Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಗಂಡ ಸತ್ತ ಮೇಲೆ ಖಿನ್ನತೆಗೆ ಒಳಗಾದ ಹೆಂಡತಿ 13 ವರ್ಷದ ಮಗನನ್ನು ಸಾಯಿಸಿ, ತಾನೂ ಆತ್ಮಹತ್ಯೆ : ಬೆಂಗಳೂರಲ್ಲೊಂದು ಹೃದಯ ವಿದ್ರಾವಕ ಘಟನೆ..!

---Advertisement---

 

ಬೆಂಗಳೂರು: ಯಲಹಂಕದ RNZ ಅಪಾರ್ಟ್ಮೆಂಟ್ ನಲ್ಲಿ ತನ್ನ 13 ವರ್ಷದ ಮಗನನ್ನು ಕೊಂದು ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 13 ವರ್ಷದ ಭಾರ್ಗವ್ ಪುಲಿವರ್ತ ಹಾಗೂ 40 ವರ್ಷದ ರಮ್ಯಾ ಮೃತರು. 19 ವರ್ಷದ ಮಗಳು ಪಿಜಿ ಯಲ್ಲಿದ್ದು ಓದುತ್ತಿದ್ದಾಳೆ.

ರಮ್ಯಾ, ಶ್ರೀದರ್ ಎಂಬುವವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರದ್ದು ಅಂತರ್ಜಾತಿ ವಿವಾಹವಾಗಿತ್ತು. ದಂಪತಿಗೆ ಇಬ್ಬರು ಮಕ್ಕಳಿದ್ದರು. ಆದರೆ ಕಳೆದ ಮೂರು‌ ತಿಂಗಳ ಹಿಂದೆ ಶ್ರೀದರ್ ನಿಧನರಾಗಿದ್ದರು. ಇದಾದ ಮೇಲೆ ಎಲ್ಲಾ ಜವಾಬ್ದಾರಿ ರಮ್ಯಾ ಮೇಲೆ ಬಿತ್ತು. ಇವರಿದ್ದ ಪ್ಲ್ಯಾಟ್ ಬಾಡಿಗೆ 45 ಸಾವಿರ, ಮಕ್ಕಳ ಶಿಕ್ಷಣ ಹೀಗೆ ಮನೆ ಖರ್ಚೆಲ್ಲಾ ರಮ್ಯಾಗೆ ನಿಭಾಯಿಸುವುದಕ್ಕೆ ಕಷ್ಟವಾಯಿತು. ಗಂಡನ ಸಾವಿನ ಬಳಿಕ ರಮ್ಯಾ ಅವರು ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಎಷ್ಟೋ ಸಲ ನಾನೂ ಸಾಯಿತ್ತೀನಿ ಎಂದೆಲ್ಲಾ ಹೇಳಿದ್ದರಂತೆ.

ಇದೀಗ ಮಗನನ್ನು ಕೊಂದು, ತಾನೂ ನೇಣಿಗೆ ಶರಣಾಗಿದ್ದಾರೆ. ಮೊದಲಿಗೆ ಮಗನಿಗೆ ನೇಣು ಬಿಗಿದು ಕೊಲ್ಲಲಾಗಿದೆ. ಬಳಿಕ ಆತನನ್ನು ಹಾಸಿಗೆ ಮೇಲೆ ಮಲಗಿಸಿ, ರಮ್ಯಾ ಅವರು ನೇಣಿ ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ರಮ್ಯಾ ಅವರು ಈ ಸಂಬಂಧ ಪೊಲೀಸರು, ಡಾಕ್ಟರ್ ಹಾಗೂ ಮಗಳಿಗೆ ಪತ್ರ ಬರೆದಿಟ್ಟಿದ್ದಾರೆ. ಮಗಳು ಇನ್ನು ಓದುತ್ತಿದ್ದಾಳೆ. 19 ವರ್ಷ. ಈಗ ಮಗಳಿಗೂ ಯಾರು ದಿಕ್ಕು ಎಂಬ ಚಿಂತೆ ಕಾಡುತ್ತಿದೆ. ಅಮ್ಮ, ತಮ್ಮನನ್ನು ಕಳೆದುಕೊಂಡ ಆ ಯುವತಿ ಈಗ ಕಣ್ಣೀರಿಡುತ್ತಿದ್ದಾಳೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...