ಸುದ್ದಿಒನ್, ಹಿರಿಯೂರು, ನವೆಂಬರ್. 08 : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸಿದರೂ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟಿದೆ ಎಂದು ಸಂಸದ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ.
ನಗರದ ಸಾರ್ವಜನಿಕ ಆಸ್ಪತ್ರೆಯ ಮಹಿಳೆಯರ ಹೆರಿಗೆ ಕೊಠಡಿಯಲ್ಲಿನ ಮೇಲ್ಚಾವಣಿ ಚುರುಕೆಗಳು ಬಾಣಂತಿ ಮೇಲೆ ಬಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು ವೈದ್ಯರ ನೇಮಕ ಮಾಡಿಕೊಳ್ಳುವಾಗ ಭ್ರಷ್ಟಾಚಾರ ನಡೆದಿದೆ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಆಸ್ಪತ್ರಗಳ ವ್ಯವಸ್ಥೆ ಸರಿಯಿಲ್ಲದೆ, ಆಸ್ಪತ್ರೆಗಳ ಪರಿಸ್ಥಿತಿ ಅಯೋಮಯವಾಗಿದೆ. ಶಾಲೆಗಳಂತೂ ಇದಕ್ಕಿಂತಲೂ ಕೆಟ್ಟದಾಗಿವೆ. ಶಾಲಾ-ಕಾಲೇಜುಗಳನ್ನು ನೋಡುವುದಿಲ್ಲ ರಸ್ತೆಗಳಲ್ಲಿ ಮೊಳಕಾಲ್ಮುದ್ದ ಗುಂಡಿಗಳು ಓಡಾಡಕ್ಕೆ ಸಾಧ್ಯವಾಗುತ್ತಿಲ್ಲ. ಇದು ಸರ್ಕಾರ ಅನ್ನುಸ್ತಾ ಇಲ್ಲ ಜನಗಳಿಗೆ. ಇವರ ದುರಾಡಳಿತದಿಂದ ಇಂದಿನ ವ್ಯವಸ್ಥೆ ಹಾಳಾಗಿದೆ. ಆಸ್ಪತ್ರೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲ ವಿದ್ಯುತ್ ಇಲ್ಲ ಬಲ್ಪುಗಳಿಲ್ಲ ಔಷಧಿಗಳಿಲ್ಲ ಇಂತಹ ಕೆಟ್ಟ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ ಹೀಗಿರುವಾಗ ಕಾಂಗ್ರೆಸ್ ಸರ್ಕಾರ ದುರಾಡಳಿತಂದೆ ಕುಡಿದು ಬಂಡತನದಿಂದ ಸರ್ಕಾರ ನಡೆಸುತ್ತಿದ್ದಾರೆ. ಪ್ರತಿಯೊಂದುಕ್ಕೂ ಪ್ರತಿಯೊಂದು ನರೇಂದ್ರ ಮೋದಿ ಅವರ ಕಡೆ ಬೆರಳು ಮಾಡಿ ತೋರಿಸುತ್ತಿರುವ ಸಿಎಂ ಸಿದ್ದರಾಮಯ್ಯ ಸರ್ಕಾರ ಈ ರಾಜ್ಯದಲ್ಲಿ ಅಧಿಕಾರಕ್ಕೆ ಮುಂದುವರೆಯಲಿಕ್ಕೆ ಯೋಗ್ಯತೆ ಯೋಗ್ಯತೆಯನ್ನು ಕಳಕೊಂಡಿದೆ ಕೂಡಲೇ ಅವರು ರಾಜೀನಾಮೆ ನೀಡಿ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಹಿರಿಯೂರಿನ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ ಸುಧಾಕರ್ ಅವರು ಅರ್ಥಮಾಡಿಕೊಳ್ಳಬೇಕು. ಬಡವರು ಬರುವ ಆಸ್ಪತ್ರೆಗಳು, ಶಾಲಾ-ಕಾಲೇಜುಗಳ ಕಡೆಗೆ ಹೆಚ್ಚು ಗಮನ ಕೊಟ್ಟು ಕೆಲಸ ಕಾರ್ಯಗಳನ್ನು ಮಾಡಬೇಕು. ವ್ಯವಸ್ಥಿತವಾಗಿ ಆಸ್ಪತ್ರೆಗಳನ್ನು ಮೆಂಟೇನೆನ್ಸ್ ಮಾಡುವುದು ಬಿಟ್ಟು, ವಿಧಾನಸೌಧದಲ್ಲಿ ಕಥೆ ಹೇಳಿಕೊಂಡು ಮುಖ್ಯಮಂತ್ರಿಯ ಸುತ್ತ ಸುತ್ತುತ್ತಿರುವುದು ಇಲ್ಲಿನ ಸಚಿವರ ಸಾಧನೆಯಾಗಿದೆ.
ಎರಡುವರೆ ವರ್ಷದಲ್ಲಿ ಒಂದೇ ಒಂದು ರೂಪಾಯಿ ಅನುದಾನದ ಕೆಲಸಗಳನ್ನು ಜಿಲ್ಲೆ ಹಾಗೂ ಹಿರಿಯೂರು ಕ್ಷೇತ್ರದಲ್ಲಿ ಮಾಡಿಲ್ಲ, ಒಂದು ವೇಳೆ ಕೆಲಸ ಮಾಡಿದರೆ ತೋರಿಸಲಿ ಎಂದರು. ಹಿಂದೆ ನಮ್ಮ ಬಿಜೆಪಿ ಸರ್ಕಾರ ನೀಡಿದ ಕೆಲಸಗಳಿಗೆ ಉದ್ಘಾಟನೆ ಮಾಡೋದು ಅದನ್ನೇ ಪದೇ ಪದೇ ಶಂಕುಸ್ಥಾಪನೆ ಮಾಡುವುದು ಬಿಟ್ಟರೆ ಬೇರೆ ಯಾವುದೇ ಕೆಲಸ ಇಲ್ಲ. ಈ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದೆ.






