Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಅಯ್ಯಪ್ಪನ ಚಿನ್ನದ ಕದ್ದ ಕೇಸ್ ಗೆ ಟ್ವಿಸ್ಟ್ : ಬೆಂಗಳೂರು, ಬಳ್ಳಾರಿಯಲ್ಲಿ ಶೋಧ..!

---Advertisement---

ಅಯ್ಯಪ್ಪನೆಂದರೆ ಭಯ, ಭಕ್ತಿ.. ಆದರೆ ಅಯ್ಯಪ್ಪನ ಗುಡಿಗೆ ಅಲಂಕರಿಸಿದ್ದ ಚಿನ್ನಕ್ಕೇನೆ ಖದೀಮರು ಕನ್ನ ಹಾಕಿದ್ದಾರೆ. ಇದೀಗ ಎಸ್ಐಟಿ ಅಧಿಕಾರಿಗಳು ತನಿಖೆಯನ್ನ ಚುರುಕುಗೊಳಿಸಿದ್ದು, ಬೆಂಗಳೂರು, ಬಳ್ಳರಿ ಜಿಲ್ಲೆಯಲ್ಲೂ ಸರ್ಚಿಂಗ್ ಶುರು ಮಡಿದ್ದಾರೆ. ಅದರಲ್ಲೂ ದೇವಸ್ಥಾನದ ಅರ್ಚಕ ಉನ್ನಿಕೃಷ್ಣನ್ ಪೊಟ್ಟಿಯ ಹಿಂದೆ ಬಿದ್ದಿರೋ ಎಸ್ಐಟಿಗೆ ಮತ್ತೊಂದು ಲಿಂಕ್ ಸಿಕ್ಕಿದೆ.

ಹೀಗಾಗಿ ಕೇರಳದಿಂದ ಹೊರಟ ಎಸ್ಐಟಿ ನೇರವಾಗಿ ಬೆಂಗಳೂರಿನಲ್ಲಿರುವ ಅರ್ಚಕ ಉನ್ನಿ ಕೃಷ್ಣನ್ ಪೊಟ್ಟಿ ಮನೆಗೆ ಭೇಟಿ ನೀಡಿದೆ. ಶ್ರೀರಾಮಪುರದ ಚೌಡೇಶ್ವರಿ ದೇವಸ್ಥಾನದ ಬಳಿ ಇರುವ ಮನೆಯಲ್ಲಿ ಬೆಳಗ್ಗೆಯಿಂದಾನು ಪರಿಶೀಲನೆ ನಡೆಸಿದ್ದಾರೆ. ಹಣ, ಚಿನ್ನಾಭರಣ ಮತ್ತು ಆಸ್ತಿ ಪತ್ರವನ್ನು ಪರಿಶೀಲನೆ ನಡೆಸಿದ್ದಾರೆ. ಅಯ್ಯಪ್ಪನ ಬಳಿ ಕದ್ದಂತ ಚಿನ್ನದಲ್ಲಿ 476 ಗ್ರಾಂ ಚಿನ್ನವನ್ನು ಬಳ್ಳಾರಿಯ ರೊದ್ದಂ ಜ್ಯುವೆಲ್ಲರಿ ಶಾಪ್ ಮಾಲೀಕ ಗೋವರ್ಧನ್ ಖರೀದಿಸಿದ್ದರಂತೆ. ಈ ರೊದ್ದಂ ಶಾಪ್ ಮೇಲೆ ಎಸ್ಐಟಿ ದಾಳಿ ಮಾಡಿ ಶೋಧ ಕಾರ್ಯ ನಡೆಸಿದೆ.

ಗೋವರ್ಧನ್ ಗೆ ಎಸ್ಐಟಿಗೆ ವಿಚಾರಣೆ ಮಾಡಿದ್ದು, ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ. 2019ರಲ್ಲಿ ಟ್ರಾವಂಕೂರ್ ದೇವಸ್ವಂ ಬೋರ್ಡ್, 42.8 ಕೆಜಿ ತೂಕದ ವಸ್ತುಗಳನ್ನ ಚೆನ್ನೈನಲ್ಲಿರುವ ಉನ್ನಿಕೃಷ್ಣನ್ ಪೊಟ್ಟಿಗೆ ಹಸ್ತಾಂತರಿಸಿತ್ತು. ಚಿನ್ನ ಲೇಪಿತ ತಾಮ್ರದ ತಟ್ಟೆಗಳನ್ನು ಮತ್ತೆ ದೇವಸ್ಥಾನಕ್ಕೆ ತಂದಾಗ, ಅವುಗಳ ತೂಕವು 38.258 ಕೆಜಿಗೆ ಇಳಿಕೆಯಾಗಿತ್ತು. ಉಳಿದಿದ್ದ ಹೆಚ್ಚುವರಿ 4 ಕೆಜಿ ಚಿನ್ನ ಎಲ್ಲಿದೆ ಎಂಬ ವಿಚಾರವಾಗಿ SIT ತನಿಖೆ ನಡೆಸುತ್ತಿದೆ. ಉನ್ನಿಕೃಷ್ಣನ್ ಪೊಟ್ಟಿ ದಕ್ಷಿಣ ಭಾರತದ ರಾಜ್ಯಗಳ ಹಲವು ದೇವಾಲಯಗಳಿಗೆ ಸಾಗಿಸಿರೋದು ಬೆಳಕಿಗೆ ಬಂದಿದೆ. ಇನ್ನಷ್ಟು ವಿಚಾರಣೆಯನ್ನು ನಡೆಸುತ್ತಿದ್ದಾರೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now