ಬೆಂಗಳೂರು: ತಮಿಳಿನ ಸೂಪರ್ ಸ್ಟಾರ್ ರಜನೀಕಾಂತ್ ಬೆಂಗಳೂರಿಗೆ ಬಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೆಲ್ಲಾ ಸದ್ಯ ಇದೇ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ. ರಜನೀಕಾಂತ್ ಗೆ ಅಣ್ಣ ಎಂದರೆ ಎಷ್ಟು ಪ್ರೀತಿ ಅನ್ನೋದು ಇದರಿಂದಾನೇ ಅರ್ಥ ಆಗುತ್ತೆ. ಅಣ್ಣನ ಆರೋಗ್ಯ ವಿಚಾರಿಸುವುದಕ್ಕೋಸ್ಕರ ಚೆನ್ನೈನಿಂದ ಬೆಂಗಳೂರಿಗೆ ಓಡೋಡಿ ಬಂದಿದ್ದಾರೆ.
ರಜನೀಕಾಂತ್ ಅವರ ಸಹೋದರ ಸತ್ಯನಾರಾಯಣ್ ರಾವ್ ಗಾಯಕ್ವಾಡ ಬೆಂಗಳೂರಿನಲ್ಲಿಯೇ ನೆಲೆಸಿದ್ದಾರೆ. ಹೀಗಾಗಿ ಅವರನ್ನು ನೋಡುವುದಕ್ಕೆ ಆಗಾಗ ರಜನಿಕಾಂತ್ ಅವರು ಕೂಡ ಬೆಂಗಳೂರಿಗೆ ಬಂದು ಹೋಗೋದು ಮಾಡ್ತಾ ಇರ್ತಾರೆ. ಆದರೆ ಬರುವಾಗ ಹೋಗುವಾಗ ಯಾರಿಗೂ ಗೊತ್ತಾಗದಂತೆ ನೋಡಿಕೊಳ್ಳುತ್ತಾರೆ. ಯಾಕಂದ್ರೆ ರಜನಿಕಾಂತ್ ಅವರು ಬೆಂಗಳೂರಿಗೆ ಬಂದಿದ್ದಾರೆ ಎಂದು ಗೊತ್ತಾದ್ರೆ ಸಾಕು ಅಭಿಮಾನಿಗಳು ಅವರ ಮನೆಯ ಮುಂದೆ ಕ್ಯೂ ನಿಂತು ಬಿಡುತ್ತಾರೆ. ಅವರನ್ನ ತಡೆಯುವುದಕ್ಕೇನೆ ಕಷ್ಟವಾಗುತ್ತದೆ. ಹೀಗಾಗಿಯೇ ಸೀಕ್ರೇಟ್ ಆಗಿ ಬಂದು ಸೀಕ್ರೇಟ್ ಆಗಿ ಮತ್ತೆ ಚೆನ್ನೈಗೆ ಹೋಗಿ ಬಿಡುತ್ತಾರೆ.
ಈಗ ಬೆಂಗಳೂರಿಗೆ ಬಂದ ಕಾರಣ ಅವರ ಅಣ್ಣನಿಗೆ ಹೃದಯಾಘಾತವಾಗಿತ್ತು. ಆಸ್ಪತ್ರೆಗೆ ಹೋಗೋಣಾ ಎಂದರೆ ಬರೋದಿಲ್ಲ ಎಂದು ಮಕ್ಕಳಂತೆ ಹಠ ಹಿಡಿದಿದ್ದರಂತೆ. ಹೀಗಾಗಿಯೇ ರಜನಿಕಾಂತ್ ಅವರು ಬೆಂಗಳೂರಿಗೆ ಬಂದು, ಅಣ್ಣನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ವೈದ್ಯರಿಂದ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ವೈದ್ಯರು ಎರಡು ದಿನ ಸರಿಯಾಗಿ ವಿಶ್ರಾಂತಿ ಪಡೆಯುವುದಕ್ಕೆ ಹೇಳಿದ್ದಾರೆ. ಅಣ್ಣನಿಗೂ ಬುದ್ದಿ ಹೇಳಿ, ವಿಶ್ರಾಂತಿ ಪಡೆಯಲು ಹೇಳಿದ್ದಾರೆ. ಆರೋಗ್ಯ ಚೆನ್ನಾಗಿ ನೋಡಿಕೊಳ್ಳಲು ಹೇಳಿದ್ದು, ನಂತರ ಚೆನ್ನೈಗೆ ವಾಪಾಸ್ ಆಗಿದ್ದಾರೆ. ರಜನಿಕಾಂತ್ ಅವರ ಅಣ್ಣ ಸತ್ಯನಾರಾಯಣ್ ರಾವ್ ಅವರ ಆರೋಗ್ಯದಲ್ಲಿ ಸದ್ಯ ಚೇತರಿಕೆ ಕಂಡಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.









