Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮೈಗ್ರೇನ್ ಕೇವಲ ತಲೆನೋವಲ್ಲ! ಈ ಸೂಚನೆಗಳು ಗಂಭೀರ ಸಮಸ್ಯೆಯ ಸಂಕೇತ

---Advertisement---

ಮೈಗ್ರೇನ್ ಎಂದರೆ ಬಹುತೇಕರು ಅದನ್ನು ಕೇವಲ ಒಂದು ತೀವ್ರವಾದ ತಲೆನೋವು ಎಂದಷ್ಟೇ ಭಾವಿಸುತ್ತಾರೆ. ಆದರೆ ಇದು ಕೇವಲ ತಲೆನೋವಿಗೆ ಮಾತ್ರ ಸೀಮಿತವಲ್ಲ; ಇದೊಂದು ಜಟಿಲವಾದ ನರಮಂಡಲಕ್ಕೆ (ನ್ಯೂರೋಲಾಜಿಕಲ್) ಸಂಬಂಧಿಸಿದ ಸಮಸ್ಯೆಯಾಗಿದೆ.

ತಲೆಯ ಯಾವುದಾದರೂ ಒಂದು ಬದಿಯಲ್ಲಿ ವಿಪರೀತ ನೋವು, ಎದೆಬಡಿತ ಜೋರಾದಂತೆ ಭಾಸವಾಗುವುದು, ವಾಂತಿ, ಬೆಳಕು ಮತ್ತು ಶಬ್ದವನ್ನು ಸಹಿಸಿಕೊಳ್ಳಲು ಸಾಧ್ಯವಾಗದಿರುವುದು ಮೈಗ್ರೇನ್‌ನ ಮುಖ್ಯ ಲಕ್ಷಣಗಳಾಗಿವೆ. ಅಪರೂಪಕ್ಕೆ ಬರುವ ಮೈಗ್ರೇನ್ ಅನ್ನು ಮಾತ್ರೆಗಳು ಮತ್ತು ಜೀವನಶೈಲಿಯ ಬದಲಾವಣೆಯಿಂದ ನಿಯಂತ್ರಿಸಬಹುದು. ಆದರೆ ನೋವು ಪದೇ ಪದೆ ಕಾಣಿಸಿಕೊಳ್ಳುತ್ತಿದ್ದರೆ ಅಥವಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದರೆ ಅದನ್ನು ಎಂದಿಗೂ ನಿರ್ಲಕ್ಷಿಸಬಾರದು ಎಂದು ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.

ಮೈಗ್ರೇನ್‌ಗೆ ಪ್ರಮುಖ ಕಾರಣಗಳು

ನಮ್ಮ ದೈನಂದಿನ ಜೀವನದ ಸಣ್ಣಪುಟ್ಟ ವಿಷಯಗಳೇ ಮೈಗ್ರೇನ್ ನೋವನ್ನು ಹೆಚ್ಚಿಸುತ್ತವೆ ಎಂದು ಡಾ. ಬಾತ್ರಾ ತಿಳಿಸಿದ್ದಾರೆ. ಮುಖ್ಯವಾಗಿ:

ಅಪರ್ಯಾಪ್ತ ನಿದ್ರೆ ಮತ್ತು ನಿರ್ಜಲೀಕರಣ (ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದು).

ಸರಿಯಾದ ಸಮಯಕ್ಕೆ ಆಹಾರ ಸೇವಿಸದಿರುವುದು ಅಥವಾ ತಡವಾಗಿ ತಿನ್ನುವುದು.

ತೀವ್ರವಾದ ಮಾನಸಿಕ ಒತ್ತಡ ಮತ್ತು ಹಾರ್ಮೋನುಗಳ ಏರುಪೇರು.

ಗಂಟೆಗಟ್ಟಲೆ ಸ್ಕ್ರೀನ್ (ಮೊಬೈಲ್/ಲ್ಯಾಪ್‌ಟಾಪ್) ನೋಡುವುದು.

ಇದರೊಂದಿಗೆ ಸಂಸ್ಕರಿಸಿದ ಮಾಂಸ (Processed Meat), ಹಳೆಯ ಚೀಸ್, ಮದ್ಯಪಾನ ಮತ್ತು ಮಿತಿಗಿಂತ ಹೆಚ್ಚು ಕಾಫಿ ಕುಡಿಯುವುದು ಸಹ ಕೆಲವರಲ್ಲಿ ಮೈಗ್ರೇನ್ ಅನ್ನು ಪ್ರಚೋದಿಸುತ್ತದೆ.

