ಚಿಕ್ಕೋಡಿ: ಜಯಮೃತ್ಯುಂಜಯ ಸ್ವಾಮೀಜಿಯನ್ನ ಮಠದಿಂದಾನೇ ಉಚ್ಛಾಟನೆ ಮಾಡಲಾಗಿದೆ. ಈ ಸಂಬಂಧ ಮಾತನಾಡಿರುವ ಜಯ ಮೃತ್ಯುಂಜಯ ಸ್ವಾಮೀಜಿ, ಬದಲಾವಣೆ ಬಯಸಿದಂತ ವ್ಯಕ್ತಿಗಳಿಗೆ ತೊಂದರೆ ಕೊಡುವುದು ಸಹಜ. ಅದು ಯಾರನ್ನು ಬಿಟ್ಟಿಲ್ಲ. ಬಸವಣ್ಣನವರನ್ನು ಬಿಟ್ಟಿಲ್ಲ, ಅಂಬೇಡ್ಕರ್ ಅವರನ್ನು ಬಿಟ್ಟಿಲ್ಲ ಎಂದು ಬೇಸರದಿಂದ ಮಾತನ್ನಾಡಿದ್ದಾರೆ.
ನಮ್ಮ ಗುರಿ, ನಿಷ್ಠೆ ಮಾತ್ರ ಅಚಲವಾಗಿರುವಂತದ್ದು. ಎಲ್ಲರೂ ಸೇರಿಕೊಂಡು ಬಸವ ಸಂಪ್ರದಾಯ ಉಳಿಸಬೇಕು. ಶರಣ ಸಮಾಜವನ್ನು ಕಟ್ಟೋಣಾ. ನಾನು ಎಲ್ಲಿಯೂ ಆಸ್ತಿ ಮಾಡಿಲ್ಲ. ಸ್ವಯಂ ಘೋಷಿತ ಆಸ್ತಿಯನ್ನ ಮಾಡಿಲ್ಲ. ಭಕ್ತರು ದಾನವಾಗಿ ಕೊಟ್ಟಿರುವಂತ ಆಸ್ತಿ ಅಷ್ಟೇ ಇರೋದು. ನನಗೆ ಆಸ್ತಿ ವಿಚಾರಕ್ಕೆ ಯಾವುದೇ ರೀತಿಯ ನೋಟೀಸ್ ಬಂದಿಲ್ಲ ಅಂತ ಕೂಡ ಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಟ್ರಸ್ಟ್ನ ಮಾತು ಕೇಳಲ್ಲ, ಅವರ ವಿರುದ್ಧ ದೊಡ್ಡ ಕಡತವೇ ಇದೆ. ಅದಕ್ಕೆ ಪೀಠದಿಂದ ಉಚ್ಛಾಟಿಸಲು ನಿರ್ಣಯ ತೆಗೆದುಕೊಳ್ಳಲಾಗಿದೆ. ಅವರ ವಿರುದ್ಧ ದೂರಗಳ ಪಟ್ಟಿ ಬಹಳ ಇದೆ. ಅದನ್ನು ಇಲ್ಲಿ ಬಹಿರಂಗ ಪಡೆಸಲು ಆಗಲ್ಲ. ಸ್ವಾಮೀಜಿ ತಮಗೆ ಸ್ವಂತ ಆಸ್ತಿ ಮಾಡಿಕೊಳ್ಳಬಾರದು ಅಂತ ನಮ್ಮ ಬೈಲಾದಲ್ಲಿ ಇದೆ. ಆದ್ರೆ, ಸ್ವಾಮೀಜಿ ಸ್ವಂತಕ್ಕೆ ಆಸ್ತಿ ಮಾಡಿದ್ದಾರೆ. ಸಮಾಜ ಸಂಘಟನೆ ಬದಲಿಗೆ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಹಣಕಾಸು ವಿಚಾರದಲ್ಲಿ ಹತ್ತಾರು ದೂರುಗಳು ಇವೆ. ಈ ಬಗ್ಗೆ ಸ್ವಾಮೀಜಿಗೆ ಹಿಂದೆ 2014ರಲ್ಲೇ ನೋಟಿಸ್ ಕೊಟ್ಟಿದ್ದೇವು. ಇವತ್ತು ಕೂಡಲಸಂಗಮದಲ್ಲಿ ನಡೆದ ಟ್ರಸ್ಟಿಗಳ ಸಭೆಯಲ್ಲಿ ಸ್ವಾಮೀಜಿಯನ್ನ ಪೀಠದಿಂದ ಉಚ್ಛಾಟಿಸಲು 30 ಜನ ಟ್ರಸ್ಟಿಗಳ ಪೈಕಿ ಬಹುಮತದ ಟ್ರಸ್ಟಿಗಳು ಒಪ್ಪಿಗೆ ನೀಡಿದರು ಎಂದು ಟ್ರಸ್ಟ್ ಕಾರ್ಯದರ್ಶಿ ನೀಲಕಂಠ ಅಸೂಟಿ ಹೇಳಿದ್ದಾರೆ.

ನಿಮ್ಮೂರಿನ ಸುದ್ದಿ, ಈಗ 'ಸುದ್ದಿ ಒನ್' ನಲ್ಲಿ!
ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.












