ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 23 : ನಗರದ ಧವಳಗಿರಿ ಬಡಾವಣೆಯ ಕರ್ನಾಟಕ ಕಿವಿ, ಮೂಗು, ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ನಾಳೆ (ಆಗಸ್ಟ್. 24, ಭಾನುವಾರ) ರಂದು ಉಚಿತ ಮೂಳೆ ಸಾಂದ್ರತೆ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿದೆ.
ಚಿತ್ರದುರ್ಗ ಜಿಲ್ಲಾ ದೇವಾಲಯ ಸಂವರ್ಧನಾ ಸಮಿತಿ ಮತ್ತು ಚಿತ್ರದುರ್ಗ ಜಿಲ್ಲಾ ಪತಂಜಲಿ ಯೋಗ ಟ್ರಸ್ಟ್(ರಿ) ಹಾಗೂ ಚಾಂಪಿಯನ್ಸ್ ಶೈಕ್ಷಣಿಕ ಮತ್ತು ವೈದ್ಯಕೀಯ ಸಂಸ್ಥೆ ಚಿತ್ರದುರ್ಗ ಇವರ ಸಹಯೋಗ, ಹಾಗೂ ಡಾ. ಎನ್. ಬಿ. ಪ್ರಹ್ಲಾದ ಕಿವಿ, ಮೂಗು, ಗಂಟಲು ತಜ್ಞರು, ಕರ್ನಾಟಕ ಕಿವಿ, ಮೂಗು, ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ(ರಿ) ನಂ 29,ಬಸವ ಭವನ, ದವಳಗಿರಿ ಬಡಾವಣೆ ಭೀಮಸಮುದ್ರ ರಸ್ತೆ, ಚಿತ್ರದುರ್ಗ, ಇವರ ಸಹಕಾರದೊಂದಿಗೆ, ಡಾ. ಕೆ. ಜಗದೀಶ್, ಎಂ.ಎಸ್. (ಆರ್ಥೋ), ಅಮೇರಿಕನ್ ಆರ್ಥೋಪೆಡಿಕ್ ಅಸೋಸಿಯೇಷನ್ ಸದಸ್ಯರು, ಕೀಲು, ಮೂಳೆ ಮತ್ತು ಬೆನ್ನೆಲುಬು ತಜ್ಞರು, ಇವರ ನೇತೃತ್ವದಲ್ಲಿ ದಿನಾಂಕ 24-08-2025 ರ ಭಾನುವಾರ ಬೆಳಿಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 02:00 ಗಂಟೆ ಯವರೆಗೆ ಇದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಲು ಕೋರಲಾಗಿದೆ.
ಶಿಬಿರದ ವಿಳಾಸ: ಕರ್ನಾಟಕ ಕಿವಿ, ಮೂಗು, ಗಂಟಲು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ(ರಿ) ನಂ 29,ಬಸವ ಭವನ, ದವಳಗಿರಿ ಬಡಾವಣೆ ಭೀಮಸಮುದ್ರ ರಸ್ತೆ, ಚಿತ್ರದುರ್ಗ.
ಹೆಸರನ್ನು ನೊಂದಾಯಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ, 9483519988