ಸಲಹೆ: ಮೈಗ್ರೇನ್ ದಾಳಿಯನ್ನು ಅಂದಾಜಿಸಲು ಒಂದು “ದಿನಚರಿ” (Diary) ನಿರ್ವಹಿಸುವುದು ಒಳ್ಳೆಯದು. ತಲೆನೋವು ಯಾವಾಗ ಬರುತ್ತದೆ, ಅದರ ತೀವ್ರತೆ ಎಷ್ಟು, ಎಷ್ಟು ಸಮಯ ಇರುತ್ತದೆ, ಆ ಸಮಯದಲ್ಲಿ ನೀವು ಸೇವಿಸಿದ ಆಹಾರ, ನಿದ್ರೆಯ ಸಮಯ ಮತ್ತು ಒತ್ತಡದ ಮಟ್ಟವನ್ನು ದಾಖಲಿಸುವುದರಿಂದ ನೋವಿಗೆ ಕಾರಣವಾಗುವ ಅಂಶಗಳನ್ನು ಗುರುತಿಸಬಹುದು. ಇದು ವೈದ್ಯರಿಗೆ ಸೂಕ್ತ ಚಿಕಿತ್ಸೆ ನೀಡಲು ತುಂಬಾ ನೆರವಾಗುತ್ತದೆ.

ಜೀವನಶೈಲಿ ಬದಲಾವಣೆಯಿಂದ ಮುಕ್ತಿ ಪಡೆಯಿರಿ!

ದೈನಂದಿನ ಅಭ್ಯಾಸಗಳಲ್ಲಿ ಕೆಲವು ಸಣ್ಣ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಮೈಗ್ರೇನ್ ತೀವ್ರತೆಯನ್ನು ಗಣನೀಯವಾಗಿ ಕಡಿಮೆ ಮಾಡಬಹುದು ಎಂದು ವೈದ್ಯರು ಸೂಚಿಸುತ್ತಾರೆ:

ಸಾಕಷ್ಟು ನೀರು ಕುಡಿಯುವುದು ಮತ್ತು ಸರಿಯಾದ ಸಮಯಕ್ಕೆ ಊಟ ಮಾಡುವುದು.

ದಿನಕ್ಕೆ 7-8 ಗಂಟೆಗಳ ಕಾಲ ನಿದ್ರಿಸುವುದು.

ನಿಯಮಿತವಾಗಿ ವ್ಯಾಯಾಮ ಮಾಡುವುದು, ಯೋಗ ಮತ್ತು ಧ್ಯಾನ್ ಮುಖಾಂತರ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವುದು.

ಆದರೆ, ವೈದ್ಯರ ಸಲಹೆ ಇಲ್ಲದೆ ಪದೇ ಪದೆ ಪೇನ್ ಕಿಲ್ಲರ್ಸ್ (ನೋವು ನಿವಾರಕ ಮಾತ್ರೆಗಳನ್ನು) ಬಳಸಬಾರದು ಎಂದು ವೈದ್ಯರು ಎಚ್ಚರಿಸಿದ್ದಾರೆ. ಮಿತಿಮೀರಿ ಮಾತ್ರೆಗಳನ್ನು ಬಳಸುವುದರಿಂದ ‘ಮೆಡಿಕೇಶನ್-ಓವರ್ ಯೂಸ್ ಹೆಡೇಕ್ಸ್’ (ಮಾತ್ರೆಗಳ ಅತಿಯಾದ ಬಳಕೆಯಿಂದ ಬರುವ ತಲೆನೋವು) ಸಮಸ್ಯೆ ಎದುರಾಗಿ, ಮೈಗ್ರೇನ್ ಇನ್ಮೂ ತೀವ್ರಗೊಳ್ಳುವ ಅಪಾಯವಿರುತ್ತದೆ.

ತುರ್ತು ವೈದ್ಯಕೀಯ ನೆರವು ಯಾವಾಗ ಅಗತ್ಯ?

