ದಕ್ಷಿಣ ಕನ್ನಡ: ಧರ್ಮಸ್ಥಳದ ಬುರುಡೆ ಕೇಸ್ ರಾಜ್ಯ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಆ ವಿಚಾರ ತಣ್ಣಗಾಗಿದೆ. ಆದ್ರೆ ಎಸ್ಐಟಿ ಮಾತ್ರ ತನಿಖೆಯನ್ನು ನಡೆಸುತ್ತಲೇ ಇದೆ. ಈ ನಡುವೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆ ಅವರು ರಾಜ್ಯ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.
ಇಂದು ಧರ್ಮಸ್ಥಳದಲ್ಲಿ ಮಾತನಾಡಿದ ವೀರೇಂದ್ರ ಹೆಗ್ಡೆ, ಧರ್ಮಸ್ಥಳ ಬೇರೆ ಅಲ್ಲ.. ಊರು ಬೇರೆ ಅಲ್ಲ ಎಲ್ಲರೂ ಒಂದೇ. ನಮ್ಮದು ಎಂಬ ಭಾವನೆ ಹೀಗೆ ಇರಲಿ. ಎಷ್ಟು ನಿಷ್ಠುರವಾಗಿ ನಮ್ಮ ಮೇಲೆ ದಬ್ಬಾಳಿಕೆ ನಡೆಸಿದರು. ನಾವೂ ಯಾರಿಗೂ ನೋವು ಕೊಟ್ಟಿಲ್ಲ. ಪತ್ರಿಕಾ ಮಾಧ್ಯಮದವರೇ ಕೇಳಿದರು. ಯಾಕೆ ನಿಮ್ಮ ಮೇಲೆ ಇಷ್ಟಿಂದು ದ್ವೇಷ ಅಂತ ಕೇಳ್ತಾ ಇದಾರೆ. ಅದೇ ವಿಚಾರ ನನಗೂ ಗೊತ್ತಾಗಬೇಕಿರುವುದು. ಎತ್ತರದಲ್ಲಿ ನೀರು ನಿಲ್ಲುವುದಿಲ್ಲ, ಹರಿಯಲೇಬೇಕು. ಈಗ ಹರಿದು ಬಂದಿದೆ. ಯಾರೆಲ್ಲಾ ನಮ್ಮ ಮೇಲೆ ದೃಢವಾದ ನಂಬಿಕೆ ಇಟ್ಟಿದ್ದೀರೋ ಅವರೆಲ್ಲರಿಗೂ ಧನ್ಯವಾದ. ಯಾಕೆ ಈ ಶತೃತ್ವ ಎಂಬುದನ್ನ ಹೇಳಿ ಎಂದು ಕೇಳಿದ್ದಾರೆ.
ಈ ಮೊದಲು ಹೇಳ್ತಾ ಇದ್ದೆ ಎಸ್ಐಟಿ ವರದಿ ಬಾರದೆ ನಾನು ಏನು ಮಾತನಾಡುವುದಿಲ್ಲ ಅಂತ. ಈಗ ಅರ್ಧ ರಿಪೋರ್ಟ್ ಬಂದಿದೆ. ಅದು ಧೈರ್ಯ. ಆ ವಿಚಾರ ಏನು ಮಾತನಾಡಬೇಡಿ ಎಂದು ನಮ್ಮ ವಕೀಲರು ಹೇಳಿದ್ದರು. ಸರ್ಕಾರಕ್ಕೆ ಈ ಮೂಲಕ ನಾನು ಕೃತಜ್ಞನಾಗಿದ್ದೇನೆ. ಎಸ್ಐಟಿ ಮಾಡಿ ಅವರು ಸತ್ಯ ಶೋಧನೆ ಮಾಡಿದ್ದಕ್ಕೆ ಸತ್ಯ ಹೊರಗೆ ಬಿದ್ದಿದೆ. ವೇದಿಕೆ ಮುಖ್ಯ ಅಲ್ಲ, ಹೊಗಳಿಕೆ ಮುಖ್ಯ ಅಲ್ಲ. ಅದರ ಹಿಂದಿನ ಭಾವನೆ, ಪ್ರೀತಿ ಮುಖ್ಯ ಎಂದಿದ್ದಾರೆ.
ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






