ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್, ಚಿತ್ರದುರ್ಗ
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
2026-27ನೇ ಸಾಲಿನ ದಾಖಲಾತಿಗಳು ಪ್ರಾರಂಭ! (ಪ್ಲೇ ಗ್ರೂಪ್ನಿಂದ 12ನೇ ತರಗತಿವರೆಗೆ)
ಬೆಂಗಳೂರು: ಮದ್ದೂರಿನ ಗಣೇಶೋತ್ಸವದ ಸಂದರ್ಭದಲ್ಲಿ ಕಲ್ಲು ತೂರಾಟ ನಡೆದಿದ್ದು, ಈ ಸಂಬಂಧ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ಮೇಲೆ ಹೌಹಾರಿದ್ದಾರೆ. ಪ್ರತಾಪ್ ಸಿಂಹ ಅವರ ಮಾತಿಗೆ ಇದೀಗ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಗಲಾಟೆ ಮಾಡುವುದು, ದೊಂಬಿ ಮಾಡುವುದು ಇದರ ಹಿಂದೆ ಯಾರೆಲ್ಲಾ ಇದ್ದಾರೋ ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇನೆ. ಸಂಬಂಧ ಪಟ್ಟವರು ಮದ್ದೂರಿಗೆ ಹೋಗ್ತಾ ಇದ್ದಾರೆ. ಬಳಿಕ ಅಲ್ಲಿ ಪರಿಶೀಲನೆ ಮಾಡಿ, ಕ್ರಮ ತೆಗೆದುಕೊಳ್ಳುತ್ತೇವೆ. ಮಸೀದಿ ಮುಂದೆ ಹೋಗುವಾಗ ಕಲ್ಲು ತೂರಾಟವಾಗಿದೆ. ಸ್ವಲ್ಪ ಲಾಠಿ ಪ್ರಹಾರವಾಗಿದೆ. ಪೊಲೀಸರು ಹೇಳಿದಾಗಲೂ ಪೊಲೀಸರ ಮಾತನ್ನ ಕೇಳಿಲ್ಲ. 21 ಜನ ಅರೆಸ್ಟ್ ಆಗಿದ್ದಾರೆ. ಹಿಂದೂಗಳೇ ಮಾಡಿದ್ದರೂ, ಮುಸಲ್ಮಾನರೇ ಆ ತಪ್ಪನ್ನ ಮಾಡಿದ್ದರು ಕೂಡ ಅವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ರಾಜ್ಯದಲ್ಲಿ ಎಲ್ಲೂ ಕೂಡ ನಡೆದಿಲ್ಲ. ಆದರೆ ಮದ್ದೂರಲ್ಲಿ ಈ ರೀತಿ ಆಗಿದೆ ಅಂತಾನೇ ಹೇಳಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಇದೇ ವೇಳೆ ಬಾನು ಮುಷ್ತಾಕ ಅವರ ದಸರಾ ಉದ್ಘಾಟನೆ ವಿಚಾರಕ್ಕೆ ಪ್ರತಾಪ್ ಸಿಂಹ ಕೋರ್ಟ್ ಮೊರೆ ಹೋದ ವಿಚಾರಕ್ಕೆ ಮಾತನಾಡಿದ್ದು, ಕೋರ್ಟ್ ನಲ್ಲಿಯೇ ತೀರ್ಮಾನ ಆಗ್ಲಿ. ನಿಸಾರ್ ಅಹ್ಮದ್ ಇದ್ದಾಗ ಕೋರ್ಟ್ ಹೋಗ್ಲಿಲ್ಲ. ಮಿರ್ಜಾ ಇಸ್ಮಯಿಲ್ ಮೆರವಣಿಗೆಯಾದಾಗ ಕೋರ್ಟ್ ಹೋಗ್ಲಿಲ್ಲ. ಟಿಪ್ಪು ವಿಚಾರ ಬಂದಾಗ ಕೋರ್ಟ್ ಹೋಗ್ಲಿಲ್ಲ. ಬಹುಶಃ ಪಾರ್ಟಿಯಿಂದ ನಿರ್ಲಕ್ಷ್ಯ ಮಾಡಿರುವುದಕ್ಕೋಸ್ಕರ ಹೋಗಿರಬಹುದು ಎಂದಿದ್ದಾರೆ ಸಿದ್ದರಾಮಯ್ಯ ಅವರು.

ನಿಮ್ಮ ಊರಿನ ಅದ್ಧೂರಿ ಜಾತ್ರೆ, ವಿಶೇಷ ಆಚರಣೆಗಳು, ಅಥವಾ ನಿಮ್ಮ ಗಮನಕ್ಕೆ ಬಂದ ಸ್ಥಳೀಯ ಸಮಸ್ಯೆಗಳೇ? ಚಿತ್ರದುರ್ಗ ಹಾಗೂ ಸುತ್ತಮುತ್ತಲಿನ ಯಾವುದೇ ಸುದ್ದಿಯಾದರೂ ನಮಗೆ ತಿಳಿಸಿ. ನಿಮ್ಮ ಧ್ವನಿಯಾಗಿ ನಾವು ನಾಡಿಗೆ ತಲುಪಿಸುತ್ತೇವೆ. ಛಾಯಾಚಿತ್ರ ಮತ್ತು ವಿವರಗಳೊಂದಿಗೆ ನಮಗೆ ಇಮೇಲ್ ಮಾಡಿ.
✉️ suddionenews@gmail.com🛡️ ನಿಮ್ಮ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು.






ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್ಡೇಟ್. ನೀವು ಯಾವಾಗಲೂ ಅಪ್ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್