ರಾಯಚೂರು: ರಾಯರ 354ನೇ ಆರಾಧನಾ ಮಹೋತ್ಸವ ನಡೆಯುತ್ತಿದೆ. ಈ ಸುಸಂದರ್ಭದಲ್ಲಿ ಇಂದು ಮಠದಲ್ಲಿ ಮಧ್ಯರಾಧನೆ ನೆರವೇರಲಿದೆ. ಭಕ್ತ ಸಾಗರವೇ ಮಂತ್ರಾಲಯಕ್ಕೆ ಹರಿದು ಬಂದಿದೆ. ಇದರ ವಿಶೇಷತೆ ಏನು ಎಂಬುದನ್ನ ಪದ್ಮರಾಜ ಆಚಾರ ಮಂಚಾಲೆ ಅವರು ತಿಳಿಸಿದ್ದಾರೆ.
ಒಬ್ಬ ವ್ಯಕ್ತಿ ಮತ್ತೋರ್ವ ವ್ಯಕ್ತಿಯ ಮೇಲೆ ನಂಬಿಕೆ ಇದ್ದರೆ ಮಾತ್ರ ಸೇರುವಂತಾಗಿದೆ. ಇಂದು ಇಡೀ ಜಗತ್ತು ರಾಯರಿಗೆ ಶರಣಾಗತಿಯಾಗುತ್ತಿದೆ. ಇವತ್ತು 354ನೇ ಆರಾಧನಾ ಮಹೋತ್ಸವವಾಗಿದೆ. ಇವತ್ತು ಶರೀರವಾಗಿ ಬೃಂದಾವನ ಪ್ರವೇಶ ಮಾಡಿ 354 ವರ್ಷವಾಯ್ತು. ಶ್ರಾವಣ ಬಹುಳದಂದು ಬೃಂದಾವನ ಪ್ರವೇಶ ಮಾಡುವಂತಾಗಿದೆ. ರಾಯರು ವಿಶೇಷವಾಗಿ ರಾಮನನ್ನು ಪೂಜಿಸಿರುವಂತವರು. ಹೀಗಾಗಿ ಇವತ್ತಿಗೂ ಆ ಮೂಲ ರಾಮನ ಪೂಜೆ ಪರಂಪರೆಯಲ್ಲಿ ಬಂದಿದೆ. ಸುಬುದೇಂದ್ರ ತೀರ್ಥರು ಇವತ್ತಿಗೂ ಆ ಮೂಲ ರಾಮನ ಪೂಜೆ ಮಾಡ್ತಾರೆ. ಸುರಪಲಾಯದಂತೆ ಮಂತ್ರಾಲಯ. ಸ್ವರ್ಗವೂ ಯಾವ ರೀತಿಯಾಗಿರುತ್ತದೆಯೋ ಮಂತ್ರಾಲಯವೂ ಅದೇ ರೀತಿ ಆಗುತ್ತದೆ. ಅದೇ ರೀತಿ ರಾಯರ ಮಂತ್ರಾಲಯ ದಿನೇ ದಿನೇ ಅಭಿವೃದ್ಧಿಯಾಗುತ್ತಿದೆ ಎಂದಿದ್ದಾರೆ.
ಇನ್ನು ಇಂದು ಮಧ್ಯಾರಾಧನೆಯಾಗಿರುವ ಕಾರಣ ಬೃಂದಾವನಕ್ಕೆ ವಿಶೇಷ ಪೂಜೆ ಪುನಸ್ಕಾರಗಳನ್ನ ಮಾಡಿದ್ದು, ಹಾಲು, ಮೊಸರು, ತುಪ್ಪ, ಜೇನುತುಪ್ಪ, ಗೋಡಂಬಿ, ಒಣದ್ರಾಕ್ಷಿ ಸೇರಿದಂತೆ ವಿವಿಧ ಪದಾರ್ಥಗಳಿಂದ ಮಹಾಪಂಚಾಮೃತ ಅಭಿಷೇಕ ಮಾಡಲಾಗುತ್ತದೆ. ಪೀಠಾಧಿಪತಿ ಸುಬುದೇಂದ್ರ ತೀರ್ಥರಿಂದ ಬೃಂದಾವನಕ್ಕೆ ಅಭಿಷೇಕ ಮಾಡಲಾಗುತ್ತದೆ. ಪ್ರತಿವರ್ಷ ಕೂಡ ಈ ದಿನವನ್ನು ಮಧ್ಯಾರಾಧನೆ ಎಂದೇ ಆರಾಧಿಸಲಾಗುತ್ತದೆ. ಇಂದು ರಾಯರ ದರ್ಶನ ಮಾಡಿದರೆ ತುಂಬಾ ಒಳ್ಳೆಯದು ಎಂಬ ನಂಬಿಕೆ ಎಲ್ಲರಲ್ಲೂ ಇದೆ. ಹೀಗಾಗಿ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಇಂದು ರಾಯರ ಮಠಕ್ಕೆ ಭೇಟಿ ನೀಡಿದ್ದಾರೆ.


