Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಮಲ್ಲಮ್ಮ ಮಾಡಿದ ಯಡವಟ್ಟಿನಿಂದ ಮನೆವರು ಉಪವಾಸ..!

---Advertisement---

ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಅದ್ದೂರಿಯಾಗಿ ಶುರುವಾಗಿದೆ. ಅದರಲ್ಲೂ ಮಲ್ಲಮ್ಮನ ಎಂಟ್ರಿಗೆ ಹಲವರು ಖುಷಿ ಪಟ್ಟಿದ್ದಾರೆ. ಮಲ್ಲಮ್ಮನ ಮುಗ್ಧತೆಗೆ ಫಿದಾ ಆಗಿದ್ದಾರೆ. ಅವರ ಮುಗ್ಧತೆ ಹೀಗೆ ಇರಲಿ ಎಂದೇ ಎಲ್ಲರು ಬಯಸುತ್ತಿದ್ದಾರೆ. ಆದರೆ ಆ ಮುಗ್ಧತೆ ಬಿಗ್ ಬಾಸ್ ಮನೆಯೊಳಗೆ ಹೇಗೆಲ್ಲ ವರ್ಕ್ ಆಗುತ್ತೆ ಅನ್ನೋ ಪ್ರಶ್ನೆ ಇದ್ರೆ, ಆಟಗಳೆಲ್ಲ ಅರ್ಥವಾಗುತ್ತಾ..? ಗೆಲ್ಲೋಕೆ ಗಿಮಿಕ್ ಮಾಡುವ ಸ್ಪರ್ಧಿಗಳ ನಡವೆ ಮಲ್ಲಮ್ಮ ಹೇಗಿರ್ತಾರೆ ಎಂಬೆಲ್ಲಾ ಪ್ರಶ್ನೆಗಳು ಒಟ್ಟಾಗಿ ಕಾಡುವುದಕ್ಕೆ ಶುರುವಾಗಿದೆ. ಇದರ ನಡುವೆಯೇ ಮಲ್ಲಮ್ಮ ಬಿಗ್ ಬಾಸ್ ಮನೆಯೊಳಗೆ ಯಡವಟ್ಟೊಂದನ್ನ ಮಾಡಿಕೊಂಡಿದ್ದಾರೆ.

ಬಿಗ್ ಬಾಸ್ ಪ್ರೋಮೊವೊಂದು ರಿಲೀಸ್ ಆಗಿದೆ. ಅದರಲ್ಲಿ ಇಂದಿನ ದಿನಸಿ ವಸ್ತುಗಳನ್ನು ಮನೆಯವರು ಪಡೆದುಕೊಳ್ಳಬೇಕಾದ ಸವಾಲಿದೆ. ಬಿಗ್ ಬಾಸ್ ಸುಮ್ಮ ಸುಮ್ಮನೆ ಏನನ್ನು ನೀಡುವುದಿಲ್ಲ. ಅದಕ್ಕೆ ಅಂತ ಟಾಸ್ಕ್ ಗಳನ್ನ ನೀಡುತ್ತಾರೆ. ಅದರಲ್ಲೂ ದಿನಸಿ ಸಾಮಾಗ್ರಿಗಳನ್ನ ಪಡೆದುಕೊಳ್ಳುವುದು ಸುಲಭವಲ್ಲ. ಶುರುವಾದ ಮೊದಲ ದಿನವೇ ದಿನಸಿ ಸಾಮಾಗ್ರಿಗಳನ್ನು ಪಡೆಯುವಲ್ಲಿ ಮನೆ ಮಂದಿ ಎಡವಿದ್ದಾರೆ.

ಮಲ್ಲಮ್ಮ ಟಾಸ್ಕ್ ಆಡುವುದಕ್ಕೆ ಬಂದಿದ್ದು, ಬಿಗ್ ಬಾಸ್ ನೀಡಿದ ಟಾಸ್ಕ್ ನಲ್ಲಿ ಗೊಂದಲವಾಗಿದ್ದಾರೆ. ಈ ಮೂಲಕ ಈ ವಾರದ ದಿನಸಿಯನ್ನು ಮನೆ ಮಂದಿ ಕಳೆದುಕೊಂಡಿದ್ದಾರೆ. ಆಟ ಅರ್ಥವಾಗದೆ ಮಲ್ಲಮ್ಮ ಸೋತಿರಬಹುದು ಎಂದು ಮನೆಯವರು ಸುಮ್ಮನಿರುವುದು ಅನುಮಾನ. ಅವರ ಮೇಲೆ ಕೋಪ ಮಾಡಿಕೊಳ್ಳುವ ಸಾಧ್ಯತೆಯೂ ಇದೆ. ಪ್ರೋಮೋದಲ್ಲಿ ಕೇವಲ ದಿನಸಿ ಪದಾರ್ಥ ಮಿಸ್ ಆಗಿರುವುದಷ್ಟೇ ಕಾಣಿಸುತ್ತಿದೆ. ಪೂರ್ತಿ ಎಪಿಸೋಡಿನಲ್ಲಷ್ಟೇ ಮಲ್ಲಮ್ಮನ ಬಗ್ಗೆ ಮನೆಯವರು ಎಷ್ಟು ಕೋಪ ಮಾಡಿಕೊಂಡರು ಎಂಬುದು ತಿಳಿಯುತ್ತದೆ. ಹೀಗಾಗಿ ಇಂದಿನ ಎಪಿಸೋಡ್ ಕುತೂಹಲಕ್ಕೆ ಕಾರಣವಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now