Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಧರ್ಮಸ್ಥಳದ ಶೋಧ ಕಾರ್ಯ ಸ್ಥಗಿತವಾಗುತ್ತಾ..? ಏನಿದೆ ಅಪ್ಡೇಟ್..?

---Advertisement---

ದಕ್ಷಿಣ ಕನ್ನಡ: ಕಳೆದ ಕೆಲವು ದಿನಗಳಿಂದ ಅನಾಮಿಕ ವ್ಯಕ್ತಿ ತೋರಿಸಿದ ಜಾಗದಲ್ಲೆಲ್ಲಾ ಎಸ್ಐಟಿ ಅಗೆದು ಅಗೆದು ಸುಸ್ತಾಗಿದ್ದಾರೆ. ಆರಂಭದಲ್ಲಿ ಈ ವಿಚಾರವಾಗಿ ಸಾಕಷ್ಟು ಕುತೂಹಲವಿತ್ತು. ಆದರೆ ಅಗೆದ ಜಾಗದಲ್ಲಿ ಏನು ಸಿಗದೆ ಇರೋದನ್ನ ಕಂಡು ಜನ ಕೂಡ ಉತ್ಸಾಹ ಕಳೆದುಕೊಂಡಿದ್ದಾರೆ. 13ನೇ ಸ್ಪಾಟ್ ಬಗ್ಗೆ ಎಲ್ಲರ ಚಿತ್ತವಿತ್ತು. ಆದರೆ ನಿನ್ನೆ ಅದನ್ನು ಅಗೆಯಲಾಗಿದ್ದು, ಅಲ್ಲಿಯೂ ಮಣ್ಣು ಬಿಟ್ಟರೆ ಬೇರೆನು ಕಂಡಿಲ್ಲ. GPR ಸಿಸ್ಟಮ್ ಮಾಡಿ, ಅಲ್ಲಿ ಉತ್ಖನನ ಮಾಡಿ ಆ ಸ್ಪಾಟ್ ತನಿಖೆ ನಡೆಸಬೇಕು ಅಂತ ಸುಮ್ಮನೆ ಆಗಿದ್ರು. ನಿನ್ನೆ ಆ ಕೆಲಸವೂ ಆಗಿದೆ. ಆದರೂ ಏನು ಸಿಕ್ಕಿಲ್ಲ.

ಆದರೆ 13ನೇ ಸ್ಪಾಟ್ ನಲ್ಲಿ ಮತ್ತೆ ಉತ್ಖನನ ಮಾಡಿವಂತೆ ಆ ಅನಾಮಿಕ ವ್ಯಕ್ತಿ‌ ಒತ್ತಡ ಹಾಕಿದ್ದು, ಮತ್ತೆ ಇಂದು ಕಾರ್ಯಾಚರಣೆ ನಡೆಯುತ್ತಿದೆ. ನಿನ್ನೆ ಅಗೆದ ಜಾಗದ ಅಕ್ಕಪಕ್ಕದ ಜಾಗದಲ್ಲಿಯೇ ಇಂದು ಕೂಡ ಹುಡುಕಾಟ ನಡೆಯುತ್ತಿದೆ. ಸದ್ಯ ಇಷ್ಟು ದಿನ ಅಗೆದ ಜಾಗದ ಪೈಕಿಯಲ್ಲಿ ಆರನೇ ಸ್ಪಾಟ್ ನಲ್ಲಿ ಬಿಟ್ಟರೆ ಬೇರೆಲ್ಲೂ ಸಿಕ್ಕಿಲ್ಲ.

ಈ ಸಂಬಂಧ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಕೂಡ ಮಾತನಾಡಿದ್ದಾರೆ. ಈ ಹದಿಮೂರನೇ ಸ್ಪಾಟ್ ಆದ ಬಳಿಕ ಮುಂದೆ ನೋಡಿ ತೀರ್ಮಾನ ಮಾಡೋಣಾ ಅಂತ ಹೇಳಿದ್ದಾರೆ. ಏನು ಸಿಗದೆ ಇದ್ದರೆ ಶೋಧಕಾರ್ಯವನ್ನ ನಿಲ್ಲಿಸುವ ಸಾಧ್ಯತೆಯು ಇದೆ. ಈ ವ್ಯಕ್ತಿ ತೋರಿಸಿದ ಎಲ್ಲಾ ಕಡೆಯಲ್ಲೂ ಆ ವ್ಯಕ್ತಿಯನ್ನ ಕರೆದುಕೊಂಡು ಹೋಗ್ತಾ ಇದ್ದೀವಿ, ಮಣ್ಣನ್ನ ಅಗೆಯುತ್ತಾ ಇದ್ದೀವಿ. ಆದರೂ ಏನು ಪ್ರಯೋಜನವಾಗಿಲ್ಲ ಎಂದಿದ್ದಾರೆ. 50% ಅವಶೇಷಗಳು ಸಿಕ್ಕಿದ್ದರೆ ಎಸ್ಐಟಿ ಅಧಿಕಾರಿಗಳು ಇನ್ನಷ್ಟು ಹೆಚ್ಚು ಗಮನ ಹರಿಸುತ್ತಿದ್ದರೇನೋ. ಅವಶೇಷಗಳು ಸಿಗದೆ ಹೋದರೆ ಬಹುಶಃ ಇವತ್ತಿಗೆ ಅಗೆಯುವ ಕೆಲಸ ನಿಲ್ಲಬಹುದು ಎಂದೇ ಊಹಿಸಲಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment