ಸದ್ಯ ರಾಜ್ಯದಲ್ಲಿ ಎಸ್ಟಿ ಸಮುದಾಯಕ್ಕೆ ಕುರುಬರನ್ನ ಸೇರ್ಪಡೆ ಮಾಡುವ ಕುರಿತು ಬಾರೀ ಚರ್ಚೆಗಳು ಸರ್ಕಾರಿ ಮಟ್ಟದಲ್ಲಿ ನಡೆಯುತ್ತಿವೆ. ಆದರೆ ಇದಕ್ಕೆ ಅದೇ ಎಸ್ಟಿ ಸಮುದಾಯ ಅಂದ್ರೆ ವಾಲ್ಮೀಕಿ ಸಮುದಾಯದವರು ವಿರೋಧ ವ್ಯಕ್ತಪಡಿಸಿದ್ದಾರೆ. ವಾಲ್ಮೀಕಿ ನಾಯಕ ಪೀಠಾಧಿಪತಿಗಳಾದ ಪ್ರಸನ್ನಾನಂದಪುರಿ ಸ್ವಾಮೀಜಿ ವಿರೋಧ ವ್ಯಕ್ತಪಡಿಸಿದ್ದು, ನಾಳೆ ತಮ್ಮ ಸಮುದಾಯದವರ ಸಭೆ ಕರೆದಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿರುವ ರಾಜನಹಳ್ಳಿ ಪೀಠದಲ್ಲಿ ನಾಳೆ ಬೆಳಗ್ಗೆ 11 ಗಂಟೆಗೆ ವಾಲ್ಮೀಕಿ ಮಠದಲ್ಲಿ ಸಭೆ ಕರೆದಿದ್ದಾರೆ. ಸಭೆಗೆ ವಾಲ್ಮೀಕಿ ಮಠದಲ್ಲಿ ನಾಯಕ ಸಮುದಾಯದ ಮಾಜಿ ಶಾಸಕರು, ಹಾಲಿ ಶಾಸಕರು ಮತ್ತು ಸಚಿವರಿಗೆ ಆಹ್ವಾನ ನೀಡಲಾಗಿದೆ. ಕುರುಬರನ್ನು STಗೆ ಸೇರಿಸಿದ್ರೆ ವಾಲ್ಮೀಕಿ ಸಮಾಜಕ್ಕೆ ಅನ್ಯಾಯವಾಗುತ್ತೆ. ಇದರ ಬಗ್ಗೆ ವಾಲ್ಮೀಕಿ ಸಮುದಾಯದ ನಾಯಕರು ಧ್ವನಿ ಎತ್ತುತ್ತಿಲ್ಲ. ಸದ್ಯ ವಾಲ್ಮೀಕಿ ಸಮುದಾಯಕ್ಕೆ ಕೇವಲ 7.5 ಮೀಸಲಾತಿ ಮಾತ್ರ ಇದೆ. ಕುರುಬ ಸಮಾಜ ST ಗೆ ಸೇರಿದ್ರೆ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಆಗುತ್ತೆ ಎಂಬ ಅಸಮಾಧಾನ ವಾಲ್ಮೀಕಿ ನಾಯಕ ಸಮುದಾಯದ ಜನರಲ್ಲಿದೆ. ಇನ್ನೂ ಜಾತಿಗಣತಿಯಲ್ಲಿ ದಲಿತ ಕ್ರಿಶ್ಚಿಯನ್, ನಾಯಕ ಕ್ರಿಶ್ಚಿಯನ್ ಅಂತ ಇದೆ ಈ ಎಲ್ಲಾ ವಿಚಾರಗಳು ಸಭೆಯಲ್ಲಿ ಚರ್ಚೆಗಳಾಗುತ್ತವೆ.
ಕುರುಬ ಸಮುದಾಯ ಈ ಹಿಂದಿನಿಂದಲೂ ತಮ್ಮನ್ನು ಎಸ್ಟಿ ಪಟ್ಟಿಗೆ ಸೇರ್ಪಡೆ ಮಾಡಬೇಕೆಂದು ಹೋರಾಟ ಮಾಡುತ್ತಿದೆ. ಈಗಾಗಲೇ ಜೇನು ಕುರಿಬ, ಕಾಡು ಕುರುಬ ಸಮುದಾಯಗಳು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಯಾಗಿ ಎಸ್ಟಿ ಮೀಸಲಾತಿ ಲಾಭ ಪಡೆಯುತ್ತಿವೆ. ಹೀಗಾಗಿ ಕುರುಬ ಸಮುದಾಯವನ್ನು ಸೇರ್ಪಡೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.


















