ಬೆಂಗಳೂರು: ರಾಜ್ಯದಲ್ಲಿ ಸದ್ಯ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಯುತ್ತಿದೆ. ಎಲ್ಲರೂ ಇದಕ್ಕೆ ಬೆಂಬಲ ನೀಡಬೇಕು ಅಂತಾನೆ ಸರ್ಕಾರ ಮನವಿ ಮಾಡಿದೆ. ಆದರೆ ಇಂದು ಈ ಸಮೀಕ್ಷೆಯನ್ನ ಸುಧಾಮೂರ್ತಿ ಅವರೇ ಈ ಸಮೀಕ್ಷೆಯನ್ನ ನಿರಾಕರಿಸಿದ್ದಾರೆ. ಸಮಾಜದಲ್ಲಿ ಯುವಜನತೆಗೆ ದೊಡ್ಡ ಸ್ಪೂರ್ತಿಯಾಗಿ ನಿಂತವರು ಸುಧಾಮೂರ್ತಿ. ಇದೀಗ ಸಮೀಕ್ಷೆ ನಿರಾಕರಿಸಿದ್ದು, ಎಲ್ಲರಿಗೂ ಶಾಕಿಂಗ್ ವಿಚಾರವೇ ಸರಿ. ಹಾಗಾದ್ರೆ ಸಮೀಕ್ಷೆ ನಿರಾಕರಣೆ ಮಾಡುವುದಕ್ಕೆ ಏನು ಕಾರಣ ಎಂಬ ಮಾಹಿತಿ ಇಲ್ಲಿದೆ ನೋಡಿ.
ಇನ್ಫೋಸಿಸ್ ಸಂಸ್ಥಾಪಕರಾ ಸುಧಾಮೂರ್ತಿ ಹಾಗೂ ನಾರಾಯಣ ಮೂರ್ತಿ ದಂಪತಿ ಇದನ್ನ ನಿರಾಕರಣೆ ಮಾಡಿದ್ದು, ನಾವೂ ಹಿಂದುಳಿದ ವರ್ಗದ ಯಾವ ಜಾತಿಗೂ ಸೇರುವವರಲ್ಲ. ಆದ್ದರಿಂದ ಈ ಸಮೀಕ್ಷೆಯಿಂದ ಸರ್ಕಾರಕ್ಕೆ ಏನೂ ಉಪಯೋಗವಿಲ್ಲ. ಆದ್ದರಿಂದ ನಾವೂ ಈ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ ಎಂದು ಸ್ವಯಂ ದೃಢೀಕರಣ ಪತ್ರದಲ್ಲಿ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡರಯುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನನ್ನ ಕೆಲವು ವೈಯಕ್ತಿಕ ಕಾರಣಗಳಿಂದ ಮಾಹಿತಿ ನೀಡಲು ನಿರಾಕರಿಸುತ್ತೇವೆ. ನಾನು ಮತ್ತು ನನ್ನ ಕುಟುಂಬ ಈ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ. ಮತ್ತು ನಮ್ಮ ಮಾಹಿತಿಯನ್ನು ನೀಡುವುದಿಲ್ಲ ಎಂದು ಈ ಮೂಲಕ ದೃಢೀಕರಿಸುತ್ತೇವೆ ಎಂದು ದಂಪತಿ ತಿಳಿಸಿದ್ದಾರೆ.
ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ಸಮೀಕ್ಷೆಯನ್ನ ಬಿಜೆಪಿಯ ನಾಯಕರು ಕೂಡ ವಿರೋಧ ಮಾಡಿದ್ದಾರೆ. ಯಾವುದೇ ಮಾಹಿತಿ ನೀಡಲ್ಲ ಎಂದಿದ್ದಾರೆ. ಸಮೀಕ್ಷೆಯಲ್ಲಿ ಬೇಡದ ಪ್ರಶ್ನೆಗಳು ಇರುವ ಕಾರಣ ಸಾಕಷ್ಟು ಈ ಸಮೀಕ್ಷೆಯಿಂದ ಕೆಲವರು ಬೇಸರ ವ್ಯಕ್ತಪಡಿಸಿದ್ದಾರೆ. ಡಿಕೆ ಶಿವಕುಮಾರ್ ಅವರು ಕೂಡ ತಾಳ್ಮೆ ಕಳೆದುಕೊಂಡಿದ್ದರು, ಪ್ರಶ್ನೆಗಳ ಸುರಿಮಳೆಗೆ.




