ಚಿಂತಾಮಣಿ : ಹೃದಯಾಘಾತದ ಪ್ರಕರಣಗಳು ಇತ್ತೀಚೆಗೆ ಸ್ವಲ್ಪ ಮಟ್ಟಿಗಾದರು ಕಡಿಮೆಯಾಗಿದ್ದವು. ಆದರೆ ಈಗ ಮತ್ತೆ ಅದರ ಸುದ್ದಿಗಳು ಹೆಚ್ಚಾಗುತ್ತಿವೆ. ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿದ್ದ ಶಿಕ್ಷಕರೊಬ್ಬರು ಈ ಹೃದಯಾಘಾತಕ್ಕೆ ಬಲಿಯಾದ ಘಟನೆ ಚಿಂತಾಮಣಿ ಪಟ್ಟಣದಲ್ಲಿ ಭಾನುವಾರ ನಡೆದಿದೆ. 58 ವರ್ಷದ ವೈ ವಿ ರಾಮಕೃಷ್ಣ ನಿಧನರಾದ ಶಿಕ್ಷಕ.
ರಾಮಕೃಷ್ಣ ಅವರು ಯಗವಕೋಟಿ ಕ್ಲಸ್ಟರ್ ವ್ಯಾಪ್ತಿಯ ದಿಗವಕೋಟೆ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ನಿವೃತ್ತಿಯ ಅಂಚಿನಲ್ಲಿದ್ದವರು. ಸರ್ಕಾರದ ಯೋಜನೆಯ ಸಮೀಕ್ಷೆಗೆಂದು ರಾಮಕೃಷ್ಣ ಅವರನ್ನು ನೇಮಿಸಲಾಗುತ್ತು. ಮತ್ತೊಬ್ಬ ಶಿಕ್ಷಕರ ಸಹಾಯದಿಂದ ರಾಮಕೃಷ್ಣ ಅವರು ಸರ್ವೇ ನಡೆಸುತ್ತಿದ್ದರು. ಭಾನುವಾರ ಅವರಿಗೆ ಸರ್ವೇ ನಡೆಸುತ್ತಿದ್ದ ಸಮಯದಲ್ಲಿಯೇ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಬಳಿಕ ಡೆಕ್ಕನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ನೀಡುವ ಮೊದಲೇ ಸಾವನ್ನಪ್ಪಿದ್ದಾರೆ. ಸೋಮವಾರ ಅವರ ಅಂತ್ಯಕ್ರಿಯೆ ನಡೆಯಿತು.
ಜಾತಿ ಗಣತಿ ಸಮೀಕ್ಷೆಗಾಗಿ ಎಲ್ಲಾ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ. ಒಂದು ಕಡೆ ಸರ್ವರ್ ಸಮಸ್ಯೆಯನ್ನು ಎದುರಿಸುತ್ತಿರುವ ಶಿಕ್ಷಕರಿಗೆ ಆರೋಗ್ಯದ ಕಾಳಜಿಯೂ ಬಹಳ ಮುಖ್ಯವಾಗಿದೆ. ಎಷ್ಟೋ ಶಿಕ್ಷಕರು ನಿವೃತ್ತಿಯ ಅಂಚಿನಲ್ಲಿ ಇದ್ದ ಶಿಕ್ಷಕರಿಗೂ ಈಗ ಸಮೀಕ್ಷೆಯ ತಲೆ ಬಿಸಿ ಏರಿದೆ. ಕೆಲ ಹಳ್ಳಿಗಳಲ್ಲಿ ಓಡಾಟಕ್ಕೂ ಕಷ್ಟವಾಗಿದೆ. ಎಷ್ಟೋ ಹಳ್ಳಿಗಳಿಗೆ ಬಸ್ ಗಳ ಸೌಲಭ್ಯವೂ ಇಲ್ಲ. ಆ ಕಡೆಯೆಲ್ಲಾ ಶಿಕ್ಷಕರು ಏನೋ ಪಾಡು ಬಿದ್ದು, ಓಡಾಟ ನಡೆಸಿ ಸಮೀಕ್ಷೆ ನಡೆಸುತ್ತಿದ್ದಾರೆ. ಯಾಕಂದ್ರೆ ಕೇವಲ ಹದಿನಾರು ದಿನಗಳ ಕಾಲಮಿತಿ ಇದೆ. ಅಕ್ಟೋಬರ್ 8 ಕ್ಕೆ ಈ ಸಮೀಕ್ಷೆಗೆ ಡೆಡ್ಲೈನ್ ಇದೆ. ಅಷ್ಟರಲ್ಲಿ ಸಮೀಕ್ಷೆಯನ್ನ ಮುಗಿಸಬೇಕಾದ ಅನಿವಾರ್ಯತೆ ಶಿಕ್ಷಕರಿಗೆ ಇದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















