Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ತೇಜಸ್ವಿ ಸೂರ್ಯರನ್ನ ಅಮಾವಾಸ್ಯೆ ಎಂದ ಸಿಎಂ ಸಿದ್ದರಾಮಯ್ಯ : ಯಾಕೆ ಗೊತ್ತಾ..?

---Advertisement---

ಬೆಂಗಳೂರು: ಜಿಎಸ್ಟಿ ಹಣದಲ್ಲಿ ಕೇಂದ್ರದಿಂದ ಆಗ್ತಾ ಇರುವ ಅನ್ಯಾಯದ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಆಗಾಗ ಆಕ್ರೋಶ ಹೊರ ಹಾಕ್ತಾನೆ ಇರುತ್ತಾರೆ. ಇದೀಗ ತೇಜಸ್ವಿ ಸೂರ್ಯ ಅವರ ಬಗ್ಗೆ ಇದೇ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಅವರು, ಅಮಾವಾಸ್ಯೆ ಎಂದು ಕರೆದಿದ್ದಾರೆ.

ಇಂದು ಬೆಂಗಳೂರಿನ ಚಿಕ್ಕಪೇಟೆಯಲ್ಲಿ ವೈಟ್ ಟ್ಯಾಪಿಂಗ್ ರಸ್ತೆಗೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಬಳಿಕ ಮಾತನಾಡಿ, ಒಂದು ದಿನ ಮಾತಾಡ್ಲಿಲ್ಲ. ಅವನ್ಯಾರೋ ಅವ್ನು ಸೌತ್ ನಲ್ಲಿ ಎಂಪಿ ಆದವನು. ಸೂರ್ಯ, ಅಮಾವಾಸ್ಯೆ ಅಂತ ಕರೀತೀನಿ ನಾನು ಅವನನ್ನ. ಇಲ್ಲಿ ಮಂತ್ರಿ ಆಗವ್ರಲ್ಲ ಶೋಭಾ ಕರಂದ್ಲಾಜೆ, ಒಂದು ದಿನ ಬಾಯ್ಬಿಡಲಿಲ್ಲ. ಕುಮಾರಸ್ವಾಮಿ ಮಂತ್ರಿ. ಒಂದು ದಜಿನ ಬಾಯ್ಬಿಡಲಿಲ್ಲ. ಕರ್ನಾಟಕಕ್ಕೆ ಕೊಡಬೇಕಾದ ಹಣವನ್ನ ಕೊಡ್ರಿ ಅಂತ‌. ಇವರಿಗೆಲ್ಲಾ ಏನು ಮಾಡೋಣಾ ಹೇಳಿ ಎಂದು ಪ್ರಶ್ನಿಸಿದ್ದಾರೆ.

ನಮ್ಮಿಂದ ವೋಟ್ ತಗೊಂಡು ಗೆದ್ದು ಹೋಗಿ, ನಮ್ಮ ರಾಜ್ಯದ ವಿಚಾರಕ್ಕೆ ಏನು ಮಾತಾಡ್ಲಿಲ್ಲ ಅಂದ್ರೆ ಕೋಪ ಬರುತ್ತಾ ಇಲ್ವಾ ಹೇಳಿ‌. ಕೋಪ ಬಂದಾಗ ಏನ್ ಮಾಡಬೇಕು ಹೇಳಿ. ಅವರನ್ನ ಸೋಲಿಸುವಂತ ಕೆಲಸ ಮಾಡ್ರಪ್ಪ ನಿಮ್ಗೆ ದಮ್ಮಯ್ಯ ಅಂತೀನಿ. ಕರ್ನಾಟಕಕ್ಕೆ ಅನ್ಯಾಯ ಮಾಡ್ತಾ ಇದ್ದಾರೆ, ಕರ್ನಾಟಕಕ್ಕೆ ದ್ರೋಹ ಮಾಡ್ತಾ ಇದ್ದಾರೆ. ಇದನ್ನ ನೀವೆಲ್ಲಾ ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಸದ್ಯಕ್ಕೆ ದಿನೇಶ್ ಗುಂಡೂರಾವ್ ಅವರು, ಅವರ ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸಿದ್ದಾರೆ. ಕಾಮಗಾರಿ ಶುರು ಮಾಡಿದ್ದಾರೆ. ಇವತ್ತು 50 ಕೋಟಿ ಯೋಜನೆಗೆ ಗುದ್ದಲಿ ಪೂಜೆ ಮಾಡಿದ್ದೀವಿ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...