Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

354 ಆರಾಧನಾ ಮಹೋತ್ಸವ : ರಾಯರಿಗಾಗಿ ತಿರುಮಲದಿಂದ ಬಂತು ಶೇಷವಸ್ತ್ರಗಳು

---Advertisement---

ರಾಯಚೂರು: ಮಂತ್ರಾಲಯದಲ್ಲಿ ರಾಯರ 354ನೇ ಆರಾಧನಾ ಮಹೋತ್ಸವ ಆರಂಭವಾಗಿದೆ. ಮಠದಲ್ಲಿ ಪೂರ್ವಾರಾಧನೆ ನೆರವೇರಿದೆ. ಈ ಹಿನ್ನೆಲೆ ಮಠದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ಕೂಡ ನೆರವೇರಿದೆ. ರಾಯರು ಸಶೀರರಾವಾಗಿ ವೃಂದಾವನಸ್ಥರಾದ ಮುನ್ನಾ ದಿನವನ್ನು ಪೂರ್ವಾರಾಧನೆ ಎಂದು ಆಚರಣೆ ಮಾಡಲಾಗುತ್ತದೆ. ಮಂತ್ರಾಲಯ ಮಾತ್ರವಲ್ಲ ಈ ದಿನವನ್ನು ಎಲ್ಲಾ ರಾಯರ ಮಠದಲ್ಲೂ ಆಚರಣೆ ಮಾಡಲಾಗುತ್ತದೆ.

ಈ ವಿಶೇಷ ದಿನದಂದು ತಮಿಳುನಾಡಿನ ಮುಜುರಾಯಿ ಇಲಾಲಕೆಯ ಅಧಿಕಾರಿಗಳು ಶ್ರೀರಂಗಂನ ಶ್ರೀರಂಗನಾಥ ದೇವಸ್ಥಾನ ಹಾಗೂ ಕುಂಬಕೋಣಂನ ಉಪ್ಪಲಿ ಅಪ್ಪನ್ ದೇಚಾಲಯದಿಂದ ರಾಯರಿಗೆ ವಸ್ತ್ರ ರೂಪದ ಪ್ರಸಾದ ಹಾಗೂ ತಿರುಪತಿ ತಿರುಮಲದಿಂದ ಬಂದ ಶೇಷವಸ್ತ್ರವನ್ನು ರಾಯರ ಬೃಂದಾವನಕ್ಕರ ಸಮರ್ಪಿಸಲಾಗಿದೆ. ಆ ನಂತರ ಶೇಷವಸ್ತ್ರವನ್ನು ರಾಯರ ಮೂಲ ಬೃಂದಾವನಕಗಕರ ಅರ್ಪಿಸಿ, ಪೂಜೆ ಸಲ್ಲಿಸಲಾಯಿತು. ಮಠದ ಪ್ರಾಂಗಣದಲ್ಲಿ ರಾಯರು ರಚಿಸಿರುವ ಪರಿಮಳ ಗ್ರಂಥವನ್ನು ಪಲ್ಲಕ್ಕಿಯಲ್ಲಿ ಇಟ್ಟು ಮಠದ ಪ್ರಾಂಗಣದಲ್ಲಿ ಪಲ್ಲಕ್ಕಿ ಉತ್ಸವ ನೆರವೇರಿಸಲಾಯಿತು.

 

ಮತ್ತೊಂದು ವಿಶೇಷ ಅಂದ್ರೆ ಮಠದಲ್ಲಿ ಮೊದಲ ಬಾರಿಗೆ ಪುಷ್ಕರಣಿ ನಿರ್ಮಾಣವಾಗಿದೆ. ಆ ಪುಷ್ಕರಣಿಯಲ್ಲಿ ರಾಯರ ತೇಪೋತ್ಸವ ನೆರವೇರಿದೆ. ಶ್ರೀ ಮಠದಲ್ಲಿ ಉತ್ಸವ ಮೆರವಣಿಗೆ ಮುಖಾಂತರ ಪುಷ್ಕರಣಿ ಬಳಿಗೆ ತೆರಳಿ ಉತ್ಸವ ರಾಯರಿಗೆ ತೇಪೋತ್ಸ, ದೀಪೋತ್ಸವಗಳನ್ನು ನೆರವೇರಿಸಲಾಯಿತು‌. ನಂತರ ಮಠದ ಪ್ರಕಾರದಲ್ಲಿ ಶಾಖೋತ್ಸವ ಹಾಗೂ ಸ್ವಸ್ತಿವಾಚನ ಮತ್ತು ರಥೋತ್ಸವವನ್ನು ಶ್ರೀಗಳು ನೆರವೇರಿಸಿಕೊಟ್ಟರು. ನೂತನವಾಗಿ ಪುಷ್ಕರಣಿ ಹಾಗೂ ಕವೀಂದ್ರ ತೀರ್ಥರು ಹಾಗೂ ವಾಗೀಶ್ ತೀರ್ಥರ ಹೆಸರಿನಲ್ಲಿ ನಿರ್ಮಿಸಿದ ವಸತಿ ಭವನಗಳನ್ನು ಪೀಠಾಧಿಪತಿ ಡಾ.ಸುಭುದೇಂದ್ರ ತೀರ್ಥ ಶ್ರೀಪಾದಂಗಳವರು ಉದ್ಘಾಟಿಸಿದರು. ಅಷ್ಟೇ ಅಲ್ಲ ಪುಷ್ಕರಣಿಯಲ್ಲಿ ನೀರು ಸಂಗ್ರಹಗೊಂಡ ನಂತರ ಸ್ವಾಮಿಗಳು ಈಜಾಡಿ ಎಲ್ಲರ ಗಮನ ಸೆಳೆದರು‌.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment