ವರದಿ ಮತ್ತು ಫೋಟೋ ಕೃಪೆ
ಹೆಚ್. ಮಹಾಂತೇಶ್, ರಾಯಾಪುರ, ಮೊಳಕಾಲ್ಮೂರು.
ಮೊ : 93806 27082
ಸುದ್ದಿಒನ್, ಮೊಳಕಾಲ್ಮುರು, ಅಕ್ಟೋಬರ್. 25 : ಹಸಿವಿನ ನೋವು, ಅನ್ನದ ಮೌಲ್ಯ ನನಗೆ ತಿಳಿದಿದೆ. ಅದಕ್ಕಾಗಿಯೇ ಅನ್ನ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಯಿತು ಎಂದು ಸಿಎಂ ಸಿದ್ದರಾಮಯ್ಯ ಪದೇ ಪದೇ ನೆನಪಿಸುತ್ತಾರೆ. ಆದ್ರೆ ಹಸಿದವರ ಹಸಿವು ನೀಗಿಸಬೇಕಾದ ಅನ್ನ ಭಾಗ್ಯ ಯೋಜನೆಯ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಧಂಧೆಕೋರರ ಪಾಲು ಆಗುತ್ತಿರುವುದು ನಿಜಕ್ಕೂ ಕೂಡ ಬಡವರ ಹೊಟ್ಟೆ ಮೇಲೆ ಬರೆ ಎಳೆದಂತೆ.
ಮೊಳಕಾಲ್ಮುರು ಹೇಳಿ ಕೇಳಿ ಬಡ ತಾಲೂಕು, ಇಂತಹ ತಾಲೂಕಿನಲ್ಲಿ ಮತ್ತೆ ಮತ್ತೆ ಅಕ್ರಮ ಪಡಿತರ ಅಕ್ಕಿ ಪ್ರಕರಣಗಳು ಬೆಳಕಿಗೆ ಬರುತ್ತಿರುವುದು ನಿಜಕ್ಕೂ ಕೂಡ ದುರಾದೃಷ್ಟಕರ.
ತಾಲೂಕಿನ ಶೀರೆಕೊಳ ಗ್ರಾಮದ ಹೊರವಲಯದ ಜಾಲಿ ಮುಳ್ಳಿನ ಪೊದೆಗಳ ಮಧ್ಯದಲ್ಲಿ ಯಾರಿಗೂ ತಿಳಿಯದಂತೆ ಸಾವಿರಾರು ಚೀಲಗಳಿರುವ ಪಡಿತರ ಅಕ್ಕಿ ದಾಸ್ತನು ಮಾಡಿರುವ ಖಚಿತ ಮಾಹಿತಿ ಮೇರೆಗೆ ‘ಜಿಲ್ಲಾ ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಶಿ’ ನೇತೃತ್ವದಲ್ಲಿ ರಾತ್ರೋ ರಾತ್ರಿ ಕಾರ್ಯಾಚರಣೆ ನಡೆಸಿ ಅಕ್ರಮ ಅಕ್ಕಿ ದಂಧೆ ಕೋರರಿಗೆ ಚಳಿ ಬಿಡಿಸಿದ್ದಾರೆ. ಯಾವುದೇ ಡೌಟ್ ಬಾರದಂತೆ ಅಕ್ಕಿ ಚೀಲಗಳ ಮೇಲೆ ತಾಡಪಾಲ್ ಹಾಕಿ,ಅಕ್ಕಿ ಸಂಗ್ರಹದ ಸ್ಥಳಕ್ಕೆ ಯಾರೂ ಕೂಡ ಬರದಂತೆ ದಾರಿಯುದ್ದಕ್ಕೂ ಮುಳ್ಳಿನ ರಾಶಿಯೇ ಹಾಕಿದ್ದರು.ಜಿಲ್ಲಾಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಶಿ ಅವರು ಮಧ್ಯರಾತ್ರಿ 1 ಗಂಟೆ ಸಮಯದಲ್ಲಿ ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದಾಗ ಸಾವಿರಾರು ಮೂಟೆಗಳು ಇರುವುದನ್ನು ಪತ್ತೆ ಮಾಡಿದರು. ಯಾವುದೇ ಭಯವಿಲ್ಲದೆ ಮಳೆಯಲ್ಲಿಯೂ ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಂಗ್ರಹಿಸಿದ ಅಕ್ಕಿಯನ್ನು ವಶಪಡಿಸಿಕೊಂಡ ಚಿತ್ರದುರ್ಗ ಜಿಲ್ಲಾ ಉಪವಿಬಾಗಾಧಿಕಾರಿ ಮೆಹಬೂಬ್ ಜಿಲಾನಿ ಖುರೇಷಿ ಅವರ ಧೈರ್ಯವನ್ನು ಮೆಚ್ಚಲೇಬೇಕಿದೆ.
ಇನ್ನೂ ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ರಾಂಪುರ ಪಿಎಸ್ಐ ಬಾಹುಬಲಿ ಆಗಮಿಸಿ ಪರಿಶೀಲನೆ ನಡೆಸಿದರು.ಧಂಧೆಕೋರರು ಸ್ಥಳದಿಂದ ಎಸ್ಕೇಪ್ ಆಗಿದ್ದು ಇದರ ಹಿಂದಿರುವ ಕಿಂಗ್ ಪಿನ್ ಯಾರೂ ಎನ್ನುವ ಸತ್ಯ ತನಿಖೆಯಿಂದ ತಿಳಿದು ಬರಬೇಕಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.



