ಸಾಮಾನ್ಯವಾಗಿ ಮೈಗ್ರೇನ್ ಪ್ರಾಣಾಪಾಯ ತರುವುದಿಲ್ಲವಾದರೂ, ಕೆಳಗಿನ ಲಕ್ಷಣಗಳು ಕಂಡುಬಂದರೆ ತಕ್ಷಣವೇ ತುರ್ತು ವೈದ್ಯಕೀಯ ಚಿಕಿತ್ಸೆ ಪಡೆಯಬೇಕು:

ಧಿಡೀರನೆ, ಊಹಿಸಲಾಗದಷ್ಟು ತೀವ್ರವಾದ ತಲೆನೋವು ಬರುವುದು.

ಕೈ ಅಥವಾ ಕಾಲುಗಳಲ್ಲಿ ದೌರ್ಬಲ್ಯ ಮತ್ತು ಗೊಂದಲ ಉಂಟಾಗುವುದು.

ಮಾತನಾಡಲು ಕಷ್ಟವಾಗುವುದು ಅಥವಾ ದೃಷ್ಟಿ ಮಸುಕಾಗುವುದು.

ತಲೆನೋವಿನ ಜೊತೆಗೆ ಜ್ವರ ಅಥವಾ ಫಿಟ್ಸ್ (ಮೂರ್ಛೆ ರೋಗ) ಬರುವುದು.

ತಲೆಗೆ ಏನಾದರೂ ಪೆಟ್ಟು ಬಿದ್ದ ನಂತರ ತಲೆನೋವು ಪ್ರಾರಂಭವಾಗುವುದು.

ಈ ಲಕ್ಷಣಗಳು ಕೇವಲ ಮೈಗ್ರೇನ್ ಅಷ್ಟೇ ಅಲ್ಲದೆ, ಇತರ ತೀವ್ರ ಸ್ವರೂಪದ ನರಸಂಬಂಧಿ ಸಮಸ್ಯೆಗಳ ಸಂಕೇತವೂ ಆಗಿರಬಹುದು. ಆದ್ದರಿಂದ ಇವುಗಳನ್ನು ನಿರ್ಲಕ್ಷಿಸಬಾರದು.

ಎಂಆರ್‌ಐ (MRI) ಅಥವಾ ಸಿಟಿ ಸ್ಕ್ಯಾನ್ (CT Scan) ಯಾವಾಗ ಅಗತ್ಯ?

ಪದೇ ಪದೆ ಮೈಗ್ರೇನ್‌ನಿಂದ ಬಳಲುತ್ತಿರುವವರು ಸರಿಯಾದ ಮೂಲ ಕಾರಣವನ್ನು ತಿಳಿದುಕೊಳ್ಳಲು ನರರೋಗ ತಜ್ಞರನ್ನು ಸಂಪರ್ಕಿಸಬೇಕು. ಮೆದುಳಿಗೆ ಸಂಬಂಧಿಸಿದ ಇತರ ತೀವ್ರತರದ ಕಾಯಿಲೆಗಳನ್ನು ಹೊರಗಿಡಲು (Rule out) ಕೆಲವರಿಗೆ ಮಾತ್ರ ಎಂಆರ್‌ಐ ಅಥವಾ ಸಿಟಿ ಸ್ಕ್ಯಾನ್‌ನಂತಹ ಪರೀಕ್ಷೆಗಳನ್ನು ವೈದ್ಯರು ಶಿಫಾರಸು ಮಾಡುತ್ತಾರೆ.

ತಲೆನೋವು ಇದ್ದಕ್ಕಿದ್ದಂತೆ ಸ್ಫೋಟಗೊಂಡಂತೆ ತೀವ್ರವಾಗಿ ಪ್ರಾರಂಭವಾದರೆ,

ದಿನದಿಂದ ದಿನಕ್ಕೆ ನೋವಿನ ತೀವ್ರತೆ ಹೆಚ್ಚಾಗುತ್ತಿದ್ದರೆ,

50 ವರ್ಷ ದಾಟಿದ ನಂತರ ಮೊದಲ ಬಾರಿಗೆ ತಲೆನೋವು ಕಾಣಿಸಿಕೊಂಡರೆ,

ತಕ್ಷಣವೇ ನ್ಯೂರೋಲಾಜಿಕಲ್ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು.

Join WhatsApp

Join Now

Join Telegram

Join Now