Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಹೆಚ್.ಸಿ.ಮಹದೇವಪ್ಪ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಮುನಿಸಿಕೊಂಡವರಾ..?

---Advertisement---

ಬೆಂಗಳೂರು: ಸಚಿವ ಹೆಚ್.ಸಿ.ಮಹದೇವಪ್ಪ ಹಾಗೂ ಸಿಎಂ ಸಿದ್ದರಾಮಯ್ಯ ಅವರು ಆತ್ಮೀಯರಾಗಿದ್ದಾರೆ. ಆದರೆ ಅದ್ಯಾಕೋ ಏನೋ ಇಬ್ಬರು ದೂರಾಗಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿವೆ. ಅಂತರವನ್ನ ಕಾಯ್ದುಕೊಂಡಿದ್ದಾರೆ ಎನ್ನಲಾಗ್ತಿದೆ. ಇದಕ್ಕೆ ಸಂಬಂಧಿಸಿದಂತೆ ಮಹದೇವಪ್ಪ ಅವರ ಬಳಿ ಕೇಳಿದಾಗ, ಅದೆಲ್ಲಾ ನೀವೇ ಹುಟ್ಟು ಹಾಕಿರುವುದು ಎಂಬ ಮಾತನ್ನ ಹೇಳಿದ್ದಾರೆ. ನಾವಿಬ್ಬರು ಯಾವಾಗಲೂ ಆತ್ಮೀಯರೇ ಎಂದು ಹೇಳುವ ಮೂಲಕ ಆ ಪ್ರಶ್ನೆಗೆ ಸ್ಪಷ್ಟನೆ ನೀಡಿದ್ದಾರೆ.

ಇನ್ನು ಒಳಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ಆದೇಶವನ್ನು ರದ್ದು ಮಾಡುವ ದುರುದ್ದೇಶ ಹೊಂದಿದ್ದರು ಎಂಬ ಗೋವಿಂದ ಕಾರಜೋಳ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದು, ಸ್ವಾಮಿ ಈ ವರದಿ ಬಂದಾಗ ಅವರೇ ಮಂತ್ರಿಯಾಗಿದ್ದರು. ನಾರಾಯಣಸ್ವಾಮಿ ಅವರು ಇಲ್ಲೂ ಮಂತ್ರಿಯಾಗಿ, ಅಲ್ಲಿಯೂ ಮಂತ್ರಿಯಾಗಿದ್ದರು. ಪಾರ್ಲಿಮೆಂಟ್ ನಲ್ಲಿ ಏನು ಹೇಳಿದ್ರು ಹೇಳಿ. ಹೇಯ್ ಆಗಲ್ಲ ರೀ. ಯಾವುದೇ ಕಾರಣಕ್ಕೂ ಒಳ ಮೀಸಲಾತಿ ಕೊಡುವುದಕ್ಕೆ ಅಂತ ಹೇಳಿದ್ರು.

ಯಾರಪ್ಪ ಅಡ್ಡ ಬಂದಿದ್ರು, ಒಳ ಮೀಸಲಾತಿ ಮಾಡಬಾರದು ಅಂತ‌. ಒಳಮೀಸಲಾತಿ ಮಾಡಬೇಕು ಅಂತ ಸಹಿ ಮಾಡಿರೋದು ನಾನು. ಸಹಿ ಮಾಡಿದ್ದು ನಾನು.. ಮಂತ್ರಿಯಾಗಿದ್ದವರು ಅವರು‌ ರಾಜಕೀಯಕ್ಕೋಸ್ಕರ ಏನೇನೋ ಮಾತಾಡಬಾರದು. ಆರೋಪ ಮಾಡ್ತಾರೆ ಅವರು. ಆರ್ಡಿನೆನ್ಸ್ ಬೇಡ ಬಿಲ್ ತರಬೇಕು ಅಂತ ಸ್ವಲ್ಪ ಅದರ ಬಗ್ಗೆ ಹೋಂ ವರ್ಕ್ ಮಾಡ್ಬೇಕು. ಅವರಿದ್ದಾಗ ಏನು ಮಾಡದೆ ಈಗ ಆ ಬಗ್ಗೆ ಮಾತಾಡ್ತಾರೆ. ಅವರವರ ಅನಿಸಿಕೆಯನ್ನ ಹೇಳ್ತಾರೆ. ಮುಖ್ಯಮಂತ್ರಿಗಳು ಹೇಳಿದ್ದಾರೆ ಎಂದಿದ್ದಾರೆ. ಬಿಜೆಪಿ ನಾಯಕರು ಅಧಿಕಾರದಲ್ಲಿಯೇ ಇದ್ದಾಗ ಈ ಸಂಬಂಧ ಏನು ಆಗಲೇ ಇಲ್ಲ ಎಂಬುದನ್ನ ತಿಳಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now