Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕ : ಎಐಸಿಸಿ ಸೂಚಿಸಿದ್ದು 39.. ಸಿದ್ದರಾಮಯ್ಯ ಫೈನಲ್ ಮಾಡಿದ್ದೆಷ್ಟು..?

---Advertisement---

ಬೆಂಗಳೂರು: ಖಾಲಿ ಇದ್ದ ನಿಗಮಗಳ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನ ನಿಷ್ಠಾವಂತ ಕಾರ್ಯಕರ್ತರನ್ನು ನೇಮಕ ಮಾಡಿ ಎಐಸಿಸಿ ಆದೇಶ ಹೊರಡಿಸಿತ್ತು. ಆದ್ರೆ ಅದರೊಳಗೆ ಕೊಂಚ ಗೊಂದಲ ಉಂಟಾಗಿತ್ತು. ಎಐಸಿಸಿ ನೀಡಿದ್ದ ಪಟ್ಟಿಯನ್ನ ಕೊಂಚ ಮಾರ್ಪಾಡು ಮಾಡಿ, ಸಿದ್ದರಾಮಯ್ಯ ಅವರು ಅಧಿಕೃತ ಮುದ್ರೆ ಒತ್ತಿದ್ದಾರೆ. ಹಾಗಾದ್ರೆ ಸಿದ್ದರಾಮಯ್ಯ ಅವರು ಬದಲಾಯಿಸಿದ್ದೇನು..? ಹೈಕಮಾಂಡ್ ನೀಡಿದ್ದ ಪಟ್ಟಿ ಯಾವುದು ಎಂಬ ಮಾಹಿತಿ ಇಲ್ಲಿದೆ.

ಇತ್ತೀಚೆಗಷ್ಟೆ ಎಐಸಿಸಿ ಪಟ್ಟುಯನ್ನ ಬಿಡುಗಡೆ ಮಾಡಿತ್ತು. ಆ ಪಟ್ಟಿಯಲ್ಲಿ ಒಟ್ಟು 39 ಜನರ ಹೆಸರು ಇತ್ತು. ಆ 39 ಜನರ ಬದಲುಗೆ ಸಿಎಂ ಸಿದ್ದರಾಮಯ್ಯ ಅವರು ಬದಲಾವಣೆ ಮಾಡಿ, 34 ಮಂದಿಗೆ ಅಧ್ಯಕ್ಷರ ಪಟ್ಟಿ ತಯಾರಿಸಿ ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಫೈನಲ್ ಪಟ್ಟಿಯು ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಇಲಾಖೆಗಳಿಗೆ ಪಟ್ಟಿಯನ್ನು ರವಾನೆ ಮಾಡಲಾಗಿದೆ.

ಎಐಸಿಸಿ ಕೊಟ್ಟಿದ್ದ ಪಟ್ಟಿಯಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ ಅಧ್ಯಕ್ಷ ಸ್ಥಾನದ ಗೊಂದಲ ವಿಚಾರಕ್ಕೆ ಸಂಬಂಧ ಪಟ್ಟಂತೆ ರಾಜೂ ಕಾಗೆ ಅವರೇ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆಯಲಿದ್ದಾರೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಅವರು ಕೂಡ ಧೈರ್ಯ ತುಂಬಿ ಕಳುಹಿಸಿದ್ದರು‌. ಹಾಗೇ ಮೈಸೂರು ಪೇಂಟ್ಸ್, ವಾರ್ನೀಶ್ ಲಿಮಿಟೆಡ್ ನಿಗಮಕ್ಕೆ ಹೆಚ್.ಡಿ.ಗಣೇಶ್, ಬಿಎಂಟಿಸಿ ಅಧ್ಯಕ್ಷರಾಗಿ ನಿಕೇತ್ ರಾಜ್ ಮೌರ್ಯ ನೇಮಕವಾಗಿದ್ದಾರೆ. ಆದರೆ ಇಲ್ಲಿ ಟ್ವಿಸ್ಟ್ ಅಂದ್ರೆ ಎಐಸಿಸಿ ರವಾನೆ ಮಾಡಿರುವ ಪಟ್ಟಿಯಲ್ಲಿ ಹೆಚ್ ಡಿ ಗಣೇಶ್ ಹಾಗೂ ನಿಕೇತ್ ರಾಜ್ ಅವರ ಹೆಸರುಗಳು ಇರಲಿಲ್ಲ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...