ಬೆಂಗಳೂರು: ಇಂದು ಬೆಳ್ಳಂ ಬೆಳಗ್ಗೆನೆ ಹಲವೆಡೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮನಿ ಲಾಂಡರಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಇಡಿ ಅಧಿಕಾರಿಗಳು ಶಾಸಕ ವೀರೇಂದ್ರ ಪಪ್ಪಿ ಅವರ ಬೆಂಗಳೂರು, ಚಳ್ಳಕೆರೆ, ಚಿತ್ರದುರ್ಗ ಮತ್ತು ಗೋವಾ ಸೇರಿದಂತೆ ಒಟ್ಟು 17 ಸ್ಥಳಗಳಲ್ಲಿ ದಾಳಿ ನಡೆಸಿದ್ದಾರೆ. ಚಿತ್ರದುರ್ಗ ಮಾತ್ರವಲ್ಲದೆ ಬೆಂಗಳೂರಿನ ಕೈ ನಾಯಕಿ ಕುಸುಮಾ ಅವರಿಗೂ ಇಡಿ ಶಾಕ್ ನೀಡಿದೆ. ಬೆಂಗಳೂರಿನ ಮುದ್ದಿನಪಾಳ್ಯ ರಸ್ತೆಯಲ್ಲಿ ಇರುವ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ.
ಮುದ್ದಿನಪಾಳ್ಯದಲ್ಲಿರುವ ಮನೆಯನ್ನ ಕುಸುಮಾ ಅವರ ಸಹೋದರ ಅನಿಲ್ ಅವರ ಮನೆ ಎಂದೇ ಹೇಳಲಾಗ್ತಿದೆ. ಬೆಳಗ್ಗೆಯಿಂದಾನೂ ದಾಳಿ ನಡೆಸಿದ್ದಾರೆ. ಈಗಲೂ ವಿಚಾರಣೆ ನಡೆಸ್ತಾ ಇದ್ದಾರೆ. ಶಾಸಕ ವೀರೇಂದ್ರ ಪಪ್ಪಿ ಅವರ ಜೊತೆಗೆ ವ್ಯವಹಾರ ನಡೆಸಿದ್ದಾರೆ ಎಂಬ ಆರೋಪವಿದೆ. ಜೊತೆಗೆ ಈ ಮನೆ ಯಾರದ್ದು, ಏನು ಎಂಬ ವಿಚಾರದ ಬಗ್ಗೆಯೂ ಚರ್ಚೆಯಾಗಿತ್ತು. ಈಗ ಅದು ಸೋದರ ಅನಿಲ್ ಅವರ ಮನೆ ಎಂಬುದು ಗೊತ್ತಾಗಿದೆ.
ಚಿತ್ರದುರ್ಗದಲ್ಲಿ ಪಪ್ಪಿ ಅವರ ಮನೆ ಮೇಲೆ ದಾಳಿಯಾದ ಬೆನ್ನಲ್ಲೇ ಇಲ್ಲಿ ಬೆಂಗಳೂರಿಗೂ ತಲುಪಿದೆ. ಈಗಾಗಲೇ ಸಾಕಷ್ಟು ತನಿಖೆ ನಡೆಸಿರುವ ಇಡಿ, ಹಲವು ದಾಖಲೆಗಳನ್ನ ವಶಕ್ಕೆ ಪಡೆದಿದ್ದಾರೆ. ಗೋವಾ ಮತ್ತು ದುಬೈ ಸೇರಿದಂತೆ ಹಲವೆಡೆ ಅನಿಲ್ ವ್ಯವಹಾರವಿದೆ. ವೀರೇಂದ್ರ ಪಪ್ಪಿ ಜೊತೆಗೆ ವ್ಯವಹಾರ ಸಂಬಂಧ ಇಡಿ ದಾಳಿಯಾಗಿದೆ. ಅಷ್ಟೇ ಅಲ್ಲ ಹಲವು ಕಂಪನಿಗಳಲ್ಲಿ ಅನಿಲ್ ಗೌಡ ಡೈರೆಕ್ಟರ್ ಆಗಿದ್ದಾರೆ. ಹೀಗಾಗಿ ಇಡಿ ಅಧಿಕಾರಿಗಳು ಎಲ್ಲಾ ರೀತಿಯ ತನಿಖೆ ನಡೆಸುತ್ತಿದ್ದಾರೆ. ಈ ಮೊದಲು ಅದನ್ನ ಕುಸುಮಾ ಮನೆ ಅಂತಾನೇ ಅಂದುಕೊಂಡಿದ್ದರು. ಆದರೆ ಇಡಿ ತನಿಖೆಯ ನಂತರವಷ್ಟೇ ಅದು ಅವರ ಸಹೋದರ ಅನಿಲ್ ಅವರ ಮನೆ ಎಂಬುದು ಗೊತ್ತಾಗಿದೆ.

