ಬೆಂಗಳೂರು: ಸ್ಯಾಂಡಲ್ ವುಡ್ ಹಿರಿಯ ನಿರ್ದೇಶಕ ಮುರುಳಿ ಮೋಹನ್ ನಿಧನರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮುರುಳಿ ಮೋಹನ್ ಇಹ ಲೋಕ ತ್ಯಜಿಸಿದ್ದಾರೆ. ಜೆಸಿ ರೋಡ್ ಬಳಿಯಿರುವ ಟ್ರಸ್ಟ್ ವೆಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮುರುಳಿ ಮೋಹನ್ ನಿಧನಕ್ಕೆ ಸ್ಯಾಂಡಲ್ ವುಡ್ ಕಂಬನಿ ಮಿಡಿದಿದೆ.
ನಿರ್ದೇಶಕ ಮುರುಳಿ ಮೋಹನ್ ಉಪೇಂದ್ರ ಅವರಿಗೆ ಆಪ್ತರಾಗಿದ್ದರು. ಹಾಗೆ ಅವರಿಗಾಗಿ ಸಿನಿಮಾ ಕೂಡ ಮಾಡಿದ್ದಾರೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಂತ ಮುರುಳಿ ಮೋಹನ್ ಇಂದು ಮಧ್ಯಾಹ್ನ 3 ಗಂಟೆಗೆ ಕೊನೆಯುಸಿರೆಳೆದಿದ್ದಾರೆ. ಕಿಡ್ನಿಯ ಕಸಿ ಮಾಡಬೇಕಾದ ಅವಶ್ಯಕತೆ ಇತ್ತು. ಆ ಕಿಡ್ನಿ ಕಸಿಗಾಗಿ ಹಣ ಕೂಡ ಬೇಕಾಗಿತ್ತು. 25 ಲಕ್ಷ ಹಣದ ಅವಶ್ಯಕತೆ ಇದ್ದ ಕಾರಣ, ವಿಡಿಯೋ ಮೂಲಕ ಮನವಿಯನ್ನು ಮಾಡಿಕೊಂಡಿದ್ದರು. ಆದರೆ ಹಣ ಇಲ್ಲದ ಕಾರಣ ಕಿಡ್ನಿ ಕೂಡ ಕಸಿಯಾಗಿರಲಿಲ್ಲ. ನೋಡಿದ್ರೆ ಈಗ ಇಹಲೋಕವನ್ನೇ ತ್ಯಜಿಸಿದ್ದಾರೆ.
ಕಳೆದ ಐದಾರು ವರ್ಷಗಳಿಂದ ಕಿಡ್ನಿ ಸಮಸ್ಯೆಗೆ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದರು. ಉಪೇಂದ್ರ ಅವರ ಆಪ್ತರಾಗಿದ್ದ ಮುರುಳಿ ಮೋಹನ್ ಅವರು, ಕಾಶೀನಾಥ್ ಬಳಗದಲ್ಲಿ ಗುರುತಿಸಿಕೊಂಡಿದ್ದರು. ಉಪೇಂದ್ರ ಅವರಿಗಾಗಿ ನಾಗರಹಾವು, ರವಿಚಂದ್ರನ್ ಅವರಿಗಾಗಿ ಮಲ್ಲಿಕಾರ್ಜುನ, ಶಿವಣ್ಣರಿಗಾಗಿ ಸಂತು ಸಿನಿಮಾವನ್ನ ಮಾಡಿದ್ದರು. ಅವರ ಸಿನಿಮಾಗಳಿಗಾಗಿ ಆಕ್ಷನ್ ಕಟ್ ಹೇಳಿದ್ದರು. ಅಷ್ಟೇ ಅಲ್ಲ ಉಪ್ಪಿಯ ಹಲವು ಸಿನಿಮಾಗಳಿಗೆ ಜೊತೆಯಾಗಿದ್ದರು. ಆದ್ರೆ ಈಗ ಎಲ್ಲರನ್ನು ಬಿಟ್ಟು, ಎಲ್ಲವನ್ನು ಬಿಟ್ಟು ಹೊರಟಿದ್ದಾರೆ. ಚಿತ್ರರಂಗ, ಗಣ್ಯರು, ಆಪ್ತರು ಕಂಬನಿ ಮಿಡಿದಿದ್ದು, ಅವರ ಆತ್ಮಕ್ಕೆ ಶಾಂತಿಕೋರಿದ್ದಾರೆ. ನಾಳೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ. ಬಳಿಕ ಅಂತ್ಯಸಂಸ್ಕಾರ ನಡೆಯಲಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.














