡಲಾಗಿದೆ. ಊಟ ನೀಡುವಲ್ಲಿ ಯಾವುದೇ ಸಮಸ್ಯೆಯಾಗಬಾರದೆಂದು ಒಂದೊಂದು ಕೌಂಟರ್ ಬಳಿ ಇಬ್ಬರು ಶಾಸಕರು, 120 ಜನ ಸ್ವಯಂ ಸೇವಕರು ಇರಲಿದ್ದಾರೆ. ಜನರಿಗೆ ಬಿಸಿಯಾದ ಆಹಾರವನ್ನು ನೀಡಲಾಗುವುದು ತಣ್ಣನೆ ಆಹಾರವನ್ನು ನೀಡುವುದಿಲ್ಲ ಎಂದು ತಿಳಿಸಿದರು.

ಬೆಂಗಳೂರಿನ ರಾಜ ರಾಜೇಶ್ವರಿ ನಗರದ ಶಾಸಕರಾದ ಮುನಿರತ್ನ ಮಾತನಾಡಿ, ಯಡೆಯೂರಪ್ಪ ರವರು ಕೊಟ್ಟ ಮಾತಿನಂತೆ ನಡೆದ ವ್ಯಕ್ತಿಯಾಗಿದ್ದಾರೆ. ಅಧಿಕಾರದ ಸಮಯದಲ್ಲಿ ತಾನು ಬೆಳೆದು ತನ್ನ ಜೊತೆಯಲ್ಲಿ ಇರುವವರನ್ನು ಸಹಾ ಬೆಳೆಸುವುದರ ಮೂಲಕ ದೊಡ್ಡ ವ್ಯಕ್ತಿಯಾಗಿದ್ದಾರೆ. ನಂಬಿದವರನ್ನು ಕೈಬಿಡುವುದಿಲ್ಲ ಎಂಬ ಹೆಸರು ಯಾರಿಗಾದರೂ ಇದ್ದರೆ ಅದು ಯಡೆಯೂರಪ್ಪ ರವರಿಗೆ ಮಾತ್ರ, ಇವರ 50 ವರ್ಷದ ಹೋರಾಟದ ಜೀವನದ ಸಾಧನೆಯ ಕಾರ್ಯಕ್ರಮದ ಯಶಸ್ವಿಗೆ ಎಲ್ಲರು ಸಹಾ ಕಂಕಣ ಬದ್ದರಾಗಿ ದುಡಿಯಲಾಗುತ್ತಿದೆ. ಪಕ್ಷದ ಕಾರ್ಯಕರ್ತರಿಗೆ ಹಬ್ಬದ ವಾತಾವರಣವನ್ನು ಮೂಡಿಸಿದೆ ಎಂದರು.

ಈ ಸಂದರ್ಭದಲ್ಲಿ ಮಹಾಲಕ್ಷ್ಮೀ ಪುರಂ ಶಾಸಕ ಗೋಪಾಲಯ್ಯ, ದಾಸರಹಳ್ಳಿ ಶಾಸಕ ಮುನಿರಾಜ್, ಬೆಂಗಳೂರು ದಕ್ಷಿಣದ ಕೃಷ್ಣಪ್ಪ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡ್, ರಾಜ್ಯ ಉಪಾಧ್ಯಕ್ಷರಾದ ತಮ್ಮೇಶ್ ಗೌಡ, ಮಲ್ಲಿಕಾರ್ಜನ ಕಲ್ಲಂ ಸೀತರಾಮರೆಡ್ಡಿ ಸೇರಿದಂತೆ ಇತರರು ಭಾಗವಹಿಸಿದ್ದರು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...