Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ದಾವಣಗೆರೆ ಮೂಲದ ದಂಪತಿ ಅಮೆರಿಕಾದಲ್ಲಿ ಸಾವು : ಕಾರಣ ಏನು..? ಡಿಸಿ ಹೇಳಿದ್ದು ಹೀಗೆ..!

---Advertisement---

 

ದಾವಣಗೆರೆ ಮೂಲದ ಯೋಗೀಶ್, ಪ್ರತಿಭಾ, ಯಶ್ ಎನ್ನುವವರು ಅಮೆರಿಕಾದ ನ್ಯೂಯಾರ್ಕ್ ಬಳಿ ನಿಧನರಾಗಿದ್ದಾರೆ. ಮೂಲಗಳ ಪ್ರಕಾರ ಅವರ ಪತಿ ಯೋಗೀಶ್, ಮೊದಲು ಹೆಂಡತಿ ಮತ್ತು ಮಗನಿಗೆ ಗುಂಡು ಹಾರಿಸಿ, ತಾನು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಕಳೆದ ಹತ್ತು ವರ್ಷದಿಂದ ಈ ಕುಟುಂಬ ಅಮೆರಿಕಾದಲ್ಲಿ ವಾಸವಾಗಿದೆ. ಈ ಸಂಬಂಧ ದಾವಣಗೆರೆ ಡಿಸಿ ಪ್ರತಿಕ್ರಿಯೆ ನೀಡಿದ್ದಾರೆ.

ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಮಾತನಾಡಿ, ಅಮೆರಿಕಾದ ಕನ್ಸಲ್ ಜನರಲ್ ಮಂಜುನಾಥ್, ಡೆಪ್ಯೂಟ್ ಕನ್ಸಲ್ ಜನರಲ್ ವರುಣ್ ಅವರನ್ನು ಈಗಾಗಲೇ ಆನ್ಲೈನ್ ಮೂಲಕ ಸಂಪರ್ಕ ಮಾಡಿದ್ದೇವೆ. ಅವರ ಬಳಿ ಸಾವಿನ ಬಗ್ಗೆ ವಿವರಣೆ ಕೇಳಲಾಗಿದೆ. ಮೃತದೇಹಗಳನ್ನು ದಾವಣಗೆರೆಗೂ ಶಿಫ್ಟ್ ಮಾಡುವುದಕ್ಕೆ ಚರ್ಚೆ ನಡೀತಾ ಇದೆ. ಈ ಕೇಸ್ ಸಂಬಂಧ ಈಗಾಗಲೇ ತನಿಖೆ ನಡೀತಾ ಇದೆ. ಮೃತರ ಸಂಬಂಧಿಕರು ಕೂಡ ಅಲ್ಲಿ ಇದ್ದಾರೆ. ಎಲ್ಲಾ ಪ್ರಕ್ರಿಯೆ ಮುಗಿಸಿ, ಮೃತದೇಹಗಳನ್ನು ತರಬೇಕಾ ಅಥವಾ ಅಲ್ಲಿಯೇ ವಿಸರ್ಜನೆ ಮಾಡಬೇಕಾ ಎಂಬ ಬಗ್ಗೆ ನಿರ್ಧಾರ ಮಾಡ್ತಾ ಇದ್ದೇವೆ.

ನಮ್ಮ ಜಿಲ್ಲಾಡಳಿತ ಪ್ರತಿ ಎರಡು ಗಂಟೆಗೊಮ್ಮೆ ಅಲ್ಲಿನ ಸಂಪರ್ಕ ಮಾಡ್ತಾ ಇದ್ದೇವೆ‌. ಅಲ್ಲಿನ ನಿಯಮಗಳನ್ನು ಫಾಲೋ ಮಾಡಬೇಕಾಗಿರುವ ಕಾರಣ ಸಮಯಾವಕಾಶ ಬೇಕಾಗಿದೆ. ಕುಟುಂಬಸ್ಥರು ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾರೆ ಎಂದಿದ್ದಾರೆ. ಆದ್ರೆ ಅಮೆರಿಕಾದ ಅಧಿಕಾರಿಗಳು ಅಸ್ವಾಭಾವಿಕ ಸಾವು ಅಂತಷ್ಟೇ ತಿಳಿಸಿದ್ದಾರೆ. ತನಿಖೆಯಾದ ಬಳಿಕ ಎಲ್ಲಾ ಸತ್ಯ ಹೊರ ಬರಲಿದೆ ಎಂದಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.

✉️ suddionenews@gmail.com

🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment